Udayavni Special

ಆಟಿಡೊಂಜಿ ದಿನ ಈಗ ಶುರು!


Team Udayavani, Mar 7, 2019, 7:34 AM IST

7-mach-9.jpg

ರಾಧಾಕೃಷ್ಣ ನಾಗರಾಜು ನಿರ್ಮಾಣದ ಆರ್‌.ಹರೀಸ್‌ ಕೊಣಾಜೆಕಲ್‌ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ‘ಆಟಿಡೊಂಜಿ ದಿನ’ ಸಿನೆಮಾ ಶೂಟಿಂಗ್‌ ಪ್ರಾರಂಭಿಸಿದೆ. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಾ.1ರಂದು ಮುಹೂರ್ತ ಕಂಡಿರುವ ಈ ಸಿನೆಮಾ ಸದ್ಯ ನಗರದ ಬೇರೆ ಬೇರೆ ಭಾಗದಲ್ಲಿ ಶೂಟಿಂಗ್‌ ಸ್ಟೇಜ್‌ನಲ್ಲಿದೆ.

ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಪೃಥ್ವಿ ಅಂಬರ್‌, ನಿರೀಕ್ಷ ಶೆಟ್ಟಿ, ದೀಪಕ್‌ ರೈ, ಸೂರಜ್‌ ಸಾಲ್ಯಾನ್‌, ಶ್ರದ್ಧಾ ಸಾಲ್ಯಾನ್‌, ಪೃಥ್ವಿರಾಜ್‌ ಮೂಡುಬಿದ್ರೆ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. ಆಕಾಶ್‌ ಹಾಸನ ಕಾರ್ಯಕಾರಿ ನಿರ್ಮಾಪಕ ಹಾಗೂ ಸಹನಿರ್ದೇಶನ ಮಾಡುತ್ತಿದ್ದು, ನರೇಂದ್ರ ಗೌಡ ಸಿನೆಮಾಟೋಗ್ರಫಿ, ಮೇವಿನ್‌ ಜೋಯಲ್‌ ಪಿಂಟೊ ಸಂಕಲನ ಹಾಗೂ ರಾಜೇಶ್‌ ಭಟ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ. ತುಳುನಾಡಿನ ಸಂಸ್ಕೃತಿಯ ಪ್ರಕಾರ ಆಟಿ ಅತ್ಯಂತ ಮಹತ್ವದ ತಿಂಗಳು. ಹಿಂದಿನ ದಿನದಲ್ಲಿ ಅತ್ಯಂತ ಕಷ್ಟದ ತಿಂಗಳು ಎಂದೇ ಉಲ್ಲೇಖವಾದ ದಿನಗಳು.

ಒಂದೆಡೆ ಬಿಡದೆ ಕಾಡುವ ಮಳೆಯಾದರೆ ಇನ್ನೊಂದೆಡೆ ಬಡತನ; ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನೇ ಆಹಾರವಾಗಿಸಿಕೊಂಡು ಬದುಕುತ್ತಿದ್ದ ಹಿಂದಿನ ಕಾಲ. ಪ್ರಸಕ್ತ ಇಂತಹ ಪರಿಸ್ಥಿತಿ ಇಲ್ಲವಾದರೂ, ಹಿಂದಿನ ದಿನವನ್ನು ನೆನಪಿಸುವ ಕೆಲಸ ತುಳುನಾಡಿನಾದ್ಯಂತ ನಡೆಯುತ್ತಿದೆ. ಅದಕ್ಕಾಗಿ ‘ಆಟಿಡೊಂಜಿ ದಿನ’ ಎಂಬ ಆಚರಣೆಯೂ ಜಾರಿಯಲ್ಲಿದೆ. ಇದೇ ದಿನದ ವಿಶೇಷವನ್ನು ಹಾಗೂ ಇದೇ ತಿಂಗಳಿನ ನೆನಪನ್ನು ಮನನ ಮಾಡುವ ಉದ್ದೇಶದಿಂದ ‘ಆಟಿಡೊಂಜಿ ದಿನ’ ಸಿನೆಮಾ ರೆಡಿಯಾಗಲಿದೆ.  ತುಳು- ಕನ್ನಡ ಸಿನೆಮಾ ಧಾರವಾಹಿಗಳಲ್ಲಿ ಸಹ ನಿರ್ದೇಶಕನಾಗಿ ದುಡಿದಿರುವ ಮೂಡುಬಿದಿರೆಯ ಆರ್‌. ಹರೀಶ್‌ ಕೊಣಾಜೆಕಲ್‌ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಲಿದೆ.

ಟಾಪ್ ನ್ಯೂಸ್

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

rwytju11111111111

ಬುಧವಾರದ ರಾಶಿಫಲ : ಹೇಗಿದೆ ನಿಮ್ಮ ಗ್ರಹಬಲ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ವಾನ ಜಗದೊಳಗೆಒಂದು ಸುತ್ತಾಟ

ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ

kodibengre

ಪ್ರಕೃತಿ ಸೌಂದರ್ಯದ ಖನಿ ಕೋಡಿಬೇಂಗ್ರೆ

costalwood-kangal

ಕೊರೊನಾ ಕಪಿಮುಷ್ಟಿಗೆ ಕಂಗಾಲು!

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

pingara-2

ತೆರೆಗೆ ಬರಲು ಅಣಿಯಾಗಿದೆ ಪಿಂಗಾರ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.