Udayavni Special

ವರ್ಷಕ್ಕೊಂದು ಕುಟುಂಬ ಪ್ರವಾಸ; ಸಂಬಂಧ ವೃದ್ಧಿಗೆ ಸೂಕ್ತ ಹೂಡಿಕೆ


Team Udayavani, Feb 27, 2020, 4:09 AM IST

JADU-14

ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ ಪಾಠ ಕಲಿಯಬೇಕಾದ ನಮ್ಮ ಮಕ್ಕಳಿಗೂ ಲಾಭ. ಹಾಗಾಗಿ ಈ ಮೇ ರಜೆಯಲ್ಲೇ ಆರಂಭಿಸಿ ಎನ್ನುತ್ತಾರೆ ಸುಮೇಧ.

ಕುಟುಂಬ ಪ್ರವಾಸ ಹೋಗುವ ಅಭ್ಯಾಸ ಮಾಡಿಕೊಳ್ಳಿ ನೀವು ಎಂದಾದರೂ ಕುಟುಂಬ ಪ್ರವಾಸ ಹೋಗಿದ್ದೀರಾ? ಹೋಗದೆ ಇದ್ದರೆ ಈ ಬಾರಿ ಮಕ್ಕಳ ಶಾಲೆ ಮುಗಿದ ಕೂಡಲೇ ಒಂದು ಊರನ್ನು ಗೊತ್ತು ಮಾಡಿಕೊಳ್ಳಿ. ಕುಟುಂಬ ಪ್ರವಾಸ ಇರುವುದೇ ಪರಸ್ಪರ ಬೆರೆಯಲು. ನಮ್ಮ ಮನಸ್ಸಿನ ಭಾರವನ್ನು ಕಳೆದುಕೊಳ್ಳುವುದಕ್ಕಾಗಿ, ಒತ್ತಡದ ಹೊರೆಯನ್ನು ಕೆಳಗಿಳಿಸುವುದಕ್ಕಾಗಿ ಕುಟುಂಬ ಪ್ರವಾಸ ಬೇಕೇಬೇಕು.

ಹಿಂದೆ ಮನೆಯವರೆಲ್ಲಾ ಸೇರಿ ವರ್ಷಕ್ಕೊಮ್ಮೆ ತೀರ್ಥ ಕ್ಷೇತ್ರಗಳ ಅಥವಾ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಹೋಗುತ್ತಿದ್ದರು. ಊರಿನ ಕೆಲವು ಮಂದಿ ಸೇರಿ ಒಂದು ವಾಹನವನ್ನು ಮಾಡಿಕೊಂಡು, ಒಂದು ವಾರವೋ, ಹತ್ತು ದಿನವೋ ತಿರುಗಾಟಕ್ಕೆ ಹೋಗುತ್ತಿದ್ದುದು ನೆನಪಿರಬಹುದು. ಅವೆಲ್ಲವೂ ಮಾಡುತ್ತಿದ್ದುದು ದೇವರ ದರ್ಶನಕ್ಕಷ್ಟೇ ಅಲ್ಲ ; ನಮ್ಮ ನಮ್ಮ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವುದಕ್ಕಾಗಿ. ನಮ್ಮನ್ನು ನಾವು ಮತ್ತಷ್ಟು ಅರಿತುಕೊಳ್ಳಲಿಕ್ಕಾಗಿ.

ಆಧುನಿಕ ಯುಗದಲ್ಲಿ ಸಂಬಂಧಗಳು ಹೇಗೆ ಬದಲಾಗಿವೆ ಅಥವಾ ಪುನರ್‌ ರೂಪ ಪಡೆದಿವೆ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಹಿಂದೆ ಅಪ್ಪ-ಮಕ್ಕಳ ನಡುವೆ ಇದ್ದಿರಬಹುದಾದ ಅಂತರ ಇಂದು ಕಡಿಮೆಯಾಗಿದೆ. ಇಂದು ಹೆತ್ತವರು-ಮಕ್ಕಳು ಒಂದು ವಯಸ್ಸಿನ ಬಳಿಕ ಗೆಳೆಯರಿದ್ದಂತೆ. ಇದು ಒಂದು ಸಂಬಂಧಗಳಿಗೆ ಹೇಳುತ್ತಿಲ್ಲ. ಅದೇ ರೀತಿಯಲ್ಲೇ ಹಿಂದಿನ ತೀರ್ಥ ಕ್ಷೇತ್ರ ತಿರುಗಾಟವು ಈಗ ಕುಟುಂಬ ಪ್ರವಾಸವಾಗಿ ಪುನರ್‌ರೂಪ ಪಡೆಯುತ್ತಿದೆ.

ನಿಮಗಲ್ಲ, ನಿಮ್ಮ ಮಕ್ಕಳಿಗಿರಲಿ
ಹಿಂದೆಲ್ಲಾ ಅಪ್ಪ-ಅಮ್ಮಂದಿರನ್ನು ಪ್ರವಾಸಕ್ಕೆ ಕರೆದಾಗ (ಹಿರಿಯ ತಲೆಮಾರಿನಲ್ಲಿ ಕೆಲವರು), ನಮಗೆ ವಯಸ್ಸಾಗಿದೆ. ಅದೆಲ್ಲಾ ಬೇಡಪ್ಪಾ, ನೀವೇ ಹೋಗಿ ಬನ್ನಿ ಎನ್ನುತ್ತಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಆದರೆ ಮಧ್ಯ ವಯಸ್ಕನಲ್ಲಿರುವ ನಾವು “ಬ್ಯುಸಿ’ ಯ ಕಾರಣವೊಡ್ಡಿ ದೂರ ಯಾಕೆ, ಮನೆಯಲ್ಲೇ ಸುಮ್ಮನೆ ಇದ್ದು ಬಿಡೋಣ ಎಂದುಕೊಳ್ಳುತ್ತಿದ್ದೇವೆ. ಪ್ರತಿ ವಾರಾಂತ್ಯ ಬಂದಾಗಲೂ ಮಾಡುವುದು ಅದನ್ನೇ. ಹತ್ತಿರದ ಸಂಬಂಧದ ಮನೆಗೆ ಹೋಗಲೂ ಟ್ರಾಫಿಕ್‌ ಬಿಡೋಲ್ಲ, ಪಕ್ಕದ ಬೀದಿಯಲ್ಲಿರುವ ಮನೆಗೆ ಹೋಗಲಿಕ್ಕೆ, ಅವರಿದ್ದಾರೋ ಇಲ್ಲವೋ ಗೊತ್ತಿಲ್ಲ, ಸುಮ್ಮನೆ ತೊಂದರೆ ಯಾಕೆ ಎಂದುಕೊಂಡು ಟಿವಿ ಹಾಕಿಕೊಂಡು ಇದ್ದು ಬಿಡುತ್ತೇವೆ. ವರ್ಷಕ್ಕೊಮ್ಮೆಯಾದರೂ ಪ್ರವಾಸಕ್ಕೆ ಹೊರಡಿ. ಅದರಲ್ಲೂ ಚಿಕ್ಕ ಮಕ್ಕಳು ಇರುವ ಕುಟುಂಬವಂತೂ ಈ ಅವಕಾಶವನ್ನು ತಪ್ಪಿಸಲೇಬೇಡಿ.

ಸಮಾಜವೇ ಕಲಿಕಾ ಮನೆ
ನಾವು ತರಗತಿ ಕೋಣೆಯಲ್ಲಿ ಕಲಿಯುವುದು ಇದ್ದದ್ದೇ. ಹೊರಗೆ ಕಲಿಯಲು ಬಹಳಷ್ಟಿದೆ. ಮಕ್ಕಳಿಗೆ ಈ ಲೋಕದಲ್ಲಿ ಕಲಿಯಲು ಸಿಗುವ ಅವಕಾಶವೇ ಪ್ರವಾಸ. ಲೋಕಜ್ಞಾನವಿಲ್ಲದಿದ್ದರೆ ಲೋಕವನ್ನು ಗೆಲ್ಲುವುದು ಹೇಗೆ? ಅದಕ್ಕಾಗಿಯೇ ಈ ಪ್ರವಾಸ ಅವಶ್ಯ.

ವರ್ಷಕ್ಕೊಂದು ಇರಲಿ
ಈ ಮಾತು ಹೇಳುತ್ತಿರುವುದು ಇಷ್ಟೇ. ಇಂದಿನ ಒತ್ತಡದ ಯುಗದಲ್ಲಿ ವರ್ಷಕ್ಕೊಮ್ಮೆ ಒಂದು ವಾರ ಇಡೀ ಕುಟುಂಬ ಯಾವುದೋ ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಿ ಒಟ್ಟಿಗೆ ಕಳೆದರೆ ಸಿಗುವ ಸುಖ ಎಷ್ಟು ಹಣ ಒಟ್ಟುಗೂಡಿಸಿದರೂ ಬಾರದು.

ಪರಿಸರ ಪ್ರೀತಿ
ಪರಿಸರ ಪ್ರೀತಿ ಮಕ್ಕಳಿಗೆ ಎಲ್ಲಿಂದ ಬರುತ್ತದೆ? ಈ ಪ್ರಶ್ನೆಗೆ ಪ್ರವಾಸವೂ ಒಂದು ಉತ್ತರ. ಯಾಕೆಂದರೆ, ಪ್ರವಾಸದಲ್ಲಿ ಹೆಚ್ಚು ಬೆರೆಯುವುದು ಪರಿಸರದ ಜತೆಗೆ. ಅದು ಕಲಿಸುವ ಪಾಠ ಮತ್ತು ಅರಿವು ವಿಶೇಷವಾದದ್ದು. ಪೋಷಕರಾದ ನಾವೂ ಪರಿಸರದ ಬಗೆಗಿನ ಕಾಳಜಿ ಬೆಳೆಸಲು ಪ್ರವಾಸವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು. ಇವು ಕೆಲವೇ ಕಾರಣಗಳು. ಆದರೆ ಕುಟುಂಬ ಪ್ರವಾಸ ಸೂಕ್ತ ಎಂಬುದಕ್ಕೆ ಹಲವು ಕಾರಣಗಳಿವೆ. ದೈನಂದಿಕ ಬದುಕಿನ ಕಾರ್ಯ ಒತ್ತಡದಿಂದ ಮುಕ್ತಿಗೊಳಿಸುವುದಲ್ಲದೇ, ಬದುಕಿನ ಪಾಠವನ್ನು ಕಲಿಸುತ್ತದೆ. ಅದಕ್ಕೇ ಈ ಮೇ ತಿಂಗಳ ರಜೆಗೆ ಈಗಲೇ ಸಿದ್ಧತೆ ಆರಂಭಿಸಿ.

ಮಕ್ಕಳ ಚುರುಕುತನ ಹೆಚ್ಚಳ
ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಹೋಗುವ ಪ್ರವಾಸ ಮಕ್ಕಳಲ್ಲಿನ ಬುದ್ಧಿಯನ್ನು ಇನ್ನಷ್ಟು ಚುರುಕು ಗೊಳಿಸುತ್ತದೆ. ಮಕ್ಕಳ ಸ್ವಭಾವವೇ ಕುತೂಹಲ, ಪ್ರಶ್ನಿಸುವುದು, ಅನ್ವೇಷಣೆ. ಆ ಸ್ವಭಾವದ ನಿರಂತರತೆಗೆ ಪ್ರವಾಸ ಸಹಾಯ ಮಾಡಬಲ್ಲದು. ಪ್ರವಾಸ ಹೋಗುವ ಕುಟುಂಬದಲ್ಲಿನ ಮಕ್ಕಳಲ್ಲಿ ಕುತೂಹಲ ಹೆಚ್ಚಿರುತ್ತದೆ. ಅದೇ ಸ್ವಭಾವ ತಾರುಣ್ಯಕ್ಕೆ ಬಂದಾಗ ಸಾಹಸ ಪ್ರವೃತ್ತಿಯಾಗಿ ಪರಿವರ್ತನೆಯಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಚಾಮರಾಜ ನಗರ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ ಡೌನ್ : ಜಿಲ್ಲಾಡಳಿತ ನಿರ್ಧಾರ

ಚಾಮರಾಜ ನಗರ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ ಡೌನ್ : ಜಿಲ್ಲಾಡಳಿತ ನಿರ್ಧಾರ

ನಿಯಂತ್ರಣಕ್ಕೆ ಬರುತ್ತಿಲ್ಲ ಸೋಂಕು ; ರಾಜ್ಯದಲ್ಲಿಂದು 2738 ಪ್ರಕರಣ ; 73 ಸಾವು; 839 ಚೇತರಿಕೆ

ನಿಯಂತ್ರಣಕ್ಕೆ ಬರುತ್ತಿಲ್ಲ ಸೋಂಕು ; ರಾಜ್ಯದಲ್ಲಿಂದು 2738 ಪ್ರಕರಣ; 73 ಸಾವು; 839 ಚೇತರಿಕೆ

ಪೈಲಟ್ ಗೆ ಎಷ್ಟು ಶಾಸಕರ ಬೆಂಬಲವಿದೆ; ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದೇನು ಗೊತ್ತಾ?

ಪೈಲಟ್ ಗೆ ಎಷ್ಟು ಶಾಸಕರ ಬೆಂಬಲವಿದೆ; ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದೇನು ಗೊತ್ತಾ?

ರಾಯಚೂರು, ಸಿಂಧನೂರು ನಗರಗಳಲ್ಲಿ ಜುಲೈ 15ರಿಂದ ಲಾಕ್ ಡೌನ್

ರಾಯಚೂರು, ಸಿಂಧನೂರು ನಗರಗಳಲ್ಲಿ ಜುಲೈ 15ರಿಂದ ಲಾಕ್ ಡೌನ್

ಚಾಮರಾಜನಗರ: ಕೋವಿಡ್‌ 19 ಸೋಂಕಿಗೆ ಎರಡನೇ ಬಲಿ

ಚಾಮರಾಜನಗರ: ಕೋವಿಡ್‌ 19 ಸೋಂಕಿಗೆ ಎರಡನೇ ಬಲಿ

Car-Quarrel

ಬೀದಿಗೆ ಬಂದ ಗಂಡ ಹೆಂಡತಿ ಜಗಳ ; ನಡು ರಸ್ತೆಯಲ್ಲಿ ಪತಿಯ ರೇಂಜ್ ರೋವರ್ ಗೆ ಪತ್ನಿ ಅಟ್ಯಾಕ್!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ವಾನ ಜಗದೊಳಗೆಒಂದು ಸುತ್ತಾಟ

ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ

kodibengre

ಪ್ರಕೃತಿ ಸೌಂದರ್ಯದ ಖನಿ ಕೋಡಿಬೇಂಗ್ರೆ

costalwood-kangal

ಕೊರೊನಾ ಕಪಿಮುಷ್ಟಿಗೆ ಕಂಗಾಲು!

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

pingara-2

ತೆರೆಗೆ ಬರಲು ಅಣಿಯಾಗಿದೆ ಪಿಂಗಾರ

MUST WATCH

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal


ಹೊಸ ಸೇರ್ಪಡೆ

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಮೈಸೂರು: ಜಿಲ್ಲೆಯಲ್ಲಿ ಒಂದೇ ದಿನ 151 ಕೋವಿಡ್ 19 ಪ್ರಕರಣ ದಾಖಲು; ಆರು ಸಾವು

ಮೈಸೂರು: ಜಿಲ್ಲೆಯಲ್ಲಿ ಒಂದೇ ದಿನ 151 ಕೋವಿಡ್ 19 ಪ್ರಕರಣ ದಾಖಲು; ಆರು ಸಾವು

H.D.ಕೋಟೆ: ತೆರೆದ ನೀರಿನ ಸಂಪಿಗೆ ಬಿದ್ದು ಮೂರು ವರ್ಷದ ಬಾಲಕಿ ದುರ್ಮರಣ

H.D.ಕೋಟೆ: ತೆರೆದ ನೀರಿನ ಸಂಪಿಗೆ ಬಿದ್ದು ಮೂರು ವರ್ಷದ ಬಾಲಕಿ ದುರ್ಮರಣ

ಚಾಮರಾಜ ನಗರ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ ಡೌನ್ : ಜಿಲ್ಲಾಡಳಿತ ನಿರ್ಧಾರ

ಚಾಮರಾಜ ನಗರ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಲಾಕ್‌ ಡೌನ್ : ಜಿಲ್ಲಾಡಳಿತ ನಿರ್ಧಾರ

ನಿಯಂತ್ರಣಕ್ಕೆ ಬರುತ್ತಿಲ್ಲ ಸೋಂಕು ; ರಾಜ್ಯದಲ್ಲಿಂದು 2738 ಪ್ರಕರಣ ; 73 ಸಾವು; 839 ಚೇತರಿಕೆ

ನಿಯಂತ್ರಣಕ್ಕೆ ಬರುತ್ತಿಲ್ಲ ಸೋಂಕು ; ರಾಜ್ಯದಲ್ಲಿಂದು 2738 ಪ್ರಕರಣ; 73 ಸಾವು; 839 ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.