ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌

Team Udayavani, Oct 9, 2019, 4:18 AM IST

ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ ಸಮಾರಂಭಗಳಲ್ಲಿ ಮದರಂಗಿಯಲ್ಲಿ ತರಬೇತಿ ಪಡೆದವರಿಗೆ ಹೆಚ್ಚು ಬೇಡಿಕೆಯಿರುವುದರಿಂದ ಇಂದು ಮದರಂಗಿ ತರಬೇತಿಗಾಗಿಯೂ ಪ್ರತ್ಯೇಕ ಕೋರ್ಸ್‌ಗಳು ಆರಂಭವಾಗಿವೆ. ಮದರಂಗಿ ಬಿಡಿಸುವ ಆಸಕ್ತಿಯಿದ್ದಲ್ಲಿ ಮದರಂಗಿಯಲ್ಲಿ ವಿಶೇಷ ತರಬೇತಿ ಪಡೆದುಕೊಂಡರೆ ಅವರಿಗೆ ಇಂದು ಬೇಡಿಕೆ ಹೆಚ್ಚಿದೆ. ಯಾಕೆಂದರೆ ಇಂದು ಹಬ್ಬ ಹರಿದಿನ, ಮದುವೆಗಳಲ್ಲಿ ಡಿಸೈನರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಕೋರ್ಸ್‌ ಎಲ್ಲೆಲ್ಲಿವೆ?
ಇಂದು ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್‌ಗಳು ಆರಂಭವಾಗಿದ್ದು, ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್‌ ಗಳಿವೆ.

1 ನ್ಯಾಚುರಲ್‌ ಟ್ರೈನಿಂಗ್‌ ಅಕಾಡೆಮಿ. ಅಮೃತಹಳ್ಳಿ
2 ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಫ್ ಬ್ಯೂಟಿ ಥೆÃಪಿ
3 ವಿಶಾರಾ ಫ್ಯಾಷನ್‌ ಟೆಕ್ನಾಲಜಿ, ಬಸವೇಶ್ವರ್‌ ನಗರ
4 ನ್ಯಾಚುರಲ್ಸ್‌ ಟ್ರೈನಿಂಗ್‌ ಅಕಾಡೆಮಿ
ಮದರಂಗಿ ಡಿಸೈನರ್‌ ಆಗಲು ಸತತ ಪ್ರಯತ್ನವಿದ್ದರೆ ಸಾಕು. ಆಗ ಉತ್ತಮ ಡಿಸೈನರ್‌ ಆಗಲು ಸಾಧ್ಯ. ಇದಕ್ಕಾಗಿ ಹಲವಾರು ಕೋರ್ಸ್‌ಗಳಿವೆ. ಅದರಿಂದ ಇನ್ನಷ್ಟು ಉತ್ತಮ ಡಿಸೈನರ್‌ ಆಗಲು ಸಾಧ್ಯ.

ಬೇಕಾದ ಕೌಶಲಗಳು
ಉತ್ತಮ ಮದರಂಗಿ ಡಿಸೈನರ್‌ಗಳಾಗಬೇಕಾದರೆ ಒಂದಷ್ಟು ಕೌಶಲಗಳ ಅಗತ್ಯವಿದೆ.
1 ಹೊಸತನ
ಯಾವುದೇ ಕಲೆಗಾರನು ಹೊಸತನವಿಲ್ಲದಿದ್ದರೆ ಉತ್ತಮ ಕಲೆಗಾರನಾಗಲು ಸಾಧ್ಯವಿಲ್ಲ. ಅದೇ ರೀತಿ ಉತ್ತಮ ಮದರಂಗಿ ಡಿಸೈನರ್‌ ಆಗಬೇಕಾದರೆ ಹೊಸತನದ ಅಗತ್ಯವಿದೆ.

2 ಆಸಕ್ತಿ
ಆಸಕ್ತಿಯಿದ್ದರೆ ಉತ್ತಮ ಮದರಂಗಿ ಡಿಸೈನರ್‌ ಆಗಲು ಸಾಧ್ಯ. ಹೊಸತನವನ್ನು ಕಲಿಯುವ ಆಸಕ್ತಿಯಿದ್ದರೆ ಉತ್ತಮ ಡಿಸೈನರ್‌ ಆಗಲು ಸಾಧ್ಯ.
ಜತೆಗೆ ಮದರಂಗಿ ಕೋರ್ಸ್‌ ಮಾಡಿದರೆ ಅದರಲ್ಲಿ ಹೆಚ್ಚು ಪರಿಣತಿ ಹೊಂದಲು ಸಾಧ್ಯವಿದೆ.

ವ್ಯಾಪ್ತಿ
ಇಂದಿನ ಫ್ಯಾಷನ್‌ ಯುಗದಲ್ಲೂ ಮದರಂಗಿ ಕೋರ್ಸ್‌ಗಳಿಗೆ ಆದ್ಯತೆಯಿದೆ. ಮದುವೆ, ಹಬ್ಬ ಸಂಭ್ರಮಗಳ ದಿನ ಮದರಂಗಿ ಹಚ್ಚುವ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದು, ಡಿಸೈನರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಇಂದು ಯುವ ಜನತೆಗೆ ಅವಕಾಶಗಳು ಹೆಚ್ಚಿದ್ದು, ಅದರ ಸದ್ಭಳಕೆಯ ಅಗತ್ಯವಿದೆ. ಸುಲಭವಾಗಿ ಮತ್ತು ಸರಳವಾಗಿರುವ ಮದರಂಗಿ ಕೋರ್ಸ್‌ಗಳಂತಹ ಡಿಪ್ಲೊಮಾ ಕೋರ್ಸ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಕಾಮಿಕ್‌ ಆರ್ಟ್‌ ಅಥವಾ ಕಾಟೂìನ್‌ ಎಂಬುದು ಒಂದು ಕಲೆ. ಚಿತ್ರಗಳ ಮೂಲಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವುದು ಕಾಮಿಕ್‌ ಆರ್ಟ್‌ನ ವೈಶಿಷ್ಟ. ಹಾಸ್ಯ ಮಿಶ್ರಿತ...

  • ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಾಮಾನ್ಯ, ಉತ್ತಮ ಮತ್ತು ಅತ್ಯುತ್ತಮ ಎಂದು ಗುರುತಿಸುವುದು ಅವರ ಜ್ಞಾನ, ಶಕ್ತಿ, ಸಾಮರ್ಥ್ಯಗಳ ಆಧಾರದ ಮೇಲೆ. ಹಾಗಂತ ಹುಟ್ಟುವಾಗಲೆ...

  • ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು...

  • ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ...

ಹೊಸ ಸೇರ್ಪಡೆ