ಒಂದೇ ತಿಂಗಳಲ್ಲಿ 3 ತುಳು ಸಿನೆಮಾ!


Team Udayavani, Oct 31, 2019, 4:46 AM IST

e-13

“ಗಿರಿಗಿಟ್‌’ ಹವಾ ಕರಾವಳಿ, ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದಂತೆ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆಯ ಸಿನೆಮಾಗಳು ಒಂದೊಂದಾಗಿ ಈಗ ಸೆನ್ಸಾರ್‌ ಅನುಮತಿ ಪಡೆದು ರಿಲೀಸ್‌ನ ಹೊಸ್ತಿಲಲ್ಲಿವೆ. ಮೂರು ಸಿನೆಮಾಗಳು ಮುಂದಿನ ತಿಂಗಳಿನಲ್ಲಿಯೇ ಬಿಡುಗಡೆಯ ತವಕದಲ್ಲಿವೆ.

ಒಂದೇ ತಿಂಗಳಿನಲ್ಲಿ ಮೂರು ಸಿನೆಮಾ ಬಿಡುಗಡೆಯಾದರೆ ಕೋಸ್ಟಲ್‌ವುಡ್‌ನ‌ಲ್ಲಿ ಮತ್ತೂಮ್ಮೆ ವಿವಾದ ಸದ್ದು ಮಾಡಲಿದೆ. ಸಮಯ ನೋಡಿಕೊಂಡು ಚಿತ್ರ ನಿರ್ಮಾಪಕರು-ನಿರ್ದೇಶಕರು- ಕಲಾವಿದರಿಗೆ ನೋವಾಗದಂತೆ, ಪ್ರೇಕ್ಷಕರಿಗೆ ಗೊಂದಲವಾಗದಂತೆ ಸಿನೆಮಾ ಬಿಡುಗಡೆ ಬಗ್ಗೆ ನಿರ್ಮಾಪಕರು ಮನಸ್ಸು ಮಾಡಬೇಕಿದೆ.

ಅಂದ ಹಾಗೆ, ಜಬರ್ದಸ್ತ್ ಶಂಕರ, ಆಟಿಡೊಂಜಿ ದಿನ ಹಾಗೂ ಕುದ್ಕನ ಮಮದ್ಮೆ ಸಿನೆಮಾಗಳು ಈಗ ಸೆನ್ಸಾರ್‌ನ ಅಂತಿಮ ಹಂತವನ್ನು ಪೂರ್ಣಗೊಳಿಸಿದ್ದು, ಬಿಡುಗಡೆಯ ಲೆಕ್ಕಾಚಾರ ದಲ್ಲಿವೆ. ಮೂವರಿಗೂ ಮಂಗಳೂರಿನಲ್ಲಿ ಜ್ಯೋತಿ ಹಾಗೂ ಉಡುಪಿಯಲ್ಲಿ ಕಲ್ಪನಾ ಥಿಯೇಟರ್‌ ಸಿಗಬೇಕು ಎಂಬುದು ನಿರೀಕ್ಷೆ. ಆದರೆ, ಜ್ಯೋತಿಯಲ್ಲಿ ಗಿರಿಗಿಟ್‌ ಈಗಾಗಲೇ ಪ್ರದರ್ಶನದಲ್ಲಿರುವುದರಿಂದ ಸದ್ಯಕ್ಕೆ ಜ್ಯೋತಿ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತದೆ. ಹೀಗಾಗಿ ಇತರ ಸಿಂಗಲ್‌ ಥಿಯೇ ಟರ್‌ನತ್ತ ಮೂರೂ ಸಿನೆಮಾದವರು ನಿರೀಕ್ಷೆ ಇರಿಸಿದ್ದಾರೆ.

ಜಬರ್ದಸ್ತ್ ಶಂಕರ
ಜಲನಿಧಿ  ಫಿಲಂಸ್‌ ಲಾಂಛನದಲ್ಲಿ ತಯಾರಾದ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಜಬರ್‌ದಸ್ತ್ ಶಂಕರ್‌ ಸಿನೆಮಾ ನವೆಂಬರ್‌ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ. ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ ಬಿ. ಸಾಯಿಕೃಷ್ಣ, ಸತೀಶ್‌ ಬಂದಲೆ, ಗೋಪಿನಾಥ ಭಟ್‌, ಗಿರೀಶ್‌ ಎಂ. ಶೆಟ್ಟಿ ಕಟೀಲು, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಪ್ರತೀಕ್‌ ಶೆಟ್ಟಿ, ಸುನಿಲ್‌ ನೆಲ್ಲಿಗುಡ್ಡೆ, ಶರಣ್‌ ಕೈಕಂಬ, ತಿಮ್ಮಪ್ಪ ಕುಲಾಲ್‌ ಹಾಗೂ ಚಾಪರಕ ತಂಡದ ಕಲಾವಿದರು ಇದ್ದಾರೆ.

ಆಟಿಡೊಂಜಿ ದಿನ
ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ ರಾಧಾಕೃಷ್ಣ ನಾಗರಾಜು ನಿರ್ಮಾಣದ “ಆಟಿಡೊಂಜಿ ದಿನ’ ತುಳು ಸಿನೆಮಾಕ್ಕೆ ಸೆನ್ಸಾರ್‌ನಲ್ಲಿ ಯು/ಎ ಸರ್ಟಿಫಿಕೇಟ್‌ ಲಭಿಸಿ, ನವೆಂಬರ್‌ನಲ್ಲೇ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಹ್ಯಾರಿಸ್‌ ಕೊಣಾಜೆಕಲ್ಲು ಈ ಸಿನೆಮಾವನ್ನು ಮೊದಲು ನಿರ್ದೇಶಿಸಿದ್ದರು. ಪ್ರಸ್ತುತ ಎ.ಎಸ್‌. ವೈಭವ್‌ ಪ್ರಶಾಂತ್‌ ನಿರ್ದೇಶನ ಮಾಡಿದ್ದರು. ಪೃಥ್ವಿ ಅಂಬರ್‌ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿ, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ವಾಸು ಮಲ್ಪೆ, ಶ್ರದ್ಧಾ ಸಾಲ್ಯಾನ್‌, ದೀಪಕ್‌ ರೈ ಪಾಣಾಜೆ, ಅನಿಲ್‌ ರಾಜ್‌, ವಿಶ್ವನಾಥ್‌ ಮೂಡುಬಿದಿರೆ, ಸೂರಜ್‌ ಸಾಲ್ಯಾನ್‌, ಸುರೇಂದ್ರ ಕುಮಾರ್‌ ಹೆಗ್ಡೆ, ಶೈಲಶ್ರೀ ತಾರಾಗಣದಲ್ಲಿದ್ದಾರೆ.

ಕುದ್ಕನ ಮಮದ್ಮೆ
ಜಿಆರ್‌ಕೆ ನಿರ್ಮಾಣದ, ಎ.ವಿ. ಜಯರಾಜ್‌ ನಿರ್ದೇಶನದ “ಕುದ್ಕನ ಮಮದ್ಮೆ’ ಸಿನೆಮಾಕ್ಕೂ ಸೆನ್ಸಾರ್‌ ದೊರಕಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದೆ. ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ ನಿರ್ಮಾಣದ ಈ ಸಿನೆಮಾದಲ್ಲಿ ಪೃಥ್ವೀ ಅಂಬರ್‌, ಶೀತಲ್‌ ನಾಯಕ್‌, ದೇವಿಪ್ರಕಾಶ್‌ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್‌ ರಾವ್‌, ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್‌ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್‌ ಉಳ್ಳಾಲ್‌, ಸೂರಜ್‌ ಸಾಲ್ಯಾನ್‌, ಮೋಹನ್‌ ಕೊಪ್ಪಳ, ಚೇತನ್‌ ಕದ್ರಿ, ಸುಮತಿ ಹಂದೆ, ಉದಯ ಆಳ್ವ ಸುರತ್ಕಲ್‌, ಯಶವಂತ್‌ ಶೆಟ್ಟಿ ಕೃಷ್ಣಾಪುರ, ಸುನಿಲ್‌ ಪಡುಬಿದ್ರಿ, ಕೃಷ್ಣ ಸುರತ್ಕಲ್‌, ರವೀಶ್‌ ಜೋಗಿ, ಯೋಗೀಶ್‌, ಅರುಣ್‌ ಶೆಟ್ಟಿ, ಸುಮಿತ್ರಾ ರೈ, ಕಿಶೋರ್‌ ಡಿ. ಶೆಟ್ಟಿ ನಟಿಸಿದ್ದಾರೆ.

-  ದಿನೇಶ್‌ ಇರಾ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.