ಮುಂದಿನ ತಿಂಗಳಲ್ಲಿ “2 ಎಕ್ರೆ’ ಸೇಲ್‌

Team Udayavani, Nov 7, 2019, 3:25 AM IST

ಒನ್‌ಲೈನ್‌ ಸಿನೆಮಾ ಲಾಂಛನದಲ್ಲಿ ಸಂದೇಶ್‌ರಾಜ್‌ ಬಂಗೇರ, ರೋಹನ್‌ ಕೋಡಿಕಲ್‌ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದಲ್ಲಿ ತಯಾರಾದ “ರಡ್ಡ್ ಎಕ್ರೆ’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ.

ನವೀನ್‌ ಡಿ. ಪಡೀಲ್‌-ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿತ್ತು. ಅದನ್ನು ಡೀಲ್‌ ಮಾಡುವ ಕಥಾನಕವೇ “ರಡ್ಡ್ ಎಕ್ರೆ’. ವಿಸ್ಮಯ ವಿನಾಯಕ್‌ ಚೊಚ್ಚಲ ನಿರ್ದೇಶನದ ಈ ಸಿನೆಮಾ ಬಗ್ಗೆ ಈಗ ಇಂತಹ ಒಂದೊಂದೇ ಕುತೂಹಲಗಳು ಈಗ ಕೋಸ್ಟಲ್‌ವುಡ್‌ನ‌ಲ್ಲಿ ಶುರುವಾಗಿವೆ.

ಇದೇ ತಿಂಗಳಿನಲ್ಲಿ ಸಿನೆಮಾ ರಿಲೀಸ್‌ ಬಗ್ಗೆ ಚಿತ್ರತಂಡ ನಿರ್ಧರಿಸಿತ್ತಾದರೂ, ಈಗ ಮುಂದಿನ ತಿಂಗಳಿನ ಪ್ರಾರಂಭದಲ್ಲಿ ಸಿನೆಮಾ ರಿಲೀಸ್‌ ಮಾಡುವ ಬಗ್ಗೆ ಚಿತ್ರತಂಡ ಯೋಚಿಸಿದೆ.

“ಜಾಗೆ ರಡ್ಡ್ ಎಕ್ರೆ.. ಬೈದೆರ್‌ ಲಪ್ಪೆರೆ.. ಜಾಗೆದಕುಲು ಬನ್ನಗ ಮಾತ ಒತ್ತರೆ’ ಎಂಬ ಟೈಟಲ್‌ ಸಾಂಗ್‌ ಮೂಲಕ ಆರಂಭವಾಗಲಿರುವ ಈ ಸಿನೆಮಾ ಕುತೂಹಲ ಮೂಡಿಸಿದೆ. “ಡೆಂಗ್ಯೂ.. ಡೆಂಗ್ಯೂ’ ಎಂದು ಇತ್ತೀಚೆಗೆ ಹಾಡಿನ ಮೂಲಕ ಮೋಡಿ ಮಾಡಿದ್ದ ವಿಸ್ಮಯ ವಿನಾಯಕ್‌ ರಡ್ಡ್ ಎಕ್ರೆಯ ಟೈಟಲ್‌ ಸಾಂಗ್‌ ಬರೆದಿದ್ದಾರೆ. ಶಶಿರಾಜ್‌ ರಾವ್‌ ಕಾವೂರು ಬರೆದಿರುವ “ಪಗೆಲ್‌ ಕರೀಂಡ್‌… ಮುಗಲ್‌ ಕಬೀಂಡ್‌..’ ಹಾಗೂ “ಇನಿ ದಾನೆ ಕುಸ್ಕೊಂದುಂಡು’ ಹಾಡುಗಳು ರಡ್ಡ್ ಎಕ್ರೆ ಸಿನೆಮಾದಲ್ಲಿದೆ. ಇದೇ ಮೊದಲ ಬಾರಿಗೆ ಪೃಥ್ವೀ ಅಂಬರ್‌ ಈ ಸಿನೆಮಾದಲ್ಲಿ ಹಾಡಿದ್ದಾರೆ.

ದೀಪಕ್‌ ಕೋಡಿಕಲ್‌ ಕೂಡ ಸ್ವರ ನೀಡಿದ್ದಾರೆ. ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತ ಒದಗಿಸಿದ್ದಾರೆ. ಪಡೀಲ್‌, ಬೋಳಾರ್‌, ಉಮೇಶ್‌ ಮಿಜಾರ್‌, ದೀಪಕ್‌ ರೈ ಪಾಣಾಜೆ, ಮಂಜು ರೈ ಮೂಳೂರು ಸಹಿತ ಹಲವು ಖ್ಯಾತನಾಮರು ಈ ಸಿನೆಮಾದಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ