ಇದು ರಮ್ಯ “ಚೈತ್ರ’ ಕಾಲ!

Team Udayavani, Nov 21, 2019, 4:24 AM IST

ದೇವದಾಸ್‌ ಕಾಪಿಕಾಡ್‌ ಅವರ ಬಲೇ ಚಾ ಪರ್ಕ ತಂಡದಲ್ಲಿ ಬಾಲಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಚೈತ್ರಾ ಶೆಟ್ಟಿ ರಂಗ ಭೂಮಿ-ಸಿನೆಮಾದಲ್ಲಿಯೂ ಮಿಂಚಿದವರು. ಅದರಲ್ಲಿಯೂ ಬಲೇ ಚಾ ಪರ್ಕ ತಂಡದಲ್ಲಿ ಚೈತ್ರಾ ಶೆಟ್ಟಿ ಮತ್ತು ಶೋಭರಾಜ್‌ ಪಾವೂರು ಅವರ ಜೋಡಿ ಬಹಳಷ್ಟು ಫೇಮಸ್‌ ಆಗಿತ್ತು.

ಕೊಡಿಯಾಲಗುತ್ತು ಮೂಲದ ಮಾಲತಿ ಶೆಟ್ಟಿ ಮತ್ತು ಜಯಶಂಕರ ಶೆಟ್ಟಿ ಅವರ ಪುತ್ರಿ ಚೈತ್ರಾ ಶೆಟ್ಟಿ 13ನೇ ವರ್ಷದಲ್ಲಿ ಬಲೇ ಚಾ ಪರ್ಕ ತಂಡ ಸೇರಿದ್ದರು. ಅನಂತರ ನೂರಾರು ವೇದಿಕೆಯಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಅನಂತರ ವಿದೇಶದಲ್ಲಿ ಉದ್ಯೋಗ ಗಳಿಸಿ ಕೆಲವು ವರ್ಷ ನಟನ ರಂಗದಿಂದ ದೂರ ಉಳಿದರು. ಅನಂತರ ಒರಿಯರ್ದೊರಿ ಅಸಲ್‌ ಸಿನೆಮಾದಲ್ಲಿ ನಟಿಸುವ ಮೂಲಕ ಚೈತ್ರಾ ಮತ್ತೆ ಮಿಂಚಲು ಆರಂಭಿಸಿದರು. ಬಳಿಕ “ಎಕ್ಕಸಕ’ ಸಿನೆಮಾದಲ್ಲಿಯೂ ಉತ್ತಮ ಅಭಿನಯದ ಮೂಲಕ ಗುರುತಿಸಿಕೊಂಡರು. ಅಂದಹಾಗೆ ಈಗ ಶೋಭರಾಜ್‌ ಪಾವೂರು ನಿರ್ದೇಶನದ “ಪೆಪ್ಪೆರೆ ಪೆರೆರೆರೆ’ ಸಿನೆಮಾದಲ್ಲಿ ನರ್ಸ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೋಭರಾಜ್‌ ಮತ್ತು ಚೈತ್ರಾ ಅವರ ಈ ಹಿಂದಿನ “ಚಾ ಪರ್ಕ’ ಶೈಲಿ ಮತ್ತೂಮ್ಮೆ ತೆರೆಯ ಮೇಲೆ ನೋಡುವ ಕುತೂಹಲ ಮೂಡಿದೆ.


ಈ ವಿಭಾಗದಿಂದ ಇನ್ನಷ್ಟು

  • "ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...

  • ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್‌' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌,...

  • ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ "ಲುಂಗಿ'. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ "ಲುಂಗಿ' ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ....

  • ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ "ಆಟಿಡೊಂಜಿ ದಿನ' ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ....

  • ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು...

ಹೊಸ ಸೇರ್ಪಡೆ