ಕೌಶಲ ರೂಢಿಸಿಕೊಳ್ಳಲು ಟೀಂ ವರ್ಕ್‌ ಸಹಕಾರಿ

Team Udayavani, Oct 23, 2019, 4:40 AM IST

ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತೇ, ಸರಿಯಾದ ವೇದಿಕೆ ಮತ್ತು ಸರಿಯಾದ ಸಮಯ ಸಿಕ್ಕಾಗ ಮಾತ್ರ ಅಂತಹ ಪ್ರತಿಭೆಗಳ ಅನಾವರಣಗೊಳ್ಳುತ್ತವೆ. ಶಾಲೆ, ಕಾಲೇಜುಗಳು ಇಂತಹ ಹಲವಾರು ಪ್ರತಿಭೆಗಳಿಗೆ ಒಂದು ಮುಖ್ಯ ವೇದಿಕೆಯು ಹೌದು. ಇಲ್ಲಿ ಕೇವಲ ಜ್ಞಾನ ಮಾತ್ರವಲ್ಲದೆ ನಮ್ಮಲ್ಲಿರುವ ಅನೇಕ ಕೌಶಲ ಬೆಳವಣಿಗೆ ಸಹಾಯಕವಾಗುತವೆ. ಕೇವಲ ಸಿದ್ಧ ಪಠ್ಯವಲ್ಲದೇ ಅದರ ಹೊರಗೂ ವಿದ್ಯಾರ್ಥಿಗಳು ಕಲಿಯುವುದಕ್ಕೆ ಸಾಕಷ್ಟಿರುತ್ತದೆ. ಶಾಲಾ ಕಾಲೇಜು ಅಂದಾಕ್ಷಣ ಹಲವಾರು ವಿದ್ಯಾರ್ಥಿಗಳ ಜತೆಗೆ ವಿವಿಧ ಪ್ರತಿಭೆಗಳ ಸಮೂಹವೇ ಅಲ್ಲಿ ಅಡಕವಾಗಿರುತವೆ. ಕೆಲವೊಮ್ಮೆ ನಮ್ಮಲ್ಲಿರುವ ಹೊಸ ಪ್ರತಿಭೆಯನ್ನು ಹೊರತರಲು ಹಿಂಜರಿಯುವುದು ಸಹಜ ಆದುದರಿಂದ ಸೂಕ್ತ ವೇದಿಕೆಯೂ ಅಗತ್ಯ.

ಸಾಮಾಜಿಕ ಕೌಶಲ್ಯಗಳ ಅನಾವರಣ ನವನವೀನ ಯೋಚನೆಗಳು ಕಾರ್ಯ ರೂಪಕ್ಕೆ ಬರಲು ಟೀಂ ವರ್ಕ್‌ ಸಹಕಾರಿ. ಒಬ್ಬರಿಂದ ಇನ್ನೊಬ್ಬರು ಏಕಾಗ್ರತೆಯಿಂದ ಆಲಿಸಲೂಬಹುದು, ಒಗ್ಗಟ್ಟಾಗಿ ಕೆಲಸ ನಿರ್ವಹಿಸುವುದರಿಂದ ಒಬ್ಬರಿಗೊಬ್ಬರು ಸಹಾಯಕ್ಕೆ ಉತ್ತಮ ವೇದಿಕೆಯಾಗಿದೆ.

ಸಂಘಟನಾ ಕೌಶಲ
ಒಬ್ಬರೆ ಕೆಲಸ ಮಾಡುವುದಕ್ಕೂ ಎಲ್ಲರೂ ಸೇರಿ ಕೆಲಸ ನಿರ್ವಹಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಶಾಲಾ ಜೀವನದಲ್ಲಿ ಇದು ಯಾವುದೇ ಕಾರ್ಯಕ್ರಮಗಳನ್ನು ಆಯೋಜನೇ ಮಾಡುವಾಗ ಅತ್ಯಂತ ಸಹಕಾರಿಯಾಗಿದೆ. ಶಾಲೆಗಳಲ್ಲಿ ಯಾವುದೇ ಒಂದು ಸಭೆ ಸಮಾರಂಭ ಇದ್ದಾಗ ಎಲ್ಲರೂ ಒಟ್ಟಾಗಿ ಒಂದೊಂದು ಕೆಲಸವನ್ನು ಹಂಚಿಕೊಂಡು ನಿರ್ವಹಿಸಿದಾಗ ಒಂದು ಸಮಾರಂಭವನ್ನು ಹೇಗೆ ನಿರ್ವಹಿಸುವ ಕೌಶಲ ಕಲಿಯಲು ಇದು ಸಹಕಾರಿ.

ಸ್ಟೇಜ್‌ ಫಿಯರ್‌ ಈಗ ಕ್ಲಿಯರ್‌
ಕೆಲ ಮಕ್ಕಳಲ್ಲಿ ವೇದಿಕೆ ಹತ್ತುಲು ಭಯ ಇರುತ್ತದೆ. ಅಂತವರಿಗೆ ಗುಂಪು ಚರ್ಚೆಗಳಲ್ಲಿ ತೊಡಗಿದಾಗ ಮತ್ತು ಟೀಂ ವರ್ಕ್‌ ಆಗಿ ಕೆಲಸ ನಿರ್ವಹಿಸಿದಾಗ ಭಯ ಹೋಗಲಾಡಿಸಲು ಸಾಧ್ಯ. ನಿಮಗೆ ಒಬ್ಬರಿಗೆ ವೇದಿಕೆ ಮೇಲೆ ಹೋಗಿ ಹಾಡುವುದಕ್ಕೆ, ಕುಣಿಯುವುದಕ್ಕೆ ಭಯವಿದ್ದರೆ ಗಾಯನ, ನೃತ್ಯಗಳಲ್ಲಿ ಪಾಲ್ಗೊಳ್ಳಿ ಇದು ಕ್ರಮೇಣ ನಿಮ್ಮಲ್ಲಿರುವ ಸ್ಟೇಜ್‌ ಫಿಯರ್‌ ಅನ್ನು ದೂರ ಮಾಡುತ್ತದೆ. ಇಷ್ಟೆಲ್ಲದಕ್ಕೂ ಮೀರಿ ಗುಂಪಿನೊದಿಗೆ ಬೆರೆಯುವುದರಿಂದ ಇತರರೊಂದಿಗೆ ಬೆರಯುವ, ಸ್ನೇಹ ಸಂಬಂಧಗಳ ಮೌಲ್ಯಗಳ ಸೂಕ್ಷತೆಯ ಅರಿವು ನಮಗಾಗುತ್ತದೆ. ಹೊರ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಳ್ಳುವುದಕ್ಕೆ ಗುಂಪಿನಲ್ಲಿ ಬೆರೆಯಲೇಬೇಕು. ಗುಂಪಿನೊದಿಗೆ ಬೆರೆಯುವುದರಿಂದ ನಮ್ಮೊಂದಿಗೆ ಅನೇಕ ಜನರನ್ನು ಧನಾತ್ಮಕ ಭಾವನೆಯು ನಿಮ್ಮಲ್ಲಿ ಬೆಳೆಯುತ್ತದೆ.

ವೈಯುಕ್ತಿಕ  ಯೋಚನೆಗಳಿಗೂ ಸಹಕಾರಿ
ಇಲ್ಲಿ ವೈಯುಕ್ತಿಕ ಯೋಚನೆಗಳಿಗೂ ಅವಕಾಶವಿರುತವೆ. ನಮ್ಮಲ್ಲಿರುವ ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಕೆಲಸ ಕಾರ್ಯಗಳಲ್ಲಿ ಏಕತೆಯನ್ನು ಕಾಪಾಡಲು ಟೀಂ ವರ್ಕ್‌ ಸಹಕಾರಿ. ಜತೆಗೆ ಉತ್ತಮ ಸ್ನೇಹವನ್ನು ಏರ್ಪಡಿಸುತ್ತದೆ. ಬಂದಂತಹ ಕಷ್ಟಗಳನ್ನು ಒಟ್ಟಾಗಿ ಎದುರಿಸುವ ಮಾರ್ಗೋಪಾಯ ಅರಿಯಲು ಸಹಕರಿಸುತ್ತದೆ. ಟೀಂ ವರ್ಕ್‌ ಉತ್ತಮ ಕಲಿಕೆಯನ್ನು ಒದಗಿಸುತ್ತದೆ. ಇದರಿಂದ ಮುಂಬರುವ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ. ಹಾಗೆಯೇ ಹೊಸ ವಿಷಯಗಳನ್ನು ಕಲಿಕೆಗೆ ಇದು ಉತ್ತಮ ವೇದಿಕೆಯಾಗಿದೆ.

- ವಿಶು, ಅಮೀನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ