ಟೂರಿಸ್ಟ್ ಗೈಡ್‌

ಪ್ರವಾಸಿ ಮಾರ್ಗ ದರ್ಶನ: ಆದಾಯ ಗಳಿಸುವ ಕ್ಷೇತ್ರ

Team Udayavani, Jan 8, 2020, 5:59 AM IST

ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಅರಸುವವರಿಗೆ ಏನಾದರೂ ಹೊಸತಾದ ಆಲೋಚನಾ ಕ್ರಮ, ಕ್ರೀಯಾಶೀಲತೆ, ಉತ್ತಮ ಮಾತುಗಾರಿಕೆ ಹೀಗೆ ಹಲವಾರು ಮೌಲ್ಯವನ್ನು ಹೊಂದಿರಬೇಕು. ಇಲ್ಲದಿದ್ದರೇ ಅವರು ಎಲ್ಲರ ಕಣ್ಣಿಗೆ ಶೂನ್ಯರಾಗಿಯೇ ಪ್ರತಿಬಿಂಬಿಸುತ್ತಾರೆ. ಇಷ್ಟೆಲ್ಲ ಮೌಲ್ಯ ಹೊಂದಿದ್ದು ಆದಾಯ ಗಳಿಸಲು ಅನಿವಾರ್ಯವಾಗಿ ಎಲ್ಲೋ ಕೆಲಸ ಮಾಡುವವರಿಗೆ ತಮ್ಮ ಮೌಲ್ಯಗಳನ್ನೆ ಬಳಸಿ ಆದಾಯ ಗಳಿಸಲೂ ಸಾಧ್ಯವಿದೆ ಎಂಬ ಅಂಶವನ್ನೇ ಮರೆಯುತ್ತಾರೆ. ಇಂತಹ ಆದಾಯ ಗಳಿಸುವ ಕ್ಷೇತ್ರಗಳಲ್ಲಿ ಪ್ರವಾಸಿ ಮಾರ್ಗದರ್ಶಕ ಸ್ಥಾನವೂ ಒಂದಾಗಿದೆ. ಇದರಲ್ಲಿರುವ ಅವಕಾಶಗಳಾವುವು, ಆತನಿಗಿರಬೇಕಾದ ಗುಣ ವಿಶೇಷತೆಗಳೇನು? ಇದಕ್ಕೆ ಯಾವುದಾದರೂ ಕೊರ್ಸ್‌ಗಳಿವೆಯೇ ಹೀಗೆ ಹತ್ತಾರು ಪ್ರಶ್ನೆಗೆ ಉತ್ತರವೆಂಬಂತೆ ಈ ಲೇಖನ ರಚಿಸಲಾಗಿದೆ.

ಜನರು ತಮ್ಮದೇ ಜಾಬ್‌ ಫ್ಯಾಷನ್‌ ಇಷ್ಟಪಡುತ್ತಾರೆ. ಆದರೆ ಅದನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರಲಾರದು. ಟ್ರಾವೆಲ್‌ ಮತ್ತು ಟೂರಿಸಂ ಕ್ಷೇತ್ರವು ಇಂದು ಜನಮಾನ್ಯತೆ ಪಡೆದ ಕ್ಷೇತ್ರಗಳಲ್ಲಿ ಒಂದು. 2016ರ ಜಿಡಿಪಿಯಲ್ಲಿ ಟ್ರಾವೆಲ್‌ ಮತ್ತು ಟೂರಿಸಂ ಕ್ಷೇತ್ರದಿಂದ ಸುಮಾರು 208.9 ಬಿಲಿಯನ್‌ ಆದಾಯ ಪ್ರಮಾಣ ದಾಖಲಾಗಿದ್ದನ್ನು ಕಾಣಬಹುದು. ಅಡ್ವೆಂಚರ್‌ ಲೈಫ್ ಇಷ್ಟಪಡುವ ಪ್ರವಾಸಿಗರಿಗೆ ಹೆಚ್ಚು ಪ್ರವಾಸಿ ಮಾರ್ಗದರ್ಶಕರ ಮೊರೆ ಹೋಗುತ್ತಿದೆ/

ಪ್ರಸಿದ್ಧರಾಗುವುದು ಹೇಗೆ?
ಇಂದು ಬಾದಾಮಿ, ಐಹೊಳೆ, ಪಟ್ಟದಕಲ್ಲು ಹೀಗೆ ಐತಿಹಾಸಿಕ ಪ್ರವಾಸಿ ತಾಣದಲ್ಲಿ ಸರಕಾರಿ ಪ್ರವಾಸಿ ಮಾರ್ಗದರ್ಶಕರಿದ್ದು, ಪ್ರಾಥಮಿಕ ಹಂತದಲ್ಲಿ ಮಾಸಿಕ 17 ಸಾವಿರ ವೇತನವನ್ನು ಪಡೆಯುತ್ತಾರೆ. ಇದರೊಂದಿಗೆ ಪ್ರವಾಸಿ ಪ್ರಿಯರು ಆಗಾಗ ತಮ್ಮ ಸಂತೋಷಕ್ಕೆಂದು ಟಿಪ್ಸ್‌ ಹಣ ನೀಡುತ್ತಾರೆ. ಇನ್ನೂ ಖಾಸಗಿ ಕೇತ್ರದಲ್ಲಿ ಸರ್ಫಿಂಗ್‌, ಬೋಟ್‌ ರೈಡಿಂಗ್‌ ಹೀಗೆ ಹಲವು ಮನೋರಂಜನೆ ಒಳಗೊಂಡ ಸ್ಥಳವಾದರೆ ಮಾಸಿಕ 20ರಿಂದ 23 ಸಾವಿರ ರೂ. ಗಳಿಸಬಹುದು. ಪ್ರವಾಸಿ ಕಥನದ ಕುರಿತು ಬ್ಲಾಗ್‌ ಮಾಡಿ ಉತ್ತಮ ಲೇಖನ ಮತ್ತು ಫೋಟೊ ಹಾಕಿದರೆ ಜನಪ್ರಿಯರಾಗಬಹುದು. ವಿಡಿಯೋ ಡಾಕಿಮೆಂಟರಿ ಮಾಡಿದರೆ ಪ್ರವಾಸಿಗರು ಆ ಸ್ಥಳವನ್ನು ಗುರುತಿಸಿ ನಿಮ್ಮ ಪ್ರಸ್ತುತತೆ ಇಷ್ಟಪಡುತ್ತಾರೆ.

ಗುಣ ವಿಶೇಷತೆ
  ಉತ್ತಮ ಸಂವಹನ ಕೌಶಲ
  ಸಂಶೋಧನಾತ್ಮಕ ಗುಣವಿರಬೇಕು.
  ಸ್ಥಳದ ಕುರಿತು ಪರಿಪೂರ್ಣ ಮಾಹಿತಿ ಹೊಂದಿರಬೇಕು.
  ರಕ್ಷಣೆ ಕುರಿತು ತರಬೇತಿಯನ್ನು ಹೊಂದಿರಬೇಕು.
  ಸಮಯ ಹೊಂದಿಸಿಕೊಳ್ಳುವ ಕೌಶಲವಿರಬೇಕು.
  ವಿವಿಧ ಭಾಷೆಗಳನ್ನು ತಿಳಿದಿರಬೇಕು.

ಕೋರ್ಸ್‌
ಟ್ರಾವೆಲ್‌ ಮತ್ತು ಟೂರಿಸಂ ಕೇತ್ರದಲ್ಲಿ ಬಿ.ಎ., ಬಿಎಸ್ಸಿ, ಎಂಎಸ್‌ಇ, ಎಂಬಿಎ ಮಾಡಿದವರಿಗೆ ವಿಶೇಷ ಮಾನ್ಯತೆ ಇದೆ. ಇದರಲ್ಲಿ ಟ್ರಾವೆಲ್‌ ಎಜೆಂಟ್‌, ಟೂರಿಸಂ ಆಫಿಸರ್‌, ಟೂರ್‌ ಕನ್ಸಲ್ಟ್, ಟ್ರಾವೆಲ್‌ ಕನ್ಸಲ್ಟ್, ಫ್ರೀ ಲೆಸ್‌ ಟೂರ್‌ ಮ್ಯಾನೇಜರ್‌ (ಟೂರ್‌ ಗೈಡ್‌) ಹೀಗೆ ವಿಪುಲ ಅವಕಾಶವು ಈ ಕ್ಷೇತ್ರದಲ್ಲಿರುವುದನ್ನು ಕಾಣಬಹುದು.

  ರಾಧಿಕಾ, ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ