ಆ. 25ಕ್ಕೆ ‘ಅಣ್ಣಪ್ಪ’ನ ಹಾಡು ರಿಲೀಸ್
Team Udayavani, Aug 9, 2018, 2:56 PM IST
ಕೋಸ್ಟಲ್ವುಡ್ನಲ್ಲಿ ಸದ್ಯ ಸೌಂಡ್ ಮಾಡಿರುವ ಮಂಜು ರೈ ಮೂಳೂರು ಮುಖ್ಯಭೂಮಿಕೆಯ ‘ಮೈ ನೇಮ್ ಈಸ್ ಅಣ್ಣಪ್ಪೆ’ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ, ಈಗ ಸಿನೆಮಾದ ಆಡಿಯೋ ರಿಲೀಸ್ಗೆ ಸಿದ್ಧತೆ ನಡೆದಿದೆ. ಆ. 25ರಂದು ಕದ್ರಿ ಗ್ರೌಂಡ್ನಲ್ಲಿ ಸಂಜೆ 7 ಗಂಟೆಗೆ ಆಡಿಯೋ ರಿಲೀಸ್ ನಡೆಯಲಿದೆ.
ವಿಭಿನ್ನ ಮ್ಯಾನರಿಸಂ ಮೂಲಕ ಮೂಡಿಬಂದ ಈ ಸಿನೆಮಾ ಕೋಸ್ಟಲ್ವುಡ್ನಲ್ಲಿ ನಿರೀಕ್ಷೆ ಮೂಡಿಸಿದ್ದು, ಇದರ ಹಾಡುಗಳು ಕೂಡ ಭರ್ಜರಿ ಹಿಟ್ ದಾಖಲಿಸಿವೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ. ವಿಶೇಷವೆಂದರೆ, ಈ ಸಿನೆಮಾದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ‘ಮುಗುರು ತೆಲಿಪುದೆ’ ಎಂಬ ಹಾಡಿಗೆ ಧ್ವನಿಗೂಡಿಸಿದ್ದು, ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರು ‘ಕನ ನೀರ ಕಡಲ್’ ಎಂಬ ಧಾಟಿಯ ಹಾಡಿಗೆ ಧ್ವನಿಗೂಡಿಸಿದ್ದಾರೆ. ಜತೆಗೆ ರವಿಚಂದ್ರ ಕನ್ನಡಿಕಟ್ಟೆ ಅವರು ‘ನಂದಾಕಿಶೋರ’ ಎಂಬ ಹಾಡಿಗೆ ಸ್ವರ ನೀಡಿದ್ದಾರೆ.