ಮಾನವ ಸಂಪನ್ಮೂಲ ಪದವಿಗೆ ಹೆಚ್ಚಿದ ಬೇಡಿಕೆ

Team Udayavani, Dec 4, 2019, 4:16 AM IST

ಈಗ ಮಾನವ ಸಂಪನ್ಮೂಲ (ಎಚ್‌ಆರ್‌) ಪದವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಯುವ ಜನತೆಯ ನೆಚ್ಚಿನ ಉದ್ಯೋಗಗಳಲ್ಲಿ ಒಂದಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಕ್ರಿಯಾಶೀಲವಾಗಿ ಕಾರ್ಯ ಪ್ರವೃತ್ತರಾಗಬೇಕಿರುವುದು ಈ ಉದ್ಯೋಗದ ಆವಶ್ಯಕತೆ. ಉತ್ತಮ ಸಂವಹನ ಕಲೆಯೂ ಅಗತ್ಯ. ಹೀಗೆ ಮಾನವ ಸಂಪನ್ಮೂಲ ಕೋರ್ಸ್‌ ಬಗೆಗಿನ ವಿವರ ಇಲ್ಲಿದೆ.

ಪ್ರಸ್ತುತ ಪ್ರತಿಯೊಂದು ಕಂಪೆನಿಗೂ ಮಾನವ ಸಂಪನ್ಮೂಲ ಅಧಿಕಾರಿಗಳ ನೇಮಕ ಕಡ್ಡಾಯವಾಗಿದೆ. ಇವರು ಕಂಪೆನಿಗಳ ಆಡಳಿತಾತ್ಮಕ ಕಾರ್ಯಗಳನ್ನು ನಿರ್ದೇಶಿಸುವ, ನೌಕರರೊಂದಿಗಿನ ಸಂಬಂಧವನ್ನು ಮೇಲ್ವಿಚಾರಣೆ ಮಾಡುವ, ವೇತನದಾರರ ತರಬೇತಿ, ಉದ್ಯೋಗಿ-ಸಂಬಂಧಿತ ಸೇವೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಕಂಪೆನಿ ಓರ್ವ ಎಚ್‌ಆರ್‌ ಅನ್ನು ನೇಮಕ ಮಾಡಿದರೆ ಅನಂತರ ಆ ಕಂಪೆನಿಗೆ ನೂತನ ಉದ್ಯೋಗಿಗಳ ನೇಮಕ ಕೆಲಸ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರುತ್ತದೆ. ಮಾನವ ಸಂಪನ್ಮೂಲ ಅಧಿಕಾರಿ ಸಂಸ್ಥೆಯ ನೌಕರರ ಮೌಲ್ಯವನ್ನು ಗರಿಷ್ಠಗೊಳಿಸುವ ಮಾರ್ಗಗಳನ್ನು ಗುರುತಿಸುತ್ತಾರೆ ಮತ್ತು ಅವುಗಳನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ನೌಕರರ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಇವರು ಮಾಡುತ್ತಾರೆ.

ಮಾನವ ಸಂಪನ್ಮೂಲ ಅಧಿಕಾರಿ ಕಾರ್ಯ
ಮಾನವ ಸಂಪನ್ಮೂಲ ಅಧಿಕಾರಿಗಳು ನೇಮಕಾತಿ, ಸಂದರ್ಶನ ಮತ್ತು ಹೊಸ ಉದ್ಯೋಗಿಗಳ ನೇಮಕಾತಿ, ಕಾರ್ಯತಂತ್ರದ ಯೋಜನೆ ಬಗ್ಗೆ ಹಿರಿಯ ನಿರ್ವಾಹಕರೊಂದಿಗೆ ಸಮಾಲೋಚನೆ ನಡೆಸಿ ಸಂಸ್ಥೆಯ ನಿರ್ವಹಣೆ ಮತ್ತು ಅದರ ಉದ್ಯೋಗಿಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ತನ್ನ ಉದ್ಯೋಗಿಗಳ ಪ್ರತಿಭೆಯನ್ನು ಉತ್ತಮವಾಗಿ ಬಳಸಿಕೊಳ್ಳಲು ಸಂಸ್ಥೆಯ ಕಾರ್ಯಪಡೆಗಳನ್ನು ಯೋಜಿಸಿ ಮತ್ತು ಸಂಯೋಜಿಸುವುದು ಅವರ ಕರ್ತವ್ಯ. ಸಂಸ್ಥೆಯ ನಿರ್ವಹಣೆಯನ್ನು ಅದರ ಉದ್ಯೋಗಿಗಳಿಗೆ ಮನದಟ್ಟು ಮಾಡುವುದು, ತಜ್ಞರು ಮತ್ತು ಸಹಾಯಕ ಸಿಬಂದಿ ಕೆಲಸವನ್ನು ಸಂಯೋಜಿಸಿ ಮತ್ತು ಮೇಲ್ವಿಚಾರಣೆ ಮಾಡುವುದು, ಸಂಘರ್ಷ ಪರಿಹಾರ ಮತ್ತು ಶಿಸ್ತಿನ ಕಾರ್ಯ ವಿಧಾನಗಳಂತಹ ಸಿಬಂದಿ ಸಮಸ್ಯೆಗಳನ್ನು ಬಗೆಹರಿಸುವುದು, ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಎಲ್ಲ ಅಂಶಗಳನ್ನು ನೋಡಿಕೊಳ್ಳುತ್ತಾರೆ.

ಮಾನವ ಸಂಪನ್ಮೂಲ ಕೋರ್ಸ್‌ಗಳಿಗೆ ಹೆಚ್ಚಿದ ಬೇಡಿಕೆ
ಮಾನವ ಸಂಪನ್ಮೂಲ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದು ಬಹುಜನರ ಇಚ್ಛೆ. ಆದರೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆಯದ ಕಾರಣದಿಂದ ನಮ್ಮ ನೆಚ್ಚಿನ ಆಯ್ಕೆಗಳು ಬದಲಾಗುತ್ತವೆ. ಹಾಗಾಗಿ ಮಾನವ ಸಂಪನ್ಮೂಲ ಅಧಿಕಾರಿಯಾಗಲು ಪದವಿಯನ್ನು ಪಡೆಯುವುದು ಕಡ್ಡಾಯ. ಉದಾಹರಣೆಗೆ ಬ್ಯಾಚುಲರ್‌ ಆಫ್‌ ಸೈನ್ಸ್‌ ಇನ್‌ ಹ್ಯೂಮನ್‌ ರಿಸೋರ್ಸ್‌ ಅಥವಾ ಬಿಎಸ್ಸಿ ಇನ್‌ ಹ್ಯೂಮನ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ನಂತಹ ವಿಷಯಗಳಲ್ಲಿ ಪದವಿ ಪಡೆದುಕೊಳ್ಳಬೇಕಾಗುತ್ತದೆ. ಆ ಅವಧಿಯಲ್ಲೇ ಇಂಟರ್ನ್ಶಿಪ್‌ಗ್ಳನ್ನು ಮಾಡಿ ಅನುಭವ ಪಡೆದುಕೊಳ್ಳುವುದು ಉತ್ತಮ. ಆ ಬಳಿಕ ಅದೇ ಕೋರ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದು.

ಮಾನವ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪದವಿಯೊಂದಿಗೆ ಎಚ್‌ಆರ್‌ ವಿಷಯಗಳಿಗೆ ಸಂಬಂಧಿಸಿದ ಸೆಮಿನಾರ್‌, ಕಾರ್ಯಾಗಾರಗಳ ಜತೆಗೆ ಮಾನವ ಸಂಪನ್ಮೂಲಗಳಲ್ಲಿ ಡಿಪ್ಲೊಮಾ ಮತ್ತು ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವುದು ಒಳ್ಳೆಯದು. ಇದು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಹಕಾರಿ. ಅಧ್ಯಯನಗಳ ಪ್ರಕಾರ ಎಲ್ಲ ಮಾನವ ಸಂಪನ್ಮೂಲ ಸ್ಥಾನಗಳ ಉದ್ಯೋಗ ಅವಕಾಶಗಳು ಮುಂಬರುವ ವರ್ಷಗಳಲ್ಲಿ ಸರಾಸರಿಗಿಂತ ವೇಗವಾಗಿ ಬೆಳೆಯುವ ನಿರೀಕ್ಷೆ ಇದೆ. ಅದಕ್ಕಾಗಿ ಅರ್ಹ ಪದವಿಗಳನ್ನು ಪಡೆದು ಅದಕ್ಕೆ ಪೂರಕವಾದ ಕೋರ್ಸ್‌ಗಳನ್ನು ಮಾಡಿ ಉದ್ಯೋಗಕ್ಕೆ ಪ್ರಯತ್ನಿಸಬಹುದು.

ಉತ್ತಮ ಸಂವಹನ ಪ್ರಮುಖ ಮಾನದಂಡ
ಉತ್ತಮ ಮಾನವ ಸಂಪನ್ಮೂಲ ಅಧಿಕಾರಿ ಯಾಗಲು ಪದವಿಯ ಜತೆಗೆ ಉತ್ತಮ ಸಂವಹನ ಕಲೆ ಮೈಗೂಡಿಸಿಕೊಳ್ಳುವುದು ಅವಶ್ಯ. ಸಿಬಂದಿ ಹಾಗೂ ಕಂಪೆನಿಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುವ ಎಚ್‌ಆರ್‌ ಇಬ್ಬರ ನಡುವಿನ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ನಡುವೆ ಕಂಪೆನಿಯ ಅಭಿವೃದ್ಧಿಯ ಬಗ್ಗೆಯೂ ಗಮನ ನೀಡಬೇಕಾಗಿರುವುದರಿಂದ ಮಾನವ ಸಂಪನ್ಮೂಲ ಅಧಿಕಾರಿ ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ.

ಅನುಭವ ಪಡೆದುಕೊಳ್ಳಿ
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ನಮ್ಮ ವರ್ತನೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ರೀತಿ ಕೆಲಸ ಮಾಡುತ್ತೇವೆ, ಇತರ ಸಿಬಂದಿಗಳೊಂದಿಗೆ ನಿಮ್ಮ ಒಡನಾಟ, ಜನರೊಂದಿಗೆ ಯಾವ ರೀತಿಯ ಬಾಂಧವ್ಯ ಇರಿಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ಇತರ ಉದ್ಯೋಗಗಳಂತೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವುದು ಮುಖ್ಯವಲ್ಲ. ಸಂವಹನ ಪ್ರಮುಖವಾಗಿರುತ್ತದೆ. ಶಿಕ್ಷಣ ಮುಗಿದ ಕೂಡಲೇ ಚಿಕ್ಕ ಕಂಪೆನಿಯಾದರೂ ಸರಿ. ಅಲ್ಲಿ ಕೆಲಸ ಮಾಡಿ ಅನುಭವಗಳನ್ನು ಪಡೆದುಕೊಳ್ಳಬೇಕು. ಅದು ಮುಂದಿನ ನಿಮ್ಮ ಔದ್ಯೋಗಿಕ ಭವಿಷ್ಯಕ್ಕೆ ಸಹಕಾರಿಯಾಗಲಿದೆ.

ಉತ್ತಮ ಉದ್ಯೋಗಾವಕಾಶ
ಮಾನವ ಸಂಪನ್ಮೂಲ ವಿಷಯದಲ್ಲಿ ಅನೇಕ ವಿಭಾಗಗಳಿವೆ. ಅದಕ್ಕೆ ತಕ್ಕುದಾದ ಕೋರ್ಸ್‌ಗಳನ್ನು ಮಾಡಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಮುಂದಿನ ದಿನಗಳಲ್ಲಿ ಎಚ್‌ಆರ್‌ಗಳ ಆವಶ್ಯಕತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
– ರವೀಶ್‌ ಬಂಗೇರ, ಶಿಕ್ಷಣ ತಜ್ಞ

-  ಪ್ರಜ್ಞಾ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ