ಹವ್ಯಾಸವನ್ನೇ ವೃತ್ತಿಯಾಗಿಸಿ

Team Udayavani, Jul 10, 2019, 5:00 AM IST

ವಿದ್ಯಾರ್ಥಿಯಾಗಿದ್ದಾಗ ಪಠ್ಯದೊಂದಿಗೆ ಇನ್ನಿತರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದು ಸಾಮಾನ್ಯ. ಸಂಗೀತ, ನೃತ್ಯ, ಡ್ರಾಯಿಂಗ್‌ ಹೀಗೆ ಹಲವಾರು ಕಲಾ ವಿಷಯಗಳನ್ನು ಅಭ್ಯಸಿಸುತ್ತೇವೆ. ಆದರೆ ವೃತ್ತಿಯ ವಿಷಯ ಬಂದಾಗ ಅಲ್ಲಿ ಹವ್ಯಾಸಗಳಿಗೆ ಜಾಗವಿರುವುದಿಲ್ಲ. ಬದಲಾಗಿ ಎಂಜಿನಿಯರಿಂಗ್‌, ಡಾಕ್ಟರ್‌ ಹೀಗೆ ಬಹು ಬೇಡಿಕೆಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

ವಿದ್ಯಾರ್ಥಿಯಾಗಿದ್ದಾಗ ಪದವಿ, ಅಂಕಗಳನ್ನು ಪಡೆಯುವ ಓಡಾಟದಲ್ಲಿ ತಮ್ಮ ನೆಚ್ಚಿನ ಪ್ರವೃತ್ತಿಗಾಗಿ ಸಮಯ ನೀಡಲಾಗುವುದಿಲ್ಲ. ಪೋಷಕರ, ಶಿಕ್ಷಕರ ಒತ್ತಡ, ಉತ್ತಮ ವೇತನದ ಉದ್ಯೋಗ, ಶಿಕ್ಷಣಕ್ಕೆ ತಕ್ಕದಾದ ಅವಕಾಶಗಳ ನಡುವೆ ಹವ್ಯಾಸವನ್ನು ವೃತ್ತಿಯಾಗಿಸಲು ಬಹುತೇಕ ಮಂದಿ ಯೋಚಿಸುವುದಿಲ್ಲ. ಹವ್ಯಾಸಗಳ ಬಗ್ಗೆ ಒಲವಿದ್ದರೂ ಜೀವನ ಸಾಗಿಸುವ ದೃಷ್ಟಿಯಲ್ಲಿ ಅವುಗಳನ್ನು ಅಲ್ಲೇ ಬಿಟ್ಟು ಇಷ್ಟವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ಹೆಚ್ಚು. ಆದರೆ ಹವ್ಯಾಸದ ಹಿಂದೆ ಓಡಿದವರಿಗೆ ಅದೇ ಬದುಕು ಕೊಟ್ಟ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.

ಒಬ್ಬ ವ್ಯಕ್ತಿ ವೈದ್ಯಕೀಯ ವ್ಯಾಸಂಗ ಮಾಡಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇರಬಹುದು. ಅದನ್ನು ಮುಂದುವರಿಸಲು ಸಮಯದ ಅಭಾವ, ಇತರ ಒತ್ತಡಗಳಿರಬಹುದು. ಆದರೆ ಇವೆಲ್ಲದರ ನಡುವೆಯೂ ವೃತ್ತಿಯನ್ನು ತೊರೆದು ಹವ್ಯಾಸವನ್ನೇ ಮುಖ್ಯ ವೃತ್ತಿಯಾಗಿ ಬದುಕು ಕಟ್ಟಿಕೊಂಡ ಅದೆಷ್ಟೋ ಮಂದಿ ಇದ್ದಾರೆ. ಇದಕ್ಕೆ ಪೂರಕವಾಗಿ ತರಬೇತಿಗಳನ್ನು ನೀಡಲು ಸರಿಯಾದ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಆಸಕ್ತಿಗೆ ಅನುಗುಣವಾದ ಕಲಿಕೆಗೆ ಅವಕಾಶ
ಚಿಕ್ಕಂದಿನಿಂದಲೇ ಆಸಕ್ತಿ ಇರುವ ಕಲೆಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಬಗ್ಗೆ ಆಸಕ್ತಿ ಕುಂದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆರ್ಟ್‌ ಸ್ಕೂಲ್‌ಗ‌ಳಿಗೆ ತೆರಳಿ ತಮಗೆ ಇಷ್ಟವಾದ ಕಲೆಯ ಬಗ್ಗೆ ಪರಿಣತಿ ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಪೈಂಟಿಂಗ್‌, ಗƒಹೋಪಯೋಗಿ, ಅಲಂಕಾರಿಕ ವಸ್ತುಗಳನ್ನು ನಿರ್ಮಾಣ, ಹಾಡುವುದು, ನೃತ್ಯ, ಸಂಗೀತ ವಾದ್ಯೋಪಕರಣಗಳ ಬಳಕೆ ಮೊದಲಾದವುಗಳಿಗೆ ಅದಕ್ಕೆ ತಕ್ಕದಾದ ಆರ್ಟ್‌ ಸ್ಕೂಲ್‌ಗ‌ಳಿಗೆ ತೆರಳಿ ಸಂಬಂಧಪಟ್ಟ ವಿಷಯದಲ್ಲಿ ಪಕ್ವತೆಯನ್ನು ಪಡೆದುಕೊಳ್ಳಬಹುದಾಗಿದೆ.

ವಿವಿಧ ಆರ್ಟ್‌ ಕೋರ್ಸ್‌ಗಳು
ಗಾಜು, ಮರಗಳು, ಬಣ್ಣಗಳನ್ನು ಬಳಸಿ ಆಲಂಕಾರಿಕ ಪ್ರದರ್ಶನದ ವಸ್ತುಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸುವ ಮಂದಿಯೇ ಸೆರಾಮಿಕ್‌ ಆರ್ಟಿಸ್ಟ್‌ಗಳು. ನಿತ್ಯೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಗೋಡೆಯ ಅಲಂಕಾರ, ಗƒಹಾಲಂಕಾರ, ಮಕ್ಕಳ ಆಟಿಕೆ ಇತ್ಯಾದಿಯಾಗಿ ಅನೇಕ ವಸ್ತುಗಳನ್ನು ತಯಾರಿಸುವವರು ಸೆರಾಮಿಕ್‌ ಕಲಾವಿದರು. ಇದಕ್ಕಾಗಿ ಯಾವುದೇ ವಿಷಯದಲ್ಲಿ ಪಿಯುಸಿ ಓದಿನ ಬಳಿಕ ಪದವಿಯಲ್ಲಿ ಬ್ಯಾಚುಲರ್‌ ಆಫ್‌ ಫೆ„ನ್‌ ಆರ್ಟ್‌, ಸೆರಾಮಿಕ್‌ ಆರ್ಟ್‌ ಟ್ರೈನಿಂಗ್‌ ಪಡೆದು ಸೆರಾಮಿಕ್‌ ಆರ್ಟಿಸ್ಟ್‌ ಆಗಬಹುದು. ಅಲ್ಲದೆ ಪಿಯುಸಿ ಬಳಿಕ ಸೆರಾಮಿಕ್‌ ಸ್ಟುಡಿಯೋದಲ್ಲಿ ಅಪ್ರಂಟಿಸ್‌ ಆಗಿ ಕಾರ್ಯ ನಿರ್ವಹಿಸಿ ಸೆರಾಮಿಕ್‌ ಅರ್ಟಿಸ್ಟ್‌ ಆಗಬಹುದು.

ಇಂಟೀರಿಯರ್‌ ಡಿಸೈನಿಂಗ್‌
ಒಂದು ವರ್ಷದ ಈ ಕೋರ್ಸ್‌ ಪಿಯುಸಿಯನ್ನು ಕಲಾ ವಿಭಾಗದಲ್ಲಿ ಉತ್ತೀರ್ಣರಾದವರು ಇಂಟೀರಿಯರ್‌ ಡಿಸೆ„ನಿಂಗ್‌ ಮಾಡಬಹುದು. ಜತೆಗೆ ಇತರ ವಿಭಾಗದಲ್ಲಿ ಪಿಯುಸಿ ಮುಗಿಸಿದವರು, ಡಿಸೆ„ನಿಂಗ್‌ ಬಗ್ಗೆ ಆಸಕ್ತಿ ಇದ್ದರೆ ಮಾಡ ಬಹುದು. ಇಲ್ಲಿ ಮುಖ್ಯವಾಗಿ ಲೆ„ಟಿಂಗ್‌, ಡಿಸೆ„ನ್‌, ಕನ್‌ಸ್ಟ್ರಕ್ಷನ್‌, ಆರ್ಟ್‌ ಆಂಡ್‌ ಗ್ರಾಫಿಕ್ಸ್‌ ವಿಷಯಗಳ ಬಗ್ಗೆ ಕಲಿಸಲಾಗುತ್ತದೆ. ಕೋರ್ಸ್‌ ಮುಗಿದ ಬಳಿಕ ಅಸಿಸ್ಟೆಂಟ್‌ ಮ್ಯಾನೇಜರ್‌, ಇಂಟೀರಿಯರ್‌ ಡಿಸೆ„ನರ್‌, ಡ್ರಾಫ್ಟನ್‌, ಡಿಸೆ„ನ್‌ ಕೋಆರ್ಡಿನೇಟರ್‌, ಆರ್ಕಿಟೆಕ್ಟ್ ಆಂಡ್‌ ಇಂಟೀರಿಯರ್‌ ಡಿಸೆ„ನರ್‌, ಬಿಸ್ನೆಸ್‌ ಹೆಡ್‌, ಇಂಟೀರಿಯರ್‌ ಲೆ„ಟಿಂಗ್‌ ಡಿಸೆ„ನರ್‌ ಇತ್ಯಾದಿ ಕೆಲಸ ಮಾಡಬಹುದು.

ಸಂಗೀತ , ನೃತ್ಯ ಕೋರ್ಸ್‌ಗಳು, ನಿರೂಪಣೆ ಕೋರ್ಸ್‌ಗಳು, ವಯಲಿನ್‌ ಕೋರ್ಸ್‌, ಗೀಟರ್‌ ಕೋರ್ಸ್‌ ಹೀಗೆ ಹತ್ತು ಹಲವು ಕೋರ್ಸ್‌ ಗಳನ್ನು ಮಾಡಿದ್ದಲ್ಲಿ ತಮಗೆ ಆಸಕ್ತಿ ಯುತವಾದ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬಹುದು.

ಹವ್ಯಾಸವನ್ನೇ ವೃತ್ತಿಯಾಗಿಸಿ..
ವೃತ್ತಿಯ ಜತೆಗೆ ಹವ್ಯಾಸವಾಗಿ ಬೆಳೆಸಿಕೊಂಡ ಕಲೆಗಳಿಗೆ ಜೀವ ತುಂಬಲು ಆವಶ್ಯಕ ಕೋರ್ಸ್‌ ಗಳಿಗೆ ಸೇರಿಕೊಂಡು ಅದನ್ನೇ ಪ್ರವೃತ್ತಿಯಾಗಿಸಿಕೊಂಡವರು ಅನೇಕ ಮಂದಿ ಇದ್ದಾರೆ. ಪೈಂಟಿಂಗ್‌ ಬಗ್ಗೆ ಒಲವು ಇದ್ದವರು ಕೊಂಚ ಮಟ್ಟಿನ ತರಬೇತಿಯನ್ನು ಪಡೆದುಕೊಂಡು ಬಳಿಕ ಅದನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಳ್ಳಬಹುದು. ಇತ್ತೀಚೆಗೆ ಮನೆ ಅಲಂಕಾರ, ಪೈಂಟಿಂಗ್‌ ಬಗ್ಗೆ ಹೆಚ್ಚು ಆಸಕ್ತಿ ಇರು ವವರು ಇರುವುದರಿಂದ ಅದನ್ನೇ ವೃತ್ತಿಯಾಗಿಸಿಕೊಂಡವರು ಅನೇಕರಿದ್ದಾರೆ. ಗಾರ್ಡನಿಂಗ್‌, ಕೃಷಿ, ಫೋಟೋಗ್ರಾಫಿ ಹೀಗೆ ಹವ್ಯಾಸಗಳನ್ನು ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳುವ ಅವಕಾಶಗಳಿವೆ.

- ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ