ಫೋಟೋ ಎಡಿಟಿಂಗ್‌ನಲ್ಲಿದೆ ವಿಪುಲ ಅವಕಾಶ

Team Udayavani, Jan 22, 2020, 5:05 AM IST

ನಾವು ಮಾಡುವ ಕೆಲಸವು ಆದಾಯ ಗಳಿಕೆ ಮಾತ್ರವೆನಿಸಿದಾಗ ಅದೆನೋ ಕೊರಗು, ಬಯಸಿದಂತೆ ಬದುಕು ಸಾಗದ ಬೇಸರ ಸಹಜ. ಆದರೆ ಆದಾಯದೊಂದಿಗೆ ನಿಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸಿ ನಿಮ್ಮನ್ನು ಗುರುತಿಸಿಕೊಳ್ಳುವ ನೆಲೆಯಲ್ಲಿ ಫೋಟೋ ಎಡಿಟಿಂಗ್‌ ಒಂದು ಉತ್ತಮ ವೇದಿಕೆಯಾಗಿದೆ.

ಏನಿದು ಫೋಟೋ ಎಡಿಟಿಂಗ್‌?
ತೆಗೆದ ಫೋಟೋ ಯಥಾಸ್ಥಿತಿಯಲ್ಲಿ ನೀಡುವವರು ತುಂಬಾ ಕಡಿಮೆ. ಒಂದು ವೇಳೆ ಹಾಗೆಯೇ ನೀಡಿದರೂ ಅದರಲ್ಲಿ ಏನಾದರೂ ವಿಶೇಷತೆ, ಕ್ರಿಯಾಶೀಲತೆ ಇದ್ದರೆ ಜನರಿಗೆ ಇಷ್ಟವಾಗುತ್ತದೆ. ಆದರೆ ಬಹುತೇಕರಿಗೆ ನ್ಯಾಚುರಲ್‌ಗಿಂತಲೂ ಎಡಿಟಿಂಗ್‌ಗೆ ಬಹು ಇಷ್ಟ ಎನ್ನಬಹುದು. ಯಾಕೆಂದರೆ ಕಾಣದ ಪ್ರಕೃತಿ ನಮ್ಮ ಹಿಂದೆ ನಿಂತು ನಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಿರುವುದನ್ನು ಯಾರು ತಾನೇ ಇಷ್ಟಪಡಲಾರರು. ಈ ಕಾರಣದಿಂದಲೇ ಎಡಿಟಿಂಗ್‌ ಒಂದು ಉತ್ತಮ ಕ್ಷೇತ್ರವಾಗಿದ್ದು, ಆಸಕ್ತರಿಗೆ ಒಂದು ನೆಚ್ಚಿನ ಉದ್ಯೋಗವನ್ನು ಇಲ್ಲಿ ಅರಸಬಹುದಾಗಿದೆ.

ಎಷ್ಟು ಆದಾಯ?
ಫೋಟೋ ಎಡಿಟಿಂಗ್‌ ಎಲ್ಲರಿಂದಲೂ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ಕೆಲವು ಕೌಶಲಗಳು ಅಗತ್ಯವಿದೆ. ಒಮ್ಮೆ ಇದನ್ನು ನೀವು ಕರಗತ ಮಾಡಿಕೊಂಡಿರೆಂದರೆ ಅರೆಕಾಲಿಕ ಅಥವಾ ಪೂರ್ಣಕಾಲಿಕ ಉದ್ಯೋಗವನ್ನು ನೀವು ಪಡೆಯಬಹುದಾಗಿದೆ. ನಿಮ್ಮ ನೈಪುಣ್ಯತೆ ಆಧಾರದ ಮೇಲೆ ಆದಾಯದ ಅಂಶ ನಿರ್ಧಾರವಾಗುತ್ತದೆ. ತಿಂಗಳಿಗೆ ಸುಮಾರು 15ರಿಂದ 20 ಸಾವಿರದವರೆಗೂ ಇದರಲ್ಲಿ ಆದಾಯ ಗಳಿಸಬಹುದಾಗಿದೆ.

ಎಲ್ಲೆಲ್ಲಿ ಇದೆ ಅವಕಾಶ?
ಇಂದು ಸಾಮಾನ್ಯ ಮದುವೆ ಕಾಗದದಿಂದ ಹಿಡಿದು ಮಾಡೆಲಿಂಗ್‌ ಫೋಟೋದವರೆಗೂ ಎಡಿಟಿಂಗ್‌ ತನ್ನ ಚಾಕಚಕ್ಯತೆಯನ್ನು ಹೊಂದಿರುತ್ತದೆ. ಕೆಲವೊಂದು ಪೋಟೋಶಾಪ್‌ಗ್ಳಲ್ಲಿ ಎಡಿಟಿಂಗ್‌ಗಾಗಿ ಅರೆಕಾಲಿಕ ಉದ್ಯೋಗಸ್ಥರಿಗೆ ಇಂದು ಬೇಡಿಕೆ ಬರುತ್ತಿರುವುದನ್ನು ಕಾಣಬಹುದು. ಅದೇ ರೀತಿ ವೆಡ್ಡಿಂಗ್‌ ಫೋಟೋ, ರಿಸೆಪ್ಶನ್‌, ಬರ್ತ್‌ಡೇ, ಡಾಗ್‌ ಶೋ, ಜಾಹಿರಾತು ಫೋಟೋ, ಕಾರ್ಡ್‌ ಗಳ ತಯಾರಿಕೆ ಇನ್ನೂ ಹಲವಾರು ಕ್ಷೇತ್ರದಲ್ಲಿ ಫೋಟೋ ಎಡಿಟಿಂಗ್‌ ಇಂದು ಜನಮನ್ನಣೆ ಪಡೆದಿದೆ.

ಯಾವೆಲ್ಲ ಆ್ಯಪ್‌?
ಫೋಟೋ ಎಡಿಟಿಂಗಿಗೆ ಸಂಬಂಧಿಸಿದಂತೆ ಫೋಟೋ ಶಾಪ್‌, ಲೈಟ್ರೋಮ್‌, ಪಿಕಾಸೋ, ಇಲ್ಯುಸ್ಟ್ರೇಟರ್‌ ಆ್ಯಪ್‌ಗ್ಳು ಇತ್ತೀಚೆಗೆ ಕಂಪ್ಯೂಟರ್‌ನಲ್ಲಿ ಅಧಿಕವಾಗಿ ಬಳಸಲ್ಪಡುತ್ತವೆ. ಅದರಂತೆ ಮೊಬೈಲ್‌ ಫೋನ್‌ನಲ್ಲಿಯೂ ಪಿಕ್ಸಾರ್ಟ್‌, ಸ್ನಾಪ್‌ ಶೀಟ್‌, ಫಿಕ್ಸೆಲ್‌ ಮುಂತಾದ ಆ್ಯಪ್‌ ಇಂದಿನ ಟ್ರೆಂಡ್‌ ಆಗಿದೆ. ಆ್ಯಪ್‌ ಬಳಸುವುದನ್ನು ತಿಳಿದಿರುವಂತೆ ಕೆಲವು ಕವಿ ವಾಕ್ಯ ಪೋಣಿಸುವ ಕಲೆ ಇಲ್ಲಿ ಬಹುಮುಖ್ಯವೆನಿಸುತ್ತದೆ. ಫೋಟೋ ನಡುವೆ ಸಂಬಂಧಗಳಿಗೆ, ನಮ್ಮ ಭಾವನೆಗಳಿಗೆ ಸಂಬಂಧಿಸಿದ ಬರಹ ಸಾಲು ಎಡಿಟಿಂಗ್‌ ಮಾಡಿದ ಫೋಟೋ ಇನ್ನಷ್ಟು ಅಚ್ಚುಕಟ್ಟಾಗಿ ಜನರನ್ನು ತಲುಪಲು ಸಾಧ್ಯವಾಗಿದೆ.

ಈ ಕೌಶಲ ನಿಮ್ಮಲ್ಲಿರಲಿ
ಫೋಟೋ ಎಡಿಟಿಂಗ್‌ಗೆ ಸಂಬಂಧಿಸಿದ ವಿವಿಧ ಆ್ಯಪ್‌ನ ಬಗ್ಗೆ ತಿಳಿದಿರಬೇಕು.
ಕಲರಿಂಗ್‌ ಬಗ್ಗೆ ತಿಳಿದಿರಬೇಕು.
ಜನರ ಅಪೇಕ್ಷೆಯನ್ನು ಅರ್ಥೈಸಬೇಕು.
ಸಮಯ ಪಾಲನೆ ಬಹುಮುಖ್ಯ (ನಿಗದಿತ ಸಮಯದೊಳಗೆ ಕೆಲಸ ಮುಗಿಸುವಿಕೆ).
ಕೆಲಸದ ಕುರಿತು ತಾಳ್ಮೆ ಇರಬೇಕು.
ಕಲ್ಪನಾ ಲೋಕ‌ದ ಕುರಿತು ಅರಿತಿರಬೇಕು.
ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆ ಬಹುಮುಖ್ಯ.
ಫೋಟೋಗ್ರಾಫಿ ಬಗ್ಗೆ ತಿಳಿದಿರಬೇಕು.
ಕವಿ ಮನೋಭಾವನೆ ಉಳ್ಳವರಾಗಿರಬೇಕು

 ರಾಧಿಕಾ, ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

  • ಅಂಕಿಅಂಶ, ದತ್ತಾಂಶಗಳು ಇಂದು ಪ್ರಾಮುಖ್ಯತೆ ಪಡೆದಿದೆ. ಜಗತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ. ಇಲ್ಲಿ ವಿಭಿನ್ನ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ....

  • ಪ್ರಥಮ ಚಿಕಿತ್ಸೆ ಎನ್ನುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಭಾಗ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೊರೆಯುವ ಸೂಕ್ತ ಪ್ರಥಮ ಚಿಕಿತ್ಸೆಯಿಂದಾಗಿ ಜೀವವನ್ನೇ...

  • ಸ್ಕೆಚ್‌ ಆರ್ಟ್‌ ಅಥವಾ ಪೆನ್ಸಿಲ್‌ ಆರ್ಟ್‌ ಎಂಬುದು ಸಂಪೂರ್ಣವಾಗಿ ಕಲಾತ್ಮಕವಾಗಿ ಕೈಯಲ್ಲೇ ತಯಾರಿಸಲ್ಪಡುವ ಕೆಲಸವಾಗಿದೆ. ಯಾವುದೇ ಒಂದು ವಸ್ತು, ಪ್ರತಿಮೆಗಳನ್ನು...

ಹೊಸ ಸೇರ್ಪಡೆ

  • ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ "ಕೂಲ್‌'...

  • ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್‌ ಪ್ಲೇಟ್‌ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು....

  • ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ...