ಮಾಡೆಲಿಂಗ್‌ ಕ್ಷೇತ್ರದಲ್ಲಿ ಹಲವು ಅವಕಾಶ

Team Udayavani, Jan 15, 2020, 5:50 AM IST

ಜಾಹೀರಾತು, ಸಿನೆಮಾ, ಧಾರಾವಾಹಿ ಮತ್ತು ಕಿರುಚಿತ್ರ ಉತ್ಪನ್ನಗಳ ಬ್ರ್ಯಾಂಡ್‌ ಅಂಬಾಸಿಡರ್‌ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡೆಲಿಂಗ್‌ಗೆ ಅಪಾರ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ. ಕಾಲೇಜು ಯುವಕ ಅಥವಾ ಯುವತಿಯರಿಗೆ ಇದು ಇನ್ನೂ ಹೆಚ್ಚಿನ ಅವಕಾಶ ಒದಗಿಸುತ್ತಿದೆ. ಕಲಿಯುತ್ತಿರುವಾಗಲೇ ಅದಕ್ಕೆ ಪರ್ಯಾಯವಾಗಿ ಕೆಲವು ಉತ್ತಮ ಮಾರ್ಗಗಳತ್ತ ಯೋಚಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.

ಉತ್ತಮ ನಟನಾ ಕೌಶಲ ಮತ್ತು ಮಾಡೆಲಿಂಗ್‌ ಕ್ಷೇತ್ರದ ಬಗ್ಗೆ ಆಸಕ್ತಿ ಇರುವವರು ವಿವಿಧ ಆಡಿಷನ್‌ಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬಹುದು. ಇದರಿಂದ ಕಲಿಕೆಯ ಜತೆ ಜತೆಗೆ ಯಾವುದೇ ತೊಂದರೆ ಆಗದಂತೆ ಹಣ ಸಂಪಾದಿಬಹುದು. ಮತ್ತು ತಮ್ಮ ಮುಂದಿನ ಭವಿಷ್ಯಕ್ಕೂ ಈಗಲೇ ಉತ್ತಮ ಯೋಜನೆ ರೂಪಿಸಿಕೊಳ್ಳಬಹುದು.

ಕೌಶಲಗಳು
ಇಂದು ಹಲವಾರು ಸಿನೆಮಾಗಳು ಅಥವಾ ಉತ್ತನ್ನಗಳಿಗೆ ಜಾಹೀರಾತು ತಯಾರಿಸುವಾಗ ಅದಕ್ಕೆ ಆಡಿಶನ್‌ ನಡೆಯುತ್ತದೆ ಅದರಲ್ಲಿ ಪಾಲ್ಗೊಂಡು ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನಟಿಸಬಹುದು ಅದಕ್ಕೆ ಕೆಲವು ಕೌಶಲಗಳು ಅಗತ್ಯ.

  ಇಲ್ಲಿ ದೈಹಿಕ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ಇರುವುದರಿಂದ ಸದೃಢ ಮೈಕಟ್ಟನ್ನು ಹೊಂದಿರಬೇಕು.

  ಸುಂದರವಾಗಿರಬೇಕು. ಹಾಗಂತ ಇದೊಂದೇ ಮುಖ್ಯ ಅಂಶವೂ ಅಲ್ಲ.

  ಜಾಹೀರಾತಿಗೆ ತಕ್ಕಂತೆ ನಿಮ್ಮ ವರ್ತನೆ, ಹಾವಭಾವ ಸಂದರ್ಶಕರನ್ನು ಆಕರ್ಷಿಸುವಂತಿರಲಿ.

  ಯಾವುದೇ ಆಡಿಶನ್‌ಗೆ ಹೊಗುವ ಮುನ್ನ ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

  ಪಟಪಟನೆ ಮಾತನಾಡುವ ಕೌಶಲ, ಉತ್ತಮ ಧ್ವನಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಇರಬೇಕು.

  ನಟನೆಯ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು ಮತ್ತು ಆಸಕ್ತಿ ಇರಬೇಕು. ನಟನೆಗೆ ಸಂಬಂಧಪಟ್ಟ ಯಾವುದಾರೂ ತರಬೇತಿ ಅಥವಾ ಕೊರ್ಸ್‌ ಮುಗಿಸಿದ್ದರೆ ಇನ್ನೂ ಹೆಚ್ಚು ಸಹಕಾರಿಯಾಗಿದೆ.

ಜನಪ್ರಿಯತೆ
ಮಾಡೆಲಿಂಗ್‌ ಕ್ಷೇತ್ರದಲ್ಲಿ ನಟಿಸಿದರೆ ಜನಪ್ರಿಯವಾಗುತ್ತೀರಿ. ಸಮಾಜದಲ್ಲಿ ಎಲ್ಲಿ ಹೋದರೂ ಜನ ನಿಮ್ಮನ್ನು ಗುರುತಿಸುತ್ತಾರೆ. ಇದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮತ್ತು ನಿಮ್ಮ ಸುತ್ತಮುತ್ತ ಮಿತ್ರರು ಬಂಧುಗಳಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.

ಭವಿಷ್ಯಕ್ಕೆ ಹೇಗೆ ಸಹಾಯಕಾರಿ?
 ಇದರಿಂದ ಭವಿಷ್ಯದಲ್ಲಿ ಉತ್ತಮ ನಾಯಕ/ನಟಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

 ಉತ್ತಮ ಸಂಭಾವನೆ ಗಳಿಸಲು ಇದು ಸಹಕಾರಿ. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣವಾಗುತ್ತದೆ. ಆಫ‌ರ್‌ಗಳು ನಿಮ್ಮ ಮುಂದಿರುವುದರಿಂದ ನಿಮಗೆ ಸೂಕ್ತವೆನಿಸಿದ್ದನ್ನು ಆರಿಸಿ ಭವಿಷ್ಯ ರೂಪಿಸಿಕೊಳ್ಳಬಹುದು

 ಉತ್ತಮ ಪ್ರದರ್ಶನ ನಿಮ್ಮದಾದರೆ ಪ್ರಶಸ್ತಿ ಕೂಡ ನಿಮ್ಮದಾಗಬಹುದಾಗಿದೆ.

 ಉತ್ತಮ ವೇದಿಕೆ ಉತ್ತಮ ಅವಕಾಶಗಳ ಸಾಲನ್ನು ನಿಮ್ಮ ಮುಂದಿರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶಿವಾನಂದ ಎಚ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಈ ಹಿಂದೆ 3 ಬಾರಿ, ಸಾವಿರಕ್ಕೂ ಅಧಿಕ ಕಲಾವಿದರಿಂದ ಹಾಡಿಸಿ ಲಿಮ್ಕಾ ದಾಖಲೆಗೆ ಸಾಕ್ಷಿಯಾಗಿದ್ದ "ರಂಗಸಂಸ್ಥಾನ'ವು ಪ್ರಸ್ತುತ "ನಾದ ಮಂಜರಿ' ಎಂಬ ಸಮೂಹ ಗಾಯನ ಏರ್ಪಡಿಸಿದೆ....

  • "ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ' ಎಂದವರು,...

  • ಶಿಖರ್‌ ಧವನ್‌ ಸತತ ಗಾಯಗಳಿಂದಾಗಿ ಮುಂಬರುವ ನ್ಯೂಜಿಲೆಂಡ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಧವನ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸರಣಿಯ...

  • ಕುಂದಾಪುರ: ನಗರದಲ್ಲಿ ಬಿಸಿಎಂ ಹಾಸ್ಟೆಲ್‌ ಎಲ್ಲಿದೆ ಎಂದು ಕೇಳಿದರೆ ಸಿಗುವ ಉತ್ತರ ಬಹಳ ಸುಲಭದ್ದು. ಇಲ್ಲಿನ ತಾಲೂಕು ಪಂಚಾಯತ್‌ ಬಳಿಯ ರಸ್ತೆಯಲ್ಲಿ ಹೋಗುವಾಗ...

  • ನಾಯಿಯನ್ನು ಬಹುವಾಗಿ ಪ್ರೀತಿಸುವವರಿದ್ದಾರೆ. ಕೆಲವರಿಗೆ ಬೀದಿನಾಯಿಯೂ ಮುದ್ದು ಅನ್ನಿಸುವುದುಂಟು. ಇನ್ನು, ನೂರಾರು ಮುದ್ದು ಮುದ್ದು ನಾಯಿಗಳು ಒಂದೆಡೆ ಸೇರಿದರೆ,...