ಶಿಕ್ಷಣದ ಜತೆ ಇರಲಿ ಕೌಶಲ

Team Udayavani, Jun 26, 2019, 5:00 AM IST

ವಿದ್ಯಾರ್ಥಿ ಜೀವನ ಎನ್ನುವುದು ಪ್ರತಿಯೊಬ್ಬರ ಪಾಲಿಗೆ ಸ್ಮರಣೀಯವಾಗಿರುತ್ತದೆ. ಭವಿಷ್ಯ ನಿರ್ಧಾರವಾಗುವುದೂ ಈ ದಿನಗಳಲ್ಲೇ. ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಟ್ಟರೆ ಉತ್ತಮ ಬದುಕು ನಿಮ್ಮದಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರವಲ್ಲ ಅದರೊಂದಿಗೆ ಕೆಲವೊಂದು ಕೌಶಲಗಳನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಹೀಗಾಗಿ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಶಿಕ್ಷಣ ತಜ್ಞರು. ಶಿಕ್ಷಣ ಮುಗಿಸಿ ವಿದ್ಯಾಸಂಸ್ಥೆಯಿಂದ ಹೊರ ಬರುವಾಗ ಯಾವುದಾದರೊಂದು ಮಾರ್ಗದ ಮೂಲಕ ಜೀವನ ಸಾಗಿಸುವಂತಿರಬೇಕು.

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ
ಶಿಕ್ಷಣ ಜತೆಗೆ ಪ್ರಾಯೋಗಿಕ ಅನುಭವವೂ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಆಗ ಮಾತ್ರ ಶಿಕ್ಷಣದ ಉದ್ದೇಶ ಸಾರ್ಥಕವಾದಂತಾಗುತ್ತದೆ. ಉದಾಹರಣೆಗೆ ಕಾಮರ್ಸ್‌ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ ಬಗ್ಗೆ ನಾವು ಥಿಯರಿ ಪಾಠ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಅವರನ್ನು ಬ್ಯಾಂಕ್‌ಗೆ ಕೆರದುಕೊಂಡು ಹೋಗಿ ಅಲ್ಲಿನ ಕಾರ್ಯ ವಿಧಾನಗಳ ಪರಿಚಯ ಮಾಡಿಕೊಡಬೇಕು ಎನ್ನುತ್ತಾರೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ. ಈಗ ಮಂಗಳೂರು ವಿ.ವಿ. 50 ಮಾರ್ಕ್ಸ್ ನ ಹೆಚ್ಚು ವರಿ ಚಟುವಟಿಕೆಗಳನ್ನು ಪಠ್ಯದಲ್ಲಿ ಅಳವಡಿಸಿಕೊಂಡಿದೆ. ವಾರಕ್ಕೆ ಒಂದೆರಡು ಗಂಟೆ ಇದರ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿ ಎನ್ನೆಸ್ಸೆಸ್‌, ಎನ್‌ಸಿಸಿ ಅಥವಾ ಅವರ ಅಭಿರುಚಿಗೆ ತಕ್ಕಂತ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಇದರಿಂದ ಅವರಿಗೆ ಬದುಕಿನ ಪರಿಚಯ ಆಗುವುದರ ಜತೆಗೆ ಪ್ರಾಯೋಗಿಕ ಅನುಭವ ಸಿಗುತ್ತದೆ ಎಂದು ಅವರು ವಿವರಿಸುತ್ತಾರೆ.

ಇಂದಿನ ಅಗತ್ಯ
ವಿದ್ಯಾರ್ಥಿಗಳಲ್ಲಿ ಛಲ, ಕೌಶಲ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸಬೇಕು. ನಾನು ಸಾಧಿಸಬಲ್ಲೆ ಎನ್ನುವ ಛಲ ಬೆಳೆಸುವ ಶಿಕ್ಷಣ ಇಂದಿನ ಅಗತ್ಯ. ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯೂ ಇತ್ತ ಗಮನ ಹರಿಸಿ ರುವುದು ಉತ್ತಮ ಬೆಳವಣಿಗೆ.
– ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಎಂ.ಜಿ.ಎಂ. ಕಾಲೇಜು, ಉಡುಪಿ

ಪಠ್ಯೇತರ ಚಟುವಟಿಕೆಗಳಿಗೆ ಸಮಯ ಮೀಸಲಿಡಿ
ವಿದ್ಯಾರ್ಥಿಗಳು ಓದಿನೊಂದಿಗೆ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಬಿಡುವಿನ ಸಮಯವನ್ನು ಇದಕ್ಕಾಗಿ ಬಳಸಬಹುದು. ಅವುಗಳೆಂದರೆ:
1 ಕಂಪ್ಯೂಟರ್‌ ಶಿಕ್ಷಣ: ಪ್ರಸ್ತುತ ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ ಎಲ್ಲರಲ್ಲೂ ಇದೆ. ಇದರ ಜತೆಗೆ ಅದರಲ್ಲಿನ ಕೆಲವು ವಿಶೇಷ ಕೋರ್ಸ್‌ ಗಳನ್ನು ನೀವು ಅಧ್ಯಯನ ಮಾಡಬಹುದು. ನಿಮ್ಮ ಆಸಕ್ತಿ, ಬೇಡಿಕೆಗೆ ಅನುಗುಣವಾಗಿ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

2 ಸಂವಹನ ಕಲೆ: ಜಗತ್ತು ನಿಂತಿರುವುದು ಮಾತಿನ ಮೇಲೆ. ಹೀಗಾಗಿ ನೀವು ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು. ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಯಾವ ರೀತಿ ವರ್ತಿಸಬೇಕು ಎನ್ನುವುದರ ಕುರಿತು ಮಾಹಿತಿ ಹೊಂದುವುದು ಅವಶ್ಯ.

3 ಭಾಷಾ ಸಾಮರ್ಥ್ಯ: ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಲು ಶ್ರಮಿಸಿ. ಅದರಲ್ಲೂ ಮಾತೃಭಾಷೆ ಜತೆಗೆ ಇಂಗ್ಲಿಷ್‌, ಹಿಂದಿಯಲ್ಲಿ ಪರಿಣತಿ ಹೊಂದುವುದು ಅನಿವಾರ್ಯ.

4 ಆಸಕ್ತಿಯೇ ಹವ್ಯಾಸವಾಗಲಿ: ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತೊಡಗಿಸಿಕೊಳ್ಳಿ. ಉದಾಹರಣೆಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಅದರಲ್ಲಿ ತೊಡಗಿಸಿಕೊಳ್ಳಿ, ಅದರ ಬಗೆಗಿನ ಹೆಚ್ಚಿನ ಮಾಹಿತಿ ಕಲೆ ಹಾಕಿ.

5 ಅಪ್‌ಡೇಟ್‌ ಆಗಿರಿ: ಜಗತ್ತಿನ ಆಗು-ಹೋಗುಗಳ ಬಗ್ಗೆ ನಿಗಾ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರ ಮಾತ್ರವಲ್ಲ ಎಲ್ಲ ರಂಗಗಳಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಮಾಹಿತಿ ಇರಬೇಕು.

– ರಮೇಶ್‌ ಬಳ್ಳಮೂಲೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾರುಕಟ್ಟೆಯಲ್ಲಿ, ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪಾಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಾಟ್‌ ಪೈಂಟಿಂಗ್‌ನಂತಹ...

  • ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತೀರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ...

  • ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಹಾಸ್ಯವೂ ಒಂದು. ಹಾಸ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಅನೇಕ ಪುಸ್ತಕಗಳು ಬಂದಿವೆ. ಆದರೆ ಹಾಸ್ಯ ಕೃತಿಗಳಲ್ಲಿ...

  • ಮಕ್ಕಳು ಊಟ ಮಾಡಬೇಕಾದರೆ ಕೈಯಲ್ಲಿ ಮೊಬೈಲ್‌ ಕೊಟ್ಟು ಆಹಾರ ಉಣಿಸುವ ಸಮಯವಿದು. ಬೊಂಬೆಗಳು, ಉಯ್ನಾಲೆ, ಮಣ್ಣಿನಲ್ಲಿ ಮಕ್ಕಳು ಆಡುವ ಕಾಲ ಹೋಗಿದೆ. ಇನ್ನೇನಿದ್ದರೂ...

  • ಕಾರ್ಟೊಗ್ರಫಿ ಎಂಬುದು ಒಂದು ವಿಜ್ಞಾನವೂ ಹೌದು. ಜತೆಗೆ ಮಾನವನಿಗೆ ಪ್ರಯಾಣದ ಸಂದರ್ಭದಲ್ಲಿ ಸಹಾಯಕ್ಕೆ ಬರುವಂತಹ ನಕ್ಷೆ ತಯಾರಿಕೆಯ ಒಂದು ಕಲೆಯೂ ಹೌದು. ಮ್ಯಾಪ್‌,...

ಹೊಸ ಸೇರ್ಪಡೆ