ತುರ್ತು ಪರಿಸ್ಥಿತಿಯಲ್ಲಿ ಸಮಾಜಕ್ಕೆ ನೆರವಾಗಿ


Team Udayavani, Aug 29, 2019, 5:19 AM IST

h-7

ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಸಂದರ್ಭ ಸೃಷ್ಟಿಸುವ ಅಪಾಯ ಸಾವು-ನೋವು, ನಷ್ಟ-ಕಷ್ಟ ಅಂದಾಜಿಗೆ ಸಿಗದಷ್ಟು ವಿಸ್ತಾರವಾದದು. ಜಾತಿ, ಮತ, ಧರ್ಮ ಮೀರಿ ಕಷ್ಟ ನಷ್ಟಕ್ಕೆ ಪರಸ್ಪರ ಹೆಗಲು ಕೊಟ್ಟು ಮತ್ತೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಸಂದರ್ಭ ಇದ್ದೆ ಇದೆ.

ದೇಶದಲ್ಲಿ ಯುವ ಜನತೆಯ ಪಾಲು ದೊಡ್ಡದು. ಹಾಗಾಗಿ ದೇಶವನ್ನು ಬಲಿಷ್ಠವನ್ನಾಗಿಸುವ ಎಲ್ಲ ಅವಕಾಶಗಳಿಗೆ ಯುವ ಸಮುದಾಯವೇ ರಾಯಭಾರಿ. ಅದು ಕಷ್ಟದ ಸಂದರ್ಭದಲ್ಲೂ ಹೌದು.

ಪ್ರಸ್ತುತ ಕಾಲಘಟ್ಟವನ್ನು ಗಮನಿಸಿದಾಗ ಪ್ರಕೃತಿಯ ವಿಕೋಪಗಳು ಮಾನವನ ಆವಾಸ, ಕೃಷಿ ವ್ಯವಸ್ಥೆಯನ್ನು ಪಲ್ಲಟಗೊಳಿಸಿದೆ. ವರ್ಷದಿಂದ ವರ್ಷಕ್ಕೆ ಉಂಟಾಗುವ ಅಪಾಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಸಂದರ್ಭ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಹಸ್ತ ಬೇಕು. ಅದು ಫಲಾಪೇಕ್ಷೆ ಬಯಸದ ಸೇವೆ. ಇದಕ್ಕಾಗಿ ಯುವ ಜನತೆ ಈ ನಿಟ್ಟಿನಲ್ಲಿ ತೊಡಗಿಕೊಳ್ಳಬೇಕಾದ ಪಾಲು ಗರಿಷ್ಟವಾದದು. ಜತೆಗೆ ಇದರಿಂದ ಪ್ರಕಟವಾಗುವ ಫಲಿತಾಂಶವೂ ಗರಿಷ್ಠ.

ಊರಿನ ಸುತ್ತಮುತ್ತ ಪ್ರಕೃತಿ ವಿಕೋಪದಂತಹ ಸಮಸ್ಯೆಗಳಾಯಿತು ಎಂದಾಗ ಯುವ ಸಮುದಾಯ ಒಗ್ಗಟ್ಟಾಗಿ ನೆರವಿಗೆ ಧಾವಿಸಬೇಕು. ಈ ಒಗ್ಗಟ್ಟಿನಿಂದ ಸಮಾಜದ ಸಮಸ್ಯೆಗಳನ್ನು ಬಹುಬೇಗನೆ ಪರಿಹಾರ ಕಂಡುಕೊಳ್ಳಬಹುದು. ಯುವ ಜನಾಂಗವೇ ಭಾರತದ ಶಕ್ತಿಯಾಗಿರುವಾಗ ಪ್ರಕೃತಿ ವಿಕೋಪದಂತಹ ಸಮಸ್ಯೆಗಳಿಗೆ ಯುವಜನತೆ ಹೆಗಲಾಗಿ ಸಮಾಜದ ಕುಂದುಕೊರತೆಗೆ ಸ್ಪಂದಿಸಬೇಕು. ಈ ಸೇವಾ ಮನೋಭಾವವನ್ನು ಯುವ ಜನತೆ ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳಬೇಕು.

ಕಷ್ಟವೇನಲ್ಲ
ಸೇವೆಗೆ ಈಗ ಅವಕಾಶಗಳ ಕೊರತೆ ಇಲ್ಲ. ಸಂಘಟಿತವಾಗಿ ಸ್ಪಂದಿಸಲು ಬೇಕಾದ ಹಲವು ದಾರಿಗಳಿವೆ. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್‌ ಸಂಸ್ಥೆ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹೀಗೆ ಹತ್ತಾರು ಸಂಘಟನೆಗಳಿವೆ. ಇವೆಲ್ಲವೂ ಪ್ರಾಕೃತಿಕ ವಿಕೋಪ ಸೇರಿದಂತೆ ತುರ್ತು ಸಂದರ್ಭ ಸ್ಪಂದಿಸುತ್ತವೆ. ವಿದ್ಯಾರ್ಥಿ ಜೀವನದ ದಾಟಿದ ಅನಂತರ ಜೇಸಿಐ, ರೋಟರಿ, ಲಯನ್ಸ್‌, ಗೃಹರಕ್ಷಕ ದಳ ಸೇರಿದಂತೆ ಹಲವು ಸಂಘಟನೆಗಳ ಮೂಲಕ ಸೇವಾ ಕ್ಷೇತ್ರಕ್ಕೆ ಧುಮುಕಬಹುದು.

ಯುವ ಸಮುದಾಯ ಮನಸ್ಸು ಮಾಡಿದರೆ ಅಸಾಧ್ಯ ಎನ್ನುವ ಕಾರ್ಯವೇ ಇಲ್ಲ. ಅಖಾಡಕ್ಕೆ ಇಳಿಯಲು ಪ್ರೇರಣೆ ನೀಡುವ ಮಂದಿ ಇದ್ದರೆ ಯುವ ಸಮುದಾಯವನ್ನು ಯಾವುದೇ ಕಾರ್ಯಕ್ಕೆ ಸಿದ್ದಗೊಳಿಸಬಹುದು.

- ಕಿರಣ್‌ ಕುಂಡಡ್ಕ

ಟಾಪ್ ನ್ಯೂಸ್

Don’t Think Rohit Sharma Needs A Break,” Says Ravi Shastri

ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಯಶೋವರ್ಮ ನಿಧನ

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

thumbnail 2

ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ: ಸದ್ಗುರು

thumb 1

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ವಾನ ಜಗದೊಳಗೆಒಂದು ಸುತ್ತಾಟ

ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ

kodibengre

ಪ್ರಕೃತಿ ಸೌಂದರ್ಯದ ಖನಿ ಕೋಡಿಬೇಂಗ್ರೆ

costalwood-kangal

ಕೊರೊನಾ ಕಪಿಮುಷ್ಟಿಗೆ ಕಂಗಾಲು!

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

pingara-2

ತೆರೆಗೆ ಬರಲು ಅಣಿಯಾಗಿದೆ ಪಿಂಗಾರ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

Don’t Think Rohit Sharma Needs A Break,” Says Ravi Shastri

ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ

4

ಸರ್ಕಾರಿ ಶಾಲೆ ದಾಖಲಾತಿಗೆ ಹರಸಾಹಸ!

kaikamba

ಅಭಿವೃದ್ಧಿ ಕಾಮಗಾರಿ ಪೂರ್ಣ; ಮೇ 24ರಂದು ಉದ್ಘಾಟನೆ

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

tree

ಹೆದ್ದಾರಿ ಅಭಿವೃದ್ಧಿ: ಮರಗಳ ತೆರವಿಗೆ ಕ್ಷಣಗಣನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.