ಬಹುಬೇಡಿಕೆಯ ಆಕ್ಯುಪಂಕ್ಚರ್‌

Team Udayavani, Oct 30, 2019, 4:05 AM IST

ಕೆಲವೊಂದು ವಿಶಿಷ್ಟ ಕೋರ್ಸ್‌ಗಳಿಗೆ ಬಹಳಷ್ಟು ಬೇಡಿಕೆ ಇದ್ದರು ಅವುಗಳು ಅನೇಕ ಜನರಿಗೆ ಗೊತ್ತೆ ಇರುವುದಿಲ್ಲ. ಈ ರೀತಿ ಹೆಚ್ಚು ಬೇಡಿಕೆಯ ಜತೆ ಜತೆಗೆ ಕೈ ತುಂಬ ಸಂಬಳ ಸಿಗುವಂತ ಕೆಲಸಗಳಲ್ಲಿ ಆಕ್ಯುಪಂಕ್ಚರಿಸ್ಟ್‌ ವೃತ್ತಿ ಕೂಡ ಒಂದು. ಹೌದು ಈ ವೃತ್ತಿಗೆ ಇಂದು ಜಗತ್ತಿನಾದ್ಯಂತ ಬೇಡಿಕೆ ಇದೆ. ಆಕ್ಯುಪಂಕ್ಚರ್‌ ಅಥವಾ ನೀಡಲ್‌ ಥೇರಪಿ ಎಂದು ಕರೆಯುವ ಇದು ಚೀನಾ ಸಾಂಪ್ರದಾಯಿಕ ವೈದ್ಯ ಪದ್ದತಿಯಾಗಿದ್ದು ಇಂದು ಜಗತ್ತಿನಾದ್ಯಂತ ಅನೇಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಶಕ್ತಿ ದೇಹದ ತುಂಬ ಸರಾಗವಾಗಿ ಹರಿಯಬೇಕು ಅದು ಯಾವುದಾದರೂ ಒಂದು ಕಡೆ ಸ್ಥಗಿತಗೊಂಡರೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಹೀಗೆ ನೋವು ಮತ್ತು ಅನಾರೋಗ್ಯಕ್ಕೆ ಅತ್ಯಂತ ತೆಳುವಾದ ಸೂಜಿಯಿಂದ ನೋವಿರುವ ಜಾಗಕ್ಕೆ ಸ್ವಲ್ಪ ಹತ್ತಿರದಲ್ಲೆ ನಿಖರವಾಗಿ ನರ ಅಥವಾ ಚರ್ಮಕ್ಕೆ ಚುಚ್ಚುವ ಮೂಲಕ ಕಾಯಿಲೆ ಗುಣಪಡಿಸುವಂತಹ ಒಂದು ವಿಶಿಷ್ಟವಾದ ವೈದ್ಯ ಪದ್ದತಿ. ಈ ಪದ್ಧತಿಯ ಮೂಲಕ ಆಕ್ಯುಪಂಕ್ಚರ್‌ ತಜ್ಞರು ತಲೆನೋವು, ಬೆನ್ನು ನೋವು, ಸಂಧಿವಾತ, ಪಾರ್ಶ್ವವಾಯು, ಮುಟ್ಟಿನ ಸೆಳೆತ, ಸೌಂದರ್ಯವರ್ಧಕ ಸಮಸ್ಯೆ, ಚರ್ಮದ ಸಮಸ್ಯ ಹೀಗೆ ಅನೇಕ ಕಾಯಿಲೆಗಳನ್ನು ಸರಳವಾಗಿ ಗುಣಪಡಿಸಬಹುದಾಗಿದೆ.

ವಿದ್ಯಾರ್ಹತೆ ಅವಶ್ಯ
ಆಕ್ಯುಪಂಕ್ಚರ್‌ ವೃತ್ತಿ ಬಯಸುವವರು ಪಿಯಸಿ ಮುಗಿಸಿದವರಿಗೆ ಒಂದು ವರ್ಷದ ಡಿಪ್ಲೋಮಾ ಮತ್ತು ಮೂರು ವರ್ಷದ ಡಿಗ್ರಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೆಡಿಕಲ್‌ಗೆ ಸಂಬಂಧಿಸಿದ ಯಾವುದೇ ಬ್ಯಾಚುಲರ್‌ ಡಿಗ್ರಿ (ಎಂಬಿಬಿಎಸ್‌, ಬಿಎಚ್‌ಎಂ.ಎಸ್‌, ಬಿಎಎಂಸ್‌, ಬಿಯುಎಂಎಸ್‌ ಇತ್ಯಾದಿ) ಮುಗಿಸಿದವರು ಎರಡು ವರ್ಷದ ಮಾಸ್ಟರ್‌ ಡಿಗ್ರಿ ಮಾಡುಬಹುದಾಗಿದೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರಿಗೆ ವಿಪುಲ ಅವಕಾಶಗಳು ಕಾದಿವೆ.

ಆಕ್ಯುಪಂಕ್ಚರ್‌ ಶಿಕ್ಷಣ ಸಂಸ್ಥೆಗಳು
ಇಂಡಿಯನ್‌ ಅಕಾಡೆಮಿ ಆಫ್ ಆಕ್ಯುಪಂಕ್ಚರ್‌ ಸೈನ್ಸ್‌, ಔರಂಗಾಬಾದ್‌, ಇಂಡಿಯನ್‌ ಬೋಡ್‌ ಆಫ್ ಆಲ್ಟರ್‌ನೇಟಿವ್‌ ಮೆಡಿಸಿನ್ಸ್‌, ಕೊಲ್ಕತ್ತ, ಇಂದಿರಾ ಗಾಂಧಿ ನ್ಯಾಷನಲ್‌ ಒಪನ್‌ ಯೂನಿವರ್ಸಿಟಿ, ಬಿಹಾರ್‌ ಆಕ್ಯುಪಂಕ್ಚರ್‌ ಯೋಗ ಕಾಲೇಜ್‌, ಪಾಟ್ನಾ, ಆಲ್ಟರ್‌ನೇಟಿವ್‌ ಮೆಡಿಸಿನ್‌ ಕಾಲೇಜ್‌, ಕೊಯಮತ್ತೂರು. ಆತ್ಮ ಆಕ್ಯುಪಂಕ್ಚರ್‌ ಟ್ರೈನಿಂಗ್‌ ಅಂಡ್‌ ರಿಸರ್ಚ್‌ ಸೆಂಟರ್‌, ಸಲೆಮಾ, ತಮಿಳುನಾಡು.

ಆಕ್ಯುಪಂಕ್ಚರ್‌ ತಜ್ಞರಾಗಲು ಇರಬೇಕಾದ ಕೌಶಲಗಳು
ಆಕ್ಯುಪಂಕ್ಚರ್‌ ತಜ್ಞರಾಗಬೇಕಾದರೆ ಕೆಲವೊಂದು ಸಾಮಾನ್ಯ ಅರ್ಹತತೆ ಮತ್ತು ಕೌಶಲಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಉತ್ತಮ ಅಕ್ಯುಪಂಕ್ಚರ್‌ ನಾಗಲು ಸಾಧ್ಯ. ಅವುಗಳಲ್ಲಿ ಕೆಲವೊಂದು ಗುರುತಿಸುವುದಾದರೆ, ಈ ವೃತ್ತಿ ಆಯ್ಕೆ ಮಾಡಿಕೊಳ್ಳುವರಿಗೆ ಈ ಕೋರ್ಸ್‌ನ ಬಗ್ಗೆ ತೀವ್ರ ಆಸಕ್ತಿಯನ್ನು ಹೊಂದುವುದು ಅಗತ್ಯ. ರೋಗಿಗಳೊಂದಿಗೆ ಉತ್ತಮ ಸಂವಹನ, ಸರಿಯಾಗಿ ಕೇಳುವ ಸಾಮರ್ಥ್ಯ ಇರಬೇಕು. ತಾಳ್ಮೆ ಇರಬೇಕು, ಸೂಕ್ಷ್ಮತೆಯನ್ನು ಅರಿಯುವ ಸಾಮರ್ಥ್ಯ ಜತೆಗೆ ಕೈ ಮತ್ತು ಕಣ್ಣಿನ ಉತ್ತಮ ಸಮನ್ವಯತೆ ಸಾಧಿಸುವ ಗುಣ ಇರಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

- ಶಿವಾನಂದ್‌ ಎಚ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ