ಗ್ರಾಫಿಕ್ಸ್‌ ಡಿಸೈನಿಂಗ್‌ನಿಂದ ಉತ್ತಮ ಗಳಿಕೆ

Team Udayavani, Sep 25, 2019, 5:00 AM IST

ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಪಾರ್ಟ್‌ಟೈಮ್‌ ಕೆಲಸಗಳನ್ನು ಮಾಡುವುದು ಸಾಮಾನ್ಯ. ಇದಕ್ಕಾಗಿ ಅವರಲ್ಲಿ ಆಯ್ಕೆಗಳು ಹಲವಿರುತ್ತವೆ. ಟ್ಯುಟೋರಿಯಲ್‌, ರೆಸ್ಟೋರೆಂಟ್‌, ಕಾಫಿ ಡೇ ಹೀಗೆ ನಾನಾ ಕೆಲಸಗಳನ್ನು ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಆದಾಯದ ಮೂಲಗಳನ್ನಾಗಿ ಮಾಡಿಕೊಂಡು ಪಾಕೆಟ್‌ ಮನಿಗೆ ದಾರಿ ಮಾಡಿಕೊಳ್ಳುತ್ತಾರೆ.

ಇಂದು ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಇದೇ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಸಂಪಾದನೆಯ ಹಾದಿಯನ್ನು ಕಂಡುಕೊಳ್ಳಬಹುದು. ಹೌದು ಮನೆಯಲ್ಲೇ ಕೂತು ಆನ್‌ಲೈನ್‌ ಮೂಲಕ ಸಂಪಾದನೆ ಮಾಡಿಕೊಳ್ಳಬಹುದು. ಆನ್‌ಲೈನ್‌ ಟೀಚಿಂಗ್‌, ಬಟ್ಟೆ, ಡ್ರಾಯಿಂಗ್‌ ಮಾರಾಟ, ಅರ್ಜಿಗಳನ್ನು ಭರ್ತಿ ಮಾಡುವುದು ಹೀಗೆ ಅನೇಕ ಆನ್‌ಲೈನ್‌ ಪಾರ್ಟ್‌ಟೈಮ್‌ ಕೆಲಸಗಳು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿವೆ. ಇಂತಹ ಕೆಲಸಗಳಲ್ಲಿ ಒಂದು ಗ್ರಾಫಿಕ್‌ ಡಿಸೈನಿಂಗ್‌.

ಗ್ರಾಫಿಕ್ಸ್‌ ಡಿಸೈನರ್‌ ಕೈಚಳಕ‌ ಇಂದು ಎಲ್ಲ ಕಡೆಯಲ್ಲೂ ಇದೆ. ನಾವು ನೋಡುವ ವೆಬ್‌ಸೈಟ್‌, ಜಾಹೀರಾತು, ಸಿನೆಮಾ ಎಲ್ಲದರಲ್ಲೂ ಗ್ರಾಫಿಕ್ಸ್‌ ಡಿಸೈನ್‌ಗಳನ್ನು ಕಾಣಬಹುದು. ಗ್ರಾಫಿಕ್ಸ್‌ ಡಿಸೈನಿಂಗ್‌ ಬಗ್ಗೆ ಸಾಮಾನ್ಯ ಜ್ಞಾನ ನಿಮಗಿದ್ದರೆ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬಹುದು. ಇದಕ್ಕೆ ಬೇಕಾಗಿರುವುದು ಕಂಪ್ಯೂಟರ್‌, ವೈಫೈ ಕನೆಕ್ಷನ್‌ ಹಾಗೂ ಗ್ರಾಫಿಕ್ಸ್‌ ಡಿಸೈನಿಂಗ್‌ ಸಾಫ್ಟ್ವೇರ್‌ಗಳು. ಜಾಹೀರಾತು, ಮಾಧ್ಯಮ, ಕೈಗಾರಿಕಾ ವಿನ್ಯಾಸ, ಸಿನೆಮಾ ರಂಗ ಹೀಗೆ ಮೊದಲಾದ ಕ್ಷೇತ್ರಗಳಲ್ಲಿ ಗ್ರಾಫಿಕ್ಸ್‌ ಡಿಸೈನರ್‌ಗಳಿಗೆ ಉತ್ತಮ ಬೇಡಿಕೆ ಇದೆ. ಕಲಿಕೆ ಜತೆಗೆ ಗ್ರಾಫಿಕ್ಸ್‌ ಡಿಸೈನಿಂಗ್‌ ಅನ್ನು ಹಣದ ಮೂಲ ವನ್ನಾಗಿಸಿಕೊಳ್ಳಬಹುದು.

ಕ್ರಿಯಾಶೀಲತೆ ಮತ್ತು ಕಲ್ಮಾತಕ ಯೋಚನೆ ಇದ್ದರೆ ಗ್ರಾಫಿಕ್‌ ಡಿಸೈನಿಂಗ್‌ನಲ್ಲಿ ಹೇರಳವಾದ ಅವಕಾಶಗಳಿವೆ. ವಿದ್ಯಾರ್ಜನೆಯ ವೇಳೆ ಗ್ರಾಫಿಕ್‌ ಡಿಸೈನಿಂಗ್‌ ಬಗ್ಗೆ ಕಲಿತುಕೊಂಡಿದ್ದರೆ ಪಾರ್ಟ್‌ ಟೈಮ್‌ ಆಗಿ ಆನ್‌ಲೈನ್‌ ಗ್ರಾಫಿಕ್‌ ಡಿಸೈನರ್‌ ಆಗಿ ದುಡಿಯಬಹುದು. ಜಾಹೀರಾತು, ವೆಬ್‌ಸೈಟ್‌ಗಳಲ್ಲಿ ಗ್ರಾಫಿಕ್‌ ಡಿಸೈನರ್‌ಗಳ ಆವಶ್ಯಕತೆ ಅಧಿಕವಾಗಿದೆ. ಹೀಗಿರುವಾಗ ಅವರು ವಿದ್ಯಾರ್ಥಿಗಳ ಚಾಕಚಕ್ಯತೆಯನ್ನು ತಿಳಿಯುವ ಸಲುವಾಗಿ ವಿದ್ಯಾರ್ಥಿಗಳಿಗೆ ಗ್ರಾಫಿಕ್‌ ಡಿಸೈನರ್‌ಗಳಾಗಿ ದುಡಿಯಲು ಅವಕಾಶಗಳನ್ನು ನೀಡುತ್ತಾರೆ. ಇದರಿಂದ ಕಂಪೆನಿಗೂ ಲಾಭ, ವಿದ್ಯಾರ್ಥಿಗಳಿಗೂ ಅನುಕೂಲ.

ಫ‌ುಲ್‌ಟೈಮ್‌ನಲ್ಲೂ ಅವಕಾಶ
ಆನ್‌ಲೈನ್‌ ಮೂಲಕ ಪಾರ್ಟ್‌ ಟೈಮ್‌ ಗ್ರಾಫಿಕ್‌ ಡಿಸೈನರ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ನಿಮಗಿದ್ದರೆ ವಿದ್ಯಾರ್ಜನೆ ಮುಗಿದ ಬಳಿಕ ಈ ಕ್ಷೇತ್ರವನ್ನೇ ನೀವು ಫ‌ುಲ್‌ಟೈಮ್‌ ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲೇ ಪದವಿ ಮುಗಿಸಿದರೆ ಹಲವು ಉದ್ಯೋಗ ಅವಕಾಶಗಳಿವೆ. ವೀಡಿಯೋ ಎಡಿಟರ್‌, ಗ್ರಾಫಿಕ್‌ ಡಿಸೈನರ್‌, ಆನಿಮೇಟರ್‌, ವೆಬ್‌ ಡಿಸೈನರ್‌ ಹೀಗೆ ಹಲವು ಅವಕಾಶಗಳು ನಿಮಗಿದೆ.

ಅರ್ಹತೆ
ಕ್ರಿಯಾಶೀಲತೆ ಅಥವಾ ಸೃಜನ ಶೀಲತೆ ಈ ಕೆಲಸಕ್ಕೆ ಅಗತ್ಯ ವಾದದ್ದು. ಸಾಫ್ಟ್ವೇರ್‌, ಪ್ರೋಗ್ರಾಮಿಂಗ್‌ ಭಾಷೆಗಳ ಜ್ಞಾನ ಕೂಡ ಅಗತ್ಯವಾಗಿದೆ. ಉತ್ತಮ ಸಂವಹನ ಕಲೆ ಯನ್ನು ತಿಳಿದಿರಬೇಕು. ಬಣ್ಣಗಳ ಬಳಕೆಯ ಅರಿವು ಇರಬೇಕಾಗುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು...

  • ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ...

  • ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ...

  • ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಬದಲಾಗಿ ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯವಿದೆ. ಪಠ್ಯವನ್ನು ಸಂಪೂರ್ಣವಾಗಿ...

  • ಈಗಿನ ಸಂದರ್ಭದಲ್ಲಿ ನಮಗೆ ಬೇಕಾದ ಹಾಗೆ ಕೆಲಸ ಸಿಗುವುದು ಬಲು ಕಷ್ಟ. ಒಂದಿಷ್ಟೂ ಸಂಪಾದನೆ ಮಾಡಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆನ್ನುವುದು ಎಲ್ಲರಲ್ಲೂ ಇರುವಂತಹ...

ಹೊಸ ಸೇರ್ಪಡೆ