ಕೋಸ್ಟಲ್‌ವುಡ್‌ಗೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ , ಸುನಿಲ್‌ ಶೆಟ್ಟಿ


Team Udayavani, Sep 20, 2018, 1:13 PM IST

20-sepctember-12.jpg

‘ನಾನು ತುಳು ಚಿತ್ರದಲ್ಲಿ ಅಭಿನಯಿಸುತ್ತೇನೆ. ಜತೆಗೆ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರೋಹಿತ್‌ ಶೆಟ್ಟಿ ಅವರೆಲ್ಲ ಈ ಸಿನೆಮಾದಲ್ಲಿ ಕೈ ಜೋಡಿಸಲಿದ್ದಾರೆ. ಯಾರೇ ನಿರ್ಮಾಪಕನಾಗಿದ್ದರೂ, ನನ್ನ ಭಾಷೆಯ ಸಿನೆಮಾದಲ್ಲಿ ನಾನು ಬಣ್ಣ ಹಚ್ಚಲು ರೆಡಿ ಇದ್ದೇನೆ. ಈ ಚಿತ್ರದಿಂದ ಬರುವ ಸಂಪೂರ್ಣ ಹಣವನ್ನು ಬಂಟ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡೋಣ… ಹೀಗೆ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಬಾಲಿವುಡ್‌ ನಟ, ‘ಆ್ಯಕ್ಷನ್‌ ಹೀರೋ’ ಸುನೀಲ್‌ ಶೆಟ್ಟಿ ಹೇಳುತ್ತಿದ್ದಂತೆ ಕೋಸ್ಟಲ್‌ ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಶತಕದ ಸಿನೆಮಾದ ಧಾವಂತದಲ್ಲಿರುವ ಕೋಸ್ಟಲ್‌ ವುಡ್‌ನ‌ಲ್ಲಿ ಸುನಿಲ್‌ ಶೆಟ್ಟಿ ಮಾತುಗಳು ಸಿನೆಮಾ ರಂಗಕ್ಕೆ ಇನ್ನಷ್ಟು ಟಾನಿಕ್‌ ಒದಗಿಸಿದಂತಾಗಿದೆ. ಅದರಲ್ಲೂ ಅವರ ಜತೆಗೆ ತುಳುನಾಡಿನ ಬಾಲಿವುಡ್‌ನ‌ ಖ್ಯಾತನಾಮರನ್ನು ಕೂಡ ಕರೆತರುವ ಬಗ್ಗೆ ಶೆಟ್ಟರ ಮಾತು ಕೋಸ್ಟಲ್‌ವುಡ್‌ಗೆ ಆನೆ ಬಲ ದೊರಕಿದಂತಾಗಿದೆ. 

ಅಂದಹಾಗೆ ಮೂಲತಃ ಮಂಗಳೂರಿನವರಾದ ಸುನೀಲ್‌ ಶೆಟ್ಟಿ ಹಿಂದಿಯಲ್ಲಿ ಒಂದೊಮ್ಮೆ ಆ್ಯಕ್ಷನ್‌ ಹೀರೋ ಎಂದೇ ಗುರುತಿಸಿಕೊಂಡವರು. ಆದರೆ, ತನ್ನದೇ ಭಾಷೆ ತುಳುವಿನಲ್ಲಿ ಅವರು ಇಲ್ಲಿಯವರೆಗೆ ಸಿನೆಮಾ ಮಾಡಿರಲಿಲ್ಲ. ವಿಶೇಷವೆಂದರೆ ಕನ್ನಡದಲ್ಲೂ ಮಾಡಿರಲಿಲ್ಲ. ಆದರೆ, ಈಗ ಸುದೀಪ್‌ ಜತೆಗೆ ‘ಪೈಲ್ವಾನ್‌’ ಸಿನೆಮಾದಲ್ಲಿ ಸುನಿಲ್‌ ಶೆಟ್ಟಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್‌ ಶೆಟ್ಟಿ ಅವರನ್ನು ಸುದೀಪ್‌ ‘ಅಣ್ಣಾ’ ಎಂದೇ ಕರೆಯುತ್ತಿದ್ದಾರೆ. 1992ರಲ್ಲಿ ‘ಬಲ್ವಾನ್‌’ ಚಿತ್ರದ ಮೂಲಕ ಕೆರಿಯರ್‌ ಶುರು ಮಾಡಿದ ಸುನಿಲ್‌ ಶೆಟ್ಟಿ ಹೆಚ್ಚಾ ಕಡಿಮೆ 26 ವರ್ಷ ಬಾಲಿವುಡ್‌ನ‌ಲ್ಲಿ ಮಿಂಚಿದ್ದಾರೆ. ದಿಲ್ವಾಲೆ, ಅಂತ್‌, ಬಾರ್ಡರ್‌, ಧಡ್ಕನ್‌ ಸಹಿತ ಹಲವು ಸಿನೆಮಾಗಳು ಸುನಿಲ್‌ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟಿವೆ.

ಇನ್ನು ವಿಶ್ವ ಸುಂದರಿ ಪಟ್ಟ ಪುರಸ್ಕೃತರಾದ ಐಶ್ವರ್ಯಾ ರೈ ಅವರನ್ನು, ಬಾಲಿವುಡ್‌ನ‌ ನಗುವಿನ ರಾಣಿ ಶಿಲ್ಪಾ ಶೆಟ್ಟಿ, ಹಿಂದಿಯಲ್ಲಿ ಯಶಸ್ವಿ ಸಿನೆಮಾ ನಿರ್ದೇಶಿಸಿದ ರೋಹಿತ್‌ ಶೆಟ್ಟಿ ಅವರನ್ನು ಕೂಡ ತುಳುವಿಗೆ ಕರೆತರುವ ಶೆಟ್ಟರ ಮಾತು ಹೊಸ ನಿರೀಕ್ಷೆ ಹುಟ್ಟಿಸಿದ್ದಂತೂ ಸುಳ್ಳಲ್ಲ.

ಯಾವಾಗ ಈ ಸಿನೆಮಾ ಸೆಟ್ಟೇರಲಿದೆ? ಯಾರೆಲ್ಲ ಈ ಸಿನೆಮಾದಲ್ಲಿ ಇರಲಿದ್ದಾರೆ? ಕಥೆ ಏನು? ಸುನಿಲ್‌ ಶೆಟ್ಟಿ ಅವರು ಕಥೆ- ಸಿನೆಮಾ ಬಗ್ಗೆ ಈಗಾಗಲೇ ಫೈನಲ್‌ ಮಾಡಿದ್ದಾರಾ? ಎಲ್ಲಿ ಶೂಟಿಂಗ್‌ ಆಗಲಿದೆ? ಎಂಬುದಕ್ಕೆಲ್ಲ ಸದ್ಯ ಉತ್ತರ ದೊರಕಿಲ್ಲ. ಇದಿಷ್ಟು ಬಾಲಿವುಡ್‌ ಸೆಲೆಬ್ರಿಟಿಗಳು ಕೋಸ್ಟಲ್‌ವುಡ್‌ ಎಂಟ್ರಿ ಬಗೆಗಿನ ವಿಷಯವಾದರೆ, ಬಾಲಿವುಡ್‌ ನಲ್ಲಿ ತುಳು ಭಾಷೆಯ ಬಗ್ಗೆ ಸಾಕಷ್ಟು ಬಾರಿ ಬಳಕೆ ಮಾಡಲಾಗಿದೆ ಎಂಬುದು ಕೂಡ ವಿಶೇಷ.

‘ಆಕೊರ್ಚನ್ನ… ಎಂಕ್ಲೆಗ್‌ ದಾಲ ಗೊತ್ತಿಜ್ಜಿ. ಎಂಕ್ಲೆಗ್‌ ದುಡ್ಡು ಕೊಪೆìರ್‌, ಅಯಿಕ್‌ ಬೇಲೆ ಮಲ್ಪುವ…’ ಹೀಗೊಂದು ತುಳು ಡೈಲಾಗ್‌ ಇರುವ ಸಿನೆಮಾವಿದೆ. ವಿಶೇಷ ಅಂದರೆ ಇದು ತುಳು ಚಿತ್ರವಲ್ಲ. ಬದಲಾಗಿ ‘ಸಿಂಗಂ’ ಹಿಂದಿ ಸಿನೆಮಾ. ಬಾಲಿವುಡ್‌ ಸಿನೆಮಾಗಳಲ್ಲಿ ತುಳು ಭಾಷೆಯ ಬಳಕೆ ನಡೆಯುತ್ತಲೇ ಇದೆ. ಬಾಲಿವುಡ್‌ನ‌ ಹಲವು ಸಿನೆಮಾದಲ್ಲಿ ತುಳು ಭಾಷೆಯನ್ನು ಕಲಾವಿದರು ಉಪಯೋಗಿಸಿದ್ದಾರೆ ಬಾಲಿವುಡ್‌ನ‌ಲ್ಲಿ ಸಖತ್‌ ಸುದ್ದಿ ಮಾಡಿದ ‘ಸಿಂಗಂ’ ಚಿತ್ರದಲ್ಲಿರುವ ಈ ಡೈಲಾಗ್‌ ತುಳುನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದೆ.

ಬಾಲಿವುಡ್‌ನ‌ಲ್ಲಿ ಸದ್ದು ಮಾಡಿದ ಇನ್ನೊಂದು ಚಿತ್ರ ‘ಆನ್‌’ನಲ್ಲಿ ಕೂಡ ತುಳು ಭಾಷೆಯ ಪ್ರಯೋಗ ನಡೆದಿದೆ. ಮುಂಬಯಿ ಭೂಗತ ಜಗತ್ತಿನ ಕುರಿತಂತೆ ಕಥೆಯಾಧಾರಿತ ಸಿನೆಮಾವಿದು. ಅಕ್ಷಯ್‌ ಕುಮಾರ್‌, ಸುನೀಲ್‌ ಶೆಟ್ಟಿ ಹಾಗೂ ಶತ್ರುಘ್ನ ಸಿನ್ಹಾ ಈ ಸಿನೆಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು. ಇದರಲ್ಲಿ ಸುನಿಲ್‌ ಶೆಟ್ಟಿ ‘ಅಪ್ಪು ನಾಯಕ್‌’ ಎಂಬ ಪಾತ್ರಧಾರಿ. ಸಿನೆಮಾದ ಬಹುತೇಕ ಭಾಗದಲ್ಲಿ ಶೆಟ್ಟಿ ಅವರು ತುಳುವಿನಲ್ಲೇ ಮಾತನಾಡುತ್ತಾರೆ. ಕೋಪಗೊಂಡಾಗ ತುಳು ಭಾಷೆಯ ಬೈಗುಳ, ಹೆಂಡತಿಯ ಜತೆಗೆ ಮಾತನಾಡುವಾಗ ‘ಎನ್ನ ಪರ್ಸ್‌ ಓಲುಂಡು?’ ಕೇಳುವ ದೃಶ್ಯ, ಮಗುವಿನ ಜತೆಗೆ ದೂರವಾಣಿಯಲ್ಲಿ ಮಾತನಾಡುವಾಗ ‘ಪೇರ್‌ ಪರ್‌.. ಪೇರ್‌ ಪರಮ್ಮ’ ಎಂಬ ಸಂಭಾಷಣೆಗಳು ಗಮನ ಸೆಳೆಯುತ್ತವೆ.

ಮಧುರ್‌ ಭಂಡಾರ್ಕರ್‌ ನಿರ್ದೇಶನದ ‘ಚಾಂದಿನಿ ಬಾರ್‌’ ಸಿನೆಮಾದಲ್ಲೂ ತುಳು ಭಾಷೆಯ ಸೊಗಡಿದೆ. ಬಾರ್‌ ಗರ್ಲ್ಸ್‌ ಕಥೆಯಾಧಾರಿತ ಸಿನೆಮಾವಾಗಿರುವ ಇದರಲ್ಲಿ ಟಬು ಹಾಗೂ ಅತುಲ್‌ ಕುಲಕರ್ಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಲೇಡೀಸ್‌ ಬಾರ್‌ ಮಾಲಕ ಇದರಲ್ಲಿ ‘ಶೇಖರಣ್ಣ ಪನ್ಲ’ ಎಂದು ಹೇಳುತ್ತ ತುಳು ಸಂಭಾಷಣೆ ಮಾಡಿದ್ದಾರೆ. ‘ಆಲ್‌ ದಿ ಬೆಸ್ಟ್‌’ ಹಿಂದಿ ಸಿನೆಮಾದಲ್ಲಿ ಜಾನಿ ಲಿವರ್‌ ಬಳಸುವ ತುಳು ಉಲ್ಲೇಖನೀಯ. ಇದು ಒಂದೆರಡು ಸಿನೆಮಾಗಳ ವಿವರವಾಗಿದ್ದು, ಇನ್ನೂ ಹಲವು ಹಿಂದಿ ಸಿನೆಮಾಗಳಲ್ಲಿ ತುಳು ಸಂಭಾಷಣೆಗಳು ಬಳಕೆಯಾಗಿವೆ. ಹಿಂದಿ ಸಿನೆಮಾಗಳು ಬಹುತೇಕ ಮುಂಬಯಿ ಭೂಗತ ಜಗತ್ತಿನ ಕಥೆಯಾಧಾರಿತವಾಗಿರುವುದರಿಂದ ಇಲ್ಲಿ ಕರಾವಳಿಯ ನಂಟು ಸಹಜವಾಗಿ ಇರುತ್ತದೆ. ಹೀಗಾಗಿ ಕರಾವಳಿ ಮೂಲದ ತುಳು ಭಾಷೆಯ ಸೊಗಡು ಸಹಜವಾಗಿ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಉಳಿದಂತೆ ತುಳು ಸಿನೆಮಾದಲ್ಲಿ ಬರುವ ವಿಲನ್‌ಗಳಿಗೆ ‘ಶೆಟ್ಟಿ’ ಎಂದು ಉಲ್ಲೇಖೀಸಿದ ಹಲವು ಉದಾಹರಣೆಗಳಿವೆ.

ದಿನೇಶ್‌ ಇರಾ

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.