Udayavni Special

ಸಂಶೋಧನ ಕ್ಷೇತ್ರದಲ್ಲಿ ಅವಕಾಶಗಳು ಅಪಾರ 


Team Udayavani, Dec 12, 2018, 12:30 PM IST

12-december-8.gif

. ವಿಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ? ಇದರ ಸದ್ಬಳಕೆ ಹೇಗಿದೆ?
ವಿಜ್ಞಾನ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಈಗ ಅವಕಾಶಗಳು ಜಾಸ್ತಿ ಇವೆ. ಈ ಕ್ಷೇತ್ರದ ವ್ಯಾಪ್ತಿ ಅಗಾಧವಾಗಿರುವುದೇ ಇದಕ್ಕೆ ಕಾರಣ. ಒಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಇನ್ನೊಂದು ಕ್ಷೇತ್ರದಲ್ಲಿ ಅಷ್ಟೇ ಮಟ್ಟಿನ ಪರಿಣತಿ ಪಡೆಯುವ ಮತ್ತು ಸಂಶೋಧಾನಾತ್ಮಕವಾಗಿ ತೊಡಗಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಿವೆ.

. ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನ ಆಸಕ್ತಿ ಕಡಿಮೆಯಾಗಿದೆ ಎನಿಸುತ್ತಿಲ್ಲವೇ?
ಖಂಡಿತಾ ಇಲ್ಲ. ಆದರೆ ಸಂಶೋಧನೆ ಮಾಡಿದ ಮೇಲೆ ಮುಂದೇನು ಎಂಬ ಯೋಚನೆ ಇದೆ. ಈಗ ಸಂಶೋಧನೆ ಮಟ್ಟವೂ ಅಷ್ಟೇ ಎತ್ತರಕ್ಕೆ ಬೆಳೆದಿರುವುದರಿಂದ ಸ್ಪರ್ಧೆ ಮತ್ತು ಸವಾಲುಗಳು ಹೆಚ್ಚಿವೆ. ಅದಕ್ಕೆ ಬೇಕಾಗುವ ಯಂತ್ರ, ಅನುಕೂಲತೆಗಳನ್ನು ವಿಶ್ಲೇಷಿಸಿಕೊಂಡು ಮುಂದುವರಿಯಬೇಕಿದೆ.

. ಭಾರತದಲ್ಲಿ ಸಂಶೋಧನ ಕ್ಷೇತ್ರದಲ್ಲಿನ ಸವಾಲು- ಸಾಧ್ಯತೆಗಳೇನು?
ನಮ್ಮ ದೇಶದಲ್ಲಿ ಎಲ್ಲ ಸಂಶೋಧನೆಗಳಿಗೆ ಬೇಕಾದ ಪೂರಕ ವಾತಾವರಣ ಮೂಡಿಸಬೇಕಾದರೆ ವೆಚ್ಚವೂ ಹೆಚ್ಚು. ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶಗಳು ನಮ್ಮದೇ ದೇಶದಲ್ಲಿ ಸಿಗುತ್ತದೆ ಎಂಬುದೂ ಕಷ್ಟ. ಅದರಿಂದ ಅವರು ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದೆ. ಎಲ್ಲ ಉಪಕರಣಗಳು ನಮ್ಮಲ್ಲಿ ಇಲ್ಲದ ಕಾರಣ ಹೊಂದಿಸಿಕೊಳ್ಳಲು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮೇಕ್‌ ಇನ್‌ ಇಂಡಿಯಾ, ಇನ್‌ಕ್ಯುಬೇಶನ್‌ ಸೆಂಟರ್‌, ಇನ್‌ಸ್ಪೈರ್‌ ಅವಾರ್ಡ್‌ ಮುಂತಾದ ಯೋಜನೆಗಳು ಯಶಸ್ವಿಯಾದರೆ ನಮಗೆ ಬೇಕಾದ ಮಟ್ಟದ ವಿದ್ಯಾರ್ಥಿಗಳು ಮುಂದೆ ಸಿಗಬಹದು.

. ಅವಕಾಶಗಳ ಕೊರತೆಯಿಂದಾಗಿ ಸ್ವಂತ ಸಂಶೋಧನೆಗಿಂತ ಉದ್ಯೋಗದೆಡೆಗೆ ಒತ್ತು ಕೊಡುತ್ತಿದ್ದಾರೆ?
ಭಾರತೀಯ ವಿದ್ಯಾರ್ಥಿಗಳ ಮನೋಭಾವನೆ ಹೇಗಿರುತ್ತದೆ ಎಂದರೆ ಕಲಿಯುವುದು, ಪರಿಣತಿ ಪಡೆಯುವುದು, ಉದ್ಯೋಗ ಪಡೆಯುವುದು. ಅದರಿಂದಾಚೆಗಿನ ಹೊಸ ಸಾಧ್ಯತೆ, ಹೊಸ ಯೋಚನೆಗಳನ್ನು ಕಲಿಸುವಂತ ಪರಿಪಾಠ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಇಲ್ಲ. ಪಠ್ಯದಾಚೆಗಿನ ಹೊಸತನಗಳನ್ನು ಕಲಿಸುವ ಮನೋಭೂಮಿಕೆ ಶಿಕ್ಷಣ ವ್ಯವಸ್ಥೆಯಲ್ಲೇ ರೂಪುಗೊಳ್ಳಬೇಕು. ಆದರೂ ಹಠ, ಸವಾಲುಗಳೊಂದಿಗೆ ಸಂಶೋಧನೆಯಲ್ಲಿ ಪಳಗಿಕೊಂಡವರೂ ಸಾಕಷ್ಟಿದ್ದಾರೆ.

. ವಿಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಹೊಸಬರಿಗೆ ನಿಮ್ಮ ಸಲಹೆ?
ಬಾಹ್ಯಾಕಾಶ, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಸರಿಯಾಗಿ ಯೋಚಿಸಿ, ನಿರ್ಧರಿಸಿ. ಜತೆಗೆ ಬೇಕಾದ ಪೂರಕ ಪ್ರಯತ್ನ ಮಾಡಿ. ಯಾವ ಕ್ಷೇತ್ರ, ಯಾವ ಉದ್ಯೋಗ, ಯಾವ ಸಂಶೋಧನೆ ಅಂತ ನಿರ್ಧರಿಸಿ ಮುಂದೆ ಸಾಗಿ. ಜಗತ್ತಿನಲ್ಲೇ ನಾವು ಪ್ರಥಮ ಶ್ರೇಣಿಯಲ್ಲಿದ್ದೇವೆ ಅನ್ನಲು ಅಂತಹ ಪೂರಕ ವಾತಾವರಣ ರೂಪಿಸಬೇಕು. ಅದು ಯುವ ತಲೆಮಾರಿನಿಂದ ಸಾಧ್ಯ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸಟೇಬಲ್ ಅನ್ನೇ ಅಪಹರಿಸಿದ!

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸ್ ಟೇಬಲ್ ಅನ್ನೇ ಅಪಹರಿಸಿದ!

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ghfghftyyht

ಬಾಲಿವುಡ್ ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು ಮಂಜೂರು

ms dhoni and n srinivasan

ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ: ಶ್ರೀನಿವಾಸನ್

hjghjgjy

ಪ್ರಜ್ಞಾವಂತ ಮತದಾರರು ಬಿಜೆಪಿಯನ್ನೇ ಗೆಲ್ಲಿಸ್ತಾರೆ : ಸಚಿವ ಕೆ.ಸುಧಾಕರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

udayavani youtube

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

udayavani youtube

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

ಹೊಸ ಸೇರ್ಪಡೆ

davanagere news

ಮೋದಿ-ಬಿಎಸ್‌ವೈ ಶ್ರಮದಿಂದ ಕೊರೊನಾ ನಿಯಂತ್ರಣ

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

thumakuru news

ಗರಡಿ ಮನೆ ಉಳಿವಿಗೆ ಬೇಕು ಮೂಲಸೌಕರ್ಯ

ಪಿಂಚಣಿ ನೌಕರರ ಮೂಲಭೂತ ಹಕ್ಕು: ಹನುಮಂತಪ್ಪ

ಪಿಂಚಣಿ ನೌಕರರ ಮೂಲಭೂತ ಹಕ್ಕು: ಹನುಮಂತಪ್ಪ

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿ ಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.