ಟೂಲ್‌ ಆ್ಯಂಡ್‌ ಡೈ ಮೇಕಿಂಗ್‌ ಅವಕಾಶ ಅಪಾರ

Team Udayavani, May 29, 2019, 6:00 AM IST

ಬೆಳೆಯುತ್ತಿರುವ ತಂತ್ರ ಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಹೆಚ್ಚುತ್ತಿದೆ. ಮುಖ್ಯವಾಗಿ ಪ್ರತಿಯೊಂದು ವಸ್ತುವಿನ ತಯಾರಿಯಲ್ಲಿಬೇಕಾಗುವ ಟೂಲ್‌ಗಳು ಇಂದು ಹೆಚ್ಚು ಪ್ರಾಮುಖ್ಯ ಪಡೆಯುತ್ತಿವೆ. ಹೀಗಾಗಿ ಟೂಲ್‌ ಮೇಕರ್‌ಗಳಿಗೆ ಡಿಮ್ಯಾಂಡ್‌ ಕೂಡ ಹೆಚ್ಚಾಗಿದೆ. ಟೂಲ್‌ ಆ್ಯಂಡ್‌ ಡೈ ಮೇಕಿಂಗ್‌ ಎನ್ನುವುದು ಈಗ ಕಲಿಕೆಯ ಒಂದು ವಿಷಯವಾಗಿ ಪರಿಗಣಿಸಲ್ಪಟ್ಟಿದ್ದರಿಂದ ಇದರ ಕಲಿಕೆಗೆ ರಾಜ್ಯ, ದೇಶದ ವಿವಿ ಧೆಡೆ ಡಿಪ್ಲೊಮಾ, ಎಂಜಿನಿಯರಿಂಗ್‌ ಕೋರ್ಸ್‌ಗಳಿವೆ. ಅಪಾರ ಉದ್ಯೋಗಾವಕಾಶವನ್ನು ಹೊಂದಿರುವ ಈ ಕೋರ್ಸ್‌ಗೆ ಪ್ರಸ್ತುತ ಬೇಡಿಕೆಯೂ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ತಂತಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ವಿಸ್ತರಣೆಯಾಗುತ್ತಿದ್ದು, ಅದಕ್ಕೆ ತಕ್ಕಂತೆಯೇ ಕಲಿಕೆಗೂ ಹಲವು ಅವಕಾಶಗಳು ಸೃಷ್ಟಿಯಾಗುತ್ತಿವೆ. ಮುಖ್ಯವಾಗಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಹಲವಾರು ಕೋರ್ಸ್‌ಗಳಿದ್ದು, ಉದ್ಯೋಗಾವಕಾಶವೂ ವಿಪುಲವಾಗಿದೆ.

ಯಾವುದೇ ಒಂದು ವಸ್ತು ಗುಣಮಟ್ಟದ್ದಾಗಿರಲು, ಕಡಿಮೆ ಸಮಯದಲ್ಲಿ ಉಪಯೋಗ ಮಾಡಲು ಅದಕ್ಕೆ ಟೂಲ್ ಅತೀ ಮುಖ್ಯವಾಗಿರುತ್ತದೆ. ಈ ರೀತಿಯ ಟೂಲ್ ತಯಾರಿಸಲು ಕಲಿಸುವಂತಹ ಕೋರ್ಸ್‌ಗಳಿವೆ. ಅದರಲ್ಲಿ ಪ್ರಮುಖ ಕೋರ್ಸ್‌ ಅಂದರೆ ಅದು ಡಿಪ್ಲೊಮಾ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌.

ಕೆಲವು ವರ್ಷಗಳಿಂದ ಈ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಏಕೆಂದರೆ, ಕೋರ್ಸ್‌ ಕಲಿತ ಮಂದಿಗೆ ಉದ್ಯೋಗ ಇಲ್ಲ ಎಂದಾಗುವುದು ಕಡಿಮೆ. ದೇಶದ ಪ್ರತೀ ರಾಜ್ಯದಲ್ಲ್ಲಿಯೂ, ಕೆಲವೊಂದು ವಿದೇಶಿ ಸಂಸ್ಥೆಗಳಲ್ಲಿಯೂ ಡಿಟಿಡಿಎಂ ಕಲಿತವರಿಗೆ ಉದ್ಯೋಗದ ಅವಕಾಶವಿದೆ. ಈ ಕೋರ್ಸ್‌ಗೆ ಇಷ್ಟೊಂದು ಬೇಡಿಕೆ ಬರಲು ಕಾರಣವೂ ಇದೆ. ನಾವು ದಿನನಿತ್ಯ ಕಾಣುವ ಮೊಬೈಲ್ ಫೋನ್‌, ಕೆಮರಾ, ಟಿ.ವಿ. ಫ್ಯಾನ್‌ ಅಲ್ಲದೇ ವಿಮಾನದ ಬಿಡಿಭಾಗಗಳು, ಆಸ್ಪತ್ರೆಯಲ್ಲಿ ಬಳಸುವ ಕೆಲವು ಅತ್ಯಾಧುನಿಕ ಉಪಕರಣಗಳು ಸೇರಿದಂತೆ ಇನ್ನಿತರ ಉತ್ಪನ್ನಗಳ ತಯಾರಿಕೆಯಲ್ಲಿ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ನ ಅಗತ್ಯಇದೆ. ಹೀಗಾಗಿ ಈ ಕೋರ್ಸ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಏರುತ್ತಿದೆ.

ಡಿಪ್ಲೊಮಾ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ (ಡಿಟಿಡಿಎಂ) ಕೋರ್ಸ್‌ಗೆ ಎಸೆಸೆಲ್ಸಿ ಅಥವಾ ಐಟಿಐ ಉತ್ತೀರ್ಣರಾದಂತಹ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೋರ್ಸ್‌ಗೆ ಸರಕಾರ ಮತ್ತು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಮಾನ್ಯತೆ ನೀಡಿರುತ್ತದೆ. ಡಿಟಿಡಿಎಂ ಕೋರ್ಸ್‌ 3+1 ವರ್ಷ ಅವಧಿಯದ್ದಾಗಿದೆ. ಮೊದಲ 3 ವರ್ಷ ಆಯಾ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕು. ಅನಂತರ 4ನೇ ವರ್ಷ ವಿದ್ಯಾರ್ಥಿ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ತರಬೇತಿ ಪಡೆಯವುದು ಕಡ್ಡಾಯ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಆಕರ್ಷಕ ಸ್ಟೆ ೖಪೆಂಡ್‌ ಮತ್ತು ಇನ್ನಿತರ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ.

ಡಿಟಿಡಿಎಂ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಈ ವೇಳೆ ಮಹಿಳಾ ಅಭ್ಯರ್ಥಿಗಳು ಮತ್ತು ಹೈದರಾಬಾದ್‌ ಕರ್ನಾಟಕ ಭಾಗದ 371(ಜೆ) ವಿದ್ಯಾರ್ಥಿಗಳಿಗೆ ಮೀಸಲಾತಿ ಇರುತ್ತದೆ. ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಸರಕಾರದ ಮೆರಿಟ್-ಕಮ್‌-ರೋಸ್ಟರ್‌ ಪದ್ಧತಿಯಂತೆಯೇ ನಡೆಸಲಾಗುತ್ತದೆ. ಈ ತರಬೇತಿಯು ಮಾಮೂಲಿ ಡಿಪ್ಲೊಮಾ ಕೋರ್ಸ್‌ಗಳಿಗಿಂತ ವಿಭಿನ್ನವಾಗಿದೆ. ಇದರಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಪಡೆಯಲು ಕೂಡ ಅವಕಾಶವಿದೆ.

ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಡಿಪ್ಲೊಮಾ ಇನ್‌ ಟೂಲ್ ಆ್ಯಂಡ್‌ ಡೈ ಮೇಕಿಂಗ್‌ (ಡಿಟಿಡಿಎಂ) ತರಬೇತಿ ಪಡೆಯಬಹುದಾಗಿದೆ. ಡಿಟಿಡಿಎಂ ತರಬೇತಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ತರಬೇತಿಯ ಅನಂತರ ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಬಿಇ ವಿದ್ಯಾಭ್ಯಾಸ ಮಾಡಲು ಅವಕಾಶವೂ ಇದೆ.

•ನವೀನ್‌ ಭಟ್ ಇಳಂತಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪೈಂಟಿಂಗ್‌, ಶಿಲ್ಪ, ಲೋಹ ಶಿಲ್ಪ, ಟೆಕ್ಸ್‌ಟೈಲ್‌ ಡಿಸೈನ್‌, ಇಂಟೀರಿಯರ್‌ ಡೆಕೋರೇಶನ್‌ ಮುಂತಾದ ವಿಭಾಗಗಳಲ್ಲಿ ಸ್ಪೆಶಲೈಸೇಶನ್‌ ಮಾಡಲು ಸಾಧ್ಯವಿದೆ. ಲಲಿತ ಕಲಾ...

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಪೋಸ್ಟರ್‌ ವಿನ್ಯಾಸ ಮಾಡುವುದು ಇಂದು ಅತ್ಯಂತ ಬೇಡಿಕೆಯ ಕೆಲಸಗಳಲ್ಲಿ ಒಂದು. ಸಿನೆಮಾ, ಸಾರ್ವಜನಿಕ ಕಾರ್ಯಕ್ರಮ, ಸಂಗೀತ ಮೇಳ, ರಾಜಕೀಯ ಅಲ್ಲದೇ ಕೆಲವು ಚಿಕ್ಕ ಕಾರ್ಯಕ್ರಮಗಳಿಗೂ...

  • ಉಸೇನ್‌ ಬೋಲ್ಟ್ ನ ಓಟದ ರಹಸ್ಯವನ್ನು ಇಲ್ಲಿ ವಿವರಿಸಿದ್ದಾರೆ ಕಾರ್ತಿಕ್‌ ಅಮೈ ನಮಗೆಲ್ಲಾ ಉಸೇನ್‌ ಬೋಲ್ಟ್ ಗೊತ್ತು. ಜಗತ್ತಿನ ಅತೀ ವೇಗದ ಓಟಗಾರ, ಹಲವು ದಾಖಲೆಗಳ...

  • ನಾವು ಮಾಡುವ ಕೆಲಸವು ಆದಾಯ ಗಳಿಕೆ ಮಾತ್ರವೆನಿಸಿದಾಗ ಅದೆನೋ ಕೊರಗು, ಬಯಸಿದಂತೆ ಬದುಕು ಸಾಗದ ಬೇಸರ ಸಹಜ. ಆದರೆ ಆದಾಯದೊಂದಿಗೆ ನಿಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸಿ...

ಹೊಸ ಸೇರ್ಪಡೆ