“ಬೆಲ್ಚಪ್ಪ’ನ ಎಂಟ್ರಿಗೆ ದಿನಗಣನೆ ಬಾಕಿ!

Team Udayavani, Jul 25, 2019, 5:00 AM IST

ಕೋಸ್ಟಲ್ವುಡ್‌ನ‌ಲ್ಲಿ ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ ರಜನೀಶ್‌ ದೇವಾಡಿಗ ನಿರ್ದೇಶನದ ‘ಬೆಲ್ಚಪ್ಪ’ ತುಳು ಸಿನೆಮಾದ ಟ್ರೇಲರ್‌ ಸದ್ಯ ಕೋಸ್ಟಲ್ವುಡ್‌ನ‌ಲ್ಲಿ ಸಾಕಷ್ಟು ಸದ್ದು ಮಾಡಿದೆ. ಅರವಿಂದ ಬೋಳಾರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಬೆಲ್ಚಪ್ಪ ಸಿನೆಮಾ ಕೇವಲ 14 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಮೂಲಕ ಗಮನಸೆಳೆದಿತ್ತು. ಸೆನ್ಸಾರ್‌ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆಯಲಾಗಿದೆ. ಸಾಂದರ್ಭಿಕ ವಿಷಯಗಳನ್ನೊಳಗೊಂಡ ಹಾಗೂ ಅಲ್ಲಲ್ಲಿ ಹಾಸ್ಯದ ದೃಶ್ಯಗಳಿರುವ ಈ ಸಿನೆಮಾದ ಬಗ್ಗೆ ಕುಡ್ಲದಲ್ಲಿ ಬಹಳಷ್ಟು ನಿರೀಕ್ಷೆಯೂ ಇದೆ. ಆ.9ಕ್ಕೆ ಸಿನೆಮಾ ತೆರೆಕಾಣಲಿದೆ.

ಇದೊಂದು ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ. ರಜನೀಶ್‌ ದೇವಾಡಿಗ ಮತ್ತು ಯಶಸ್ವಿ ದೇವಾಡಿಗ ಅವರು ಪ್ರಧಾನ ಭೂಮಿಕೆಯಲ್ಲಿ ಈ ಸಿನೆಮಾದಲ್ಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ಚಿತ್ರದಲ್ಲಿ ಅರವಿಂದ ಬೋಳಾರ್‌ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತುಳುವಿನಲ್ಲಿ ‘ಬೆಲ್ಚಪ್ಪ’ ಅಂದರೆ ಬೆದರು ರೂಪ ಎಂದು ಕೂಡ ಹೇಳುತ್ತಾರೆ. ಗದ್ದೆ-ತೋಟ ಇರುವವರಿಗೆ ಅಥವಾ ತರಕಾರಿ ಮಾಡುವವರಿಗೆ ಬೆಲ್ಚಪ್ಪನ ಬಗ್ಗೆ ಪರಿಚಯ ಇದೆ. ಪ್ರಾಣಿಗಳು ತಮ್ಮ ಕೃಷಿಯನ್ನು ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂಬ ಕಾರಣದಿಂದ ಬೆಲ್ಚಪ್ಪನನ್ನು ಇರಿಸಲಾಗುತ್ತದೆ. ಹಾಗೆಂದು ‘ಬೆಲ್ಚಪ್ಪ’ ಪ್ರಾಣಿಗಳ ವಿರುದ್ಧ ಹೋರಾಡಲು ಆಗುವುದಿಲ್ಲ. ಅಂದರೆ ಕೇವಲ ಹೆದರಿಕೆಗಾಗಿ ಮಾತ್ರ ಬಳಕೆಯಾಗುವ ವಸ್ತು ಎಂಬುದು ಸಾಮಾನ್ಯ ಅರ್ಥ. ಇದೇ ಸಿನೆಮಾದ ಕಥೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ