ಪತ್ರಿಕೋದ್ಯಮದ ವಿವಿಧ ಮಜಲುಗಳು

Team Udayavani, May 22, 2019, 6:00 AM IST

ಒಂದು ಕಾಲದಲ್ಲಿ ಕಲಾ ವಿಭಾಗವೆಂದರೆ ಎಲ್ಲರಲ್ಲೂ ತಿರಸ್ಕಾರ. ಆದರೆ ಇಂದು ಮನಸ್ಥಿತಿ ಬದಲಾಗಿದೆ. ಕಲಾ ಭಾಗವನ್ನು ಪತ್ರಿಕೋದ್ಯಮದ ಸಲುವಾಗಿ ಆಯ್ದುಕೊಳ್ಳುವವರು ಹೆಚ್ಚಿನವರಾಗಿದ್ದಾರೆ. ಇವರಿಗಾಗಿ ಅನೇಕ ಮೂಲಗಳಿಂದಲೂ ಮಾಹಿತಿ ಲಭ್ಯವಿದೆಯಾದರೂ ಸರಳ, ಸುಂದರವಾಗಿ ವಿಷಯಗಳನ್ನು ಕ್ರೋಡಿಕರಿಸುವುದಕ್ಕಾಗಿ ಲೇಖಕ ಡಾ| ಹಂಪೇಶ್‌ ಅವರು “ಪತ್ರಿಕೋದ್ಯಮದ ವಿವಿಧ ಆಯಾಮಗಳು’ ಎಂಬ ಪುಸ್ತಕದ ಮೂಲಕ ಓದುಗರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ವಿಷಯಗಳನ್ನು ಮಂಡಿಸಿದ್ದಾರೆ.

ಘಟನೆ: 1
ಮಾರುಕಟ್ಟೆಗಳಲ್ಲಿ ಇಂದು ನಮಗೆ ಹೇರಳವಾಗಿ ಸಿಗುವ ವಿದೇಶಿ ಬರಹಗಾರರ ಪುಸ್ತಕಗಳಲ್ಲಿ ಗುಣಮಟ್ಟವಿರುತ್ತದೆ. ಆದರೆ ಕತೃಗಳು ಅವರ ದೇಶದ ಪತ್ರಿಕಾ ರಂಗದ ಸ್ಥಿತಿಗತಿ ಹಾಗೂ ಆಯಾಮಗಳ ಕುರಿತು ಕೃತಿಯನ್ನು ರಚಿಸಿರುತ್ತಾರೆ. ಆದರೆ ಅವು ಇನ್ನೊಂದು ದೇಶದ ಸ್ಥಿತಿಗತಿಗಳಿಗೆ ತಾಳೆಯಾಗಲೂಬಹುದು, ಅಥವಾ ಭಿನ್ನವಾಗಿರಲೂಬಹುದು. ಆಯಾಯ ದೇಶದ ಸ್ಥಿತಿಗನುಗುಣವಾಗಿ ಮಾಹಿತಿ ನೀಡುವ ಪುಸ್ತಕಗಳು ಮುಖ್ಯವಾಗಿರುತ್ತದೆ.

ಘಟನೆ: 2
ಪತ್ರಿಕೋದ್ಯಮದಲ್ಲಿ ದೇಶೀಯ ಉದ್ಯಮದ ಬೆಳವಣಿಗೆಗೆ ಪೂರಕವಾಗುವಂತೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದು, ಪತ್ರಿಕೋದ್ಯಮವನ್ನು ಆಸಕ್ತಿಯಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೂ ಇದು
ಪ್ರಯೋಜನವಾಗಲಿದೆ.

ಘಟನೆ: 3
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಂತರ್ಜಾಲ, ಆಧುನಿಕ ಮುದ್ರಣ ತಂತ್ರಜ್ಞಾನ, ಛಾಯಾಚಿತ್ರ ಗ್ರಹಣ ಹೀಗೆ ಹಲವು ವಿಷಯಗಳಿಗೆ ಸುಗಮವಾದ ದಾರಿಯನ್ನು ನಿರ್ಮಿಸಿಕೊಳ್ಳುವುದು ಹೇಗೆ ಎಂಬುದನ್ನು ಲೇಖಕರು ವಿವರಿಸುತ್ತಾರೆ. ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳು ಆಸಕ್ತಿಯಿಂದ ಯಾವುದರಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸುಂದರವಾಗಿ ವರ್ಣಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಯಾವುದೋ 10-15 ಪುಸ್ತಕಳನ್ನು ಓದಿ ಅರ್ಥ ಮಾಡಿಕೊಳ್ಳುವುದನ್ನು ಸುಲಭವಾಗಿ ಒಂದೇ ಪುಸ್ತಕವನ್ನು ಓದಿ ಅರ್ಥ ಮಾಡಿಕೊಳ್ಳಬಹುದಾಗಿದೆ.

-  ಪ್ರೀತಿ ಭಟ್‌ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ