ಜಿಮ್‌ ಟ್ರೈನರ್‌ ಅವಕಾಶದ ಜತೆಗೆ ಉದ್ಯೋಗ

Team Udayavani, Oct 23, 2019, 4:44 AM IST

t-4

ಸಾಂದರ್ಭಿಕ ಚಿತ್ರ

ಓದಿನ ಜತೆ-ಜತೆಗೆ ಅರೆಕಾಲಿಕ ಉದ್ಯೋಗವನ್ನು ಗಳಿಸಬೇಕು ಎಂದು ವಿದ್ಯಾರ್ಥಿಗಳ ತುಡಿತ ಇದ್ದೇ ಇರುತ್ತದೆ. ಅಂಥಹ ಆ ಹಲವು ಅವಕಾಶಗಳಲ್ಲಿ ಇಂದು ಜಿಮ್‌ ಟ್ರೈನರ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಕಾಣಬಹುದಾಗಿದೆ. ಜಿಮ್‌ ಟ್ರೈನರ್‌ ಆಗಲು ಯಾವುದೇ ಸಿದ್ಧ ಮಾದರಿಯ ಶಿಕ್ಷಣ ಕೋರ್ಸ್‌ಗಳೇನೂ ಇಲ್ಲ ಆದರೆ ಪರಿಶ್ರಮ ಮತ್ತು ಕಲಿಕೆಯೊಂದಿಗೆ ಅನುಭವ ಸೇರಿದರೆ ನಮ್ಮೊಳಗೊಬ್ಬ ಜಿಮ್‌ ಟ್ರೈನರ್‌ ಉದ್ಭವಿಸುತ್ತಾನೆ.

ಹಲವು ಅವಕಾಶಗಳು
ಜಿಮ್‌ ಟ್ರೈನರ್‌ ಇದು ಪೂರ್ಣಕಾಲಿಕ ಹುದ್ದೆಯೂ ಹೌದು, ಅರೆಕಾಲಿಕ ಹುದ್ದೆಯೂ ಆಗಿದೆ. ವ್ಯಾಸಂಗ ಮಾಡುತ್ತ ಕೂಡ ನಾವು ಜಿಮ್‌ ಟ್ರೈನರ್‌ ಆಗಬಹುದು. ಇದರಿಂದ ನಮ್ಮದೇ ಆದ ಪ್ರತ್ಯೇಕವಾದ ಜಿಮ್‌ ಸೆಂಟರ್‌ನ್ನು ಹೊಂದಿ ಸ್ವಂತ ಉದ್ಯೋಗವನ್ನು ನಾವು ಗಳಿಸಿಕೊಳ್ಳಬಹುದಾಗಿದೆ. ಇದು ಒಂದು ಮಾದರಿಯಾದರೂ ಇನ್ನು ಬೇರೆಯವರ ಜಿಮ್‌ನಲ್ಲಿ ಟ್ರೈನರ್‌ ಆಗಿ ನಾವು ಕೆಲಸ ನಿರ್ವಹಿಸಬಹುದು. ಬಹುತೇಕ ಜಿಮ್‌ ವ್ಯಾಯಾಮ ಹವ್ಯಾಸಿಗಳು ಹೆಚ್ಚಿನ ಸಮಯ ಬೆಳಗ್ಗೆ ಮತ್ತು ಸಂಜೆ ಬರುವುದರಿಂದ ಓದುವ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ತಮ್ಮ ಕಾಲೇಜು ಸಮಯವನ್ನು ಹೊರತುಪಡಿಸಿ ಜಿಮ್‌ನಲ್ಲಿ ಕೆಲಸ ನಿರ್ವಹಿಸಬಹುದು. ಇದು ಕೂಡ ಒಳ್ಳೆಯ ಆದಾಯದ ಉದ್ಯೋಗವಾಗಿದೆ ಎಂಬುದು ಜಿಮ್‌ ಟ್ರೈನರ್‌ಗಳ ಅಭಿಪ್ರಾಯ.

ಅನುಭವ ಮುಖ್ಯ
ಜಿಮ್‌ ಟ್ರೈನರ್‌ ಆಗಲು ಮುಖ್ಯವಾದ ಅರ್ಹತೆ ಎಂದರೆ ಅದು ಜಿಮ್‌ ಅಂಗಣದಲ್ಲಿನ ಅನುಭವ. ಜಿಮ್‌ ಟ್ರೈನರ್‌ಗಳಿರಬೇಕಾದ ಇದು ಮೊದಲನೇ ಮತ್ತು ಕೊನೆಯ ಅರ್ಹತೆಯಾಗಿದೆ. ಏಕೆಂದರೆ ದೇಹ ದಂಡನೆ ಮಾಡುವಾಗ ಹಲವು ಸೂಚನೆ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕಾದ ಕಾರಣದಿಂದಾಗಿ ಅಗತ್ಯವಾಗಿ ಜಿಮ್‌ ಟ್ರೈನರ್‌ಗಳಿಗೆ ಜಿಮ್‌ ಅಂಗಣದ ಎಲ್ಲ ನುರಿತ ಅನುಭವ ಮುಖ್ಯವಾಗಿ ಬೇಕಾಗಿರುತ್ತದೆ. ಇಲ್ಲವಾದರೆ ಮುಂದೆ ಎರಗುವ ಅಪಾಯಗಳಿಗೆ ಮುಖ್ಯ ಕಾರಣರು ನಾವು ಆಗಿರಬೇಕಾಗುತ್ತದೆ. ಅದಕ್ಕಾಗಿ ಏನಿಲ್ಲವಾದರೂ ಕನಿಷ್ಠ ಸುಮಾರು 2-3 ವರ್ಷವಾದರೂ ಜಿಮ್‌ ಅಂಗಣದ ಅನುಭವ ಇರಲೇಬೇಕಾಗುತ್ತದೆ.

ಹೆಚ್ಚಿನ ಬೇಡಿಕೆ
ಜಿಮ್‌ ಸೆಂಟರ್‌ಗಳಲ್ಲಿ ಹೆಚ್ಚಿನ ಜಿಮ್‌ ಟ್ರೈನರ್‌ಗಳಿಗೆ ಬೇಡಿಕೆ ಸದ್ಯಮಟ್ಟದಲ್ಲಿ ಹೆಚ್ಚಿದೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜತೆಗೆ ಕಟ್ಟುಮಸ್ತಾದ ದೇಹವನ್ನು ಬೆಳೆಸಿಕೊಳ್ಳಬೇಕು ಎಂದು ಬಹುತೇಕರು ಜಿಮ್‌ ಸೆಂಟರ್‌ಗಳ ಬಾಗಿಲು ತಟ್ಟುತ್ತಿದ್ದಾರೆ. ಇಂತಿಷ್ಟು ತಿಂಗಳಿಗೆ ಎಂದೂ ಗರಿಷ್ಠ ಫೀ ನೀಡುತ್ತಿದ್ದಾರೆ ಹಾಗಾಗಿ ಜಿಮ್‌ ಟ್ರೈನರ್‌ಗಳಿಗೆ ಬೇಡಿಕೆ ಇರುವುದರಿಂದಾಗಿ ಇಂತಹ ಉದ್ಯೋಗ ಪಡೆಯುವ ಯುವಕರು ಜಿಮ್‌ ಟ್ರೈನರ್‌ ಆದರೆ ಓದಿನ ಜತೆ-ಜತೆಗೆ ಒಳ್ಳೆಯ ಆದಾಯವನ್ನು ಕೂಡ ಗಳಿಸಬಹುದು.

ಶ್ರದ್ಧೆ, ಪರಿಶ್ರಮ ಅಗತ್ಯ
ಜಿಮ್‌ ಟ್ರೈನರ್‌ ಆಗಲು ಯಾವುದೇ ಪದವಿಗಳಿರುವುದಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ದೇಹ ದಂಡನೆ ವ್ಯಾಯಾಮಗಳನ್ನು ಕಲಿತರೆ ನಾವು ಕೂಡ ಕಡಿಮೆ ಅವಧಿಯಲ್ಲಿ ಜಿಮ್‌ ಟ್ರೈನರ್‌ ಆಗಬಹುದು.

- ಅಭಿನವ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.