ಮುಂದಿನ ತಿಂಗಳಲ್ಲಿ ‘ಬೆಲ್ಚಪ್ಪ’

Team Udayavani, Jul 4, 2019, 5:00 AM IST

ಕೋಸ್ಟಲ್ವುಡ್‌ನ‌ಲ್ಲಿ ಆಡು ಭಾಷೆಯ ಟೈಟಲ್ ಮೂಲಕ ಗಮನ ಸೆಳೆದಿರುವ ರಜನೀಶ್‌ ದೇವಾಡಿಗ ನಿರ್ದೇಶನದ ಬೆಲ್ಚಪ್ಪ ಸಿನೆಮಾ ಬಿಡುಗಡೆಗೆ ರೆಡಿಯಾಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ, ಸಿನೆಮಾವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆಗ ಕೆಲವು ಕನ್ನಡ ಸಿನೆಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಲಿದ್ದು, ಚಿತ್ರಮಂದಿರದ ಲಭ್ಯತೆ ನೋಡಿಕೊಂಡು ದಿನ ನಿಗದಿ ಮಾಡಲು ಯೋಚಿಸಲಾಗಿದೆ.

ರಜನೀಶ್‌ ದೇವಾಡಿಗ ನಿರ್ದೇಶನದ ಎರಡನೇ ಸಿನೆಮಾ ಇದು. ಇದಕ್ಕಿಂತ ಮೊದಲು ‘ಕೋರಿರೊಟ್ಟಿ’ ಸಿನೆಮಾವನ್ನು ಮಾಡಿದ್ದರು.

ಅರವಿಂದ ಬೋಳಾರ್‌ ಪ್ರಮುಖ ಪಾತ್ರದಲ್ಲಿರುವ ಈ ಸಿನೆಮಾದಲ್ಲಿ ಸಂಪೂರ್ಣ ಹಾಸ್ಯವೇ ಪ್ರಾಮುಖ್ಯ ನೆಲೆಯಲ್ಲಿದೆ. ಜತೆಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಗುರಿಯಾಗಿರಿಸಿಕೊಂಡು ಸಿನೆಮಾ ತಯಾರಿಸಲಾಗಿದೆ. ಆದ್ದರಿಂದ ಇದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ರಜನೀಶ್‌ರದ್ದು.

ಈ ಚಿತ್ರಕ್ಕೆ ಹಾಲಿವುಡ್‌ನ‌ಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಲಕ್ಷ್ಮೀಶ ಶೆಟ್ಟಿ ಅವರು ಕೆಮರಾದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಒಂದು ಫೈಟ್ ಸೀನ್‌ ಮತ್ತು ನಾಲ್ಕು ಹಾಡುಗಳಿರುವ ಚಿತ್ರದ ನಾಯಕಿಯಾಗಿ ಯಶಸ್ವಿ ದೇವಾಡಿಗ ಅವರು ನಟಿಸಿದ್ದಾರೆ. ಉಳಿದಂತೆ ಉಮೇಶ್‌ ಮಿಜಾರು, ದೀಪಕ್‌ ರೈ ಪಾಣಾಜೆ, ಯಜ್ಞೇಶ್‌, ಸುಕನ್ಯಾ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • "ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...

  • ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್‌' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌,...

  • ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ "ಲುಂಗಿ'. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ "ಲುಂಗಿ' ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ....

  • ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ "ಆಟಿಡೊಂಜಿ ದಿನ' ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ....

  • ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು...

ಹೊಸ ಸೇರ್ಪಡೆ