ಸಾಂಪ್ರದಾಯಿಕ ಲುಕ್‌ ನೀಡುವ ಬಂಗಾಲಿ ಕುರ್ತಾ

Team Udayavani, Apr 11, 2019, 4:00 PM IST

ಪುರುಷರಿಗೆ ತುಂಬಾ ಹೊಂದಿಕೊಳ್ಳುವ ಬಂಗಾಲಿ ದಿರಿಸಿನಲ್ಲಿ ಮೊತ್ಕಾ ಫ್ಯಾಬ್ರಿಕ್‌ ಕೂಡ ಒಂದು. ತುಂಬಾ ಹಗುರವಾದ ಬಟ್ಟೆ ಇದಾಗಿದ್ದು, ದೇಹಕ್ಕೆ ಫಿಟ್‌ ಎನಿಸುತ್ತದೆ.

ಹಬ್ಬದ ಸಮಯದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಧಿರಿಸುಗಳ ಕಾಲಿಡುತ್ತಿವೆ. ಆ ಸಮಯದಲ್ಲಿ ಶಾಂಪಿಂಗ್‌ ಪ್ರಿಯರು ತಮಗಿಷ್ಟವಾದ ಧಿರಿಸನ್ನು ಆಯ್ಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಮಾರಂಭಗಳ ಧಿರಿಸಿನಲ್ಲಿ ಕುರ್ತಾ ಸಾಮಾನ್ಯವಾಗಿದೆ. ಅದಕ್ಕೆ ತಕ್ಕಂತೆಯೇ ಬಂಗಾಲಿ ಕುರ್ತಾಕ್ಕೆ ಬೇಡಿಕೆ ಹೆಚ್ಚಾಗಿದೆ.

ಈ ಕುರ್ತಾಗಳನ್ನು ಧರಿಸುವುದರಿಂದ ಇದರ ಡಿಸೈನ್‌ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಂಗಾಲಿ ಕುರ್ತಾಗಳಲ್ಲಿಯೂ ನಾನಾ ವಿನ್ಯಾಸಗಳು ಮಾರುಕಟ್ಟೆಗೆ ಕಾಲಿಡುತ್ತಿದೆ. ಅದರಲ್ಲಿಯೂ ಪುರುಷರಿಗೆ ಹೋಲುವ ಅನೇಕ ಡಿಸೈನ್‌ಗಳು ಮಾರುಕಟ್ಟೆಗೆ ಹೆಚ್ಚಾಗಿ ಕಾಲಿಡುತ್ತಿದೆ.

ಬಂಗಾಲಿ ಪುರುಷರು ತಮ್ಮ ಸಂಭ್ರಮಗಳನ್ನು ಮತ್ತಷ್ಟು ಹೆಚ್ಚಿಸಲು ಧೋತಿಗಳನ್ನು ಧರಿಸುವುದರಿಂದ ಮೆರುಗು ನೀಡುತ್ತದೆ. ಈ ಬಟ್ಟೆಗಳು ಸ್ಪನ್‌ ಕಾಟನ್‌ ಅಥವಾ ರೇಶ್ಮೆಯಿಂದ ಕೂಡಿರುತ್ತದೆ. ಹೆಚ್ಚಾಗಿ ಬಿಳಿ ಬಣ್ಣದ ಧೋತಿಗಳಿಗೆ ಬೇಡಿಕೆಯಿದ್ದು, ಇತ್ತೀಚೆಗೆ ವಿವಿಧ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಕುರ್ತಾಗಳನ್ನು ಖರೀದಿ ಮಾಡುವಾಗ ಮುಖ್ಯವಾಗಿ ಗಮನಿಸುವ ಅಂಶಗಳಲ್ಲಿ ಕಸೂತಿ ಕಲೆ ಮುಖ್ಯವಾದುದು. ಕುರ್ತಾಗಳಲ್ಲಿನ ಕಸೂತಿಗಳು ಬಟ್ಟೆಯ ಅಂದ ಹೆಚ್ಚಿಸಲು ಮುಖ್ಯಪಾತ್ರವಹಿಸುತ್ತದೆ. ಬಂಗಾಲಿ ಕುರ್ತಾದಲ್ಲಿ ಹೆಚ್ಚಾಗಿ ಕಾಲರ್‌ನ ಸುತ್ತಲೂ ಕಸೂತಿ ಮಾಡಿರುತ್ತಾರೆ. ಇದು ಹೆಚ್ಚಾಗಿ ಪುರುಷರ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬಂಗಾಲಿಗರ ಸಾಂಪ್ರದಾಯಿಕ ಧಿರಿಸಿನಲ್ಲಿ ತುಸ್ಸಾರ್‌ ವಿಧಧ ಕುರ್ತಾ ಕೂಡ ಮುಖ್ಯವೆನಿಸುತ್ತದೆ. ಈ ವಿಧಧ ಬಟ್ಟೆಯನ್ನು ಕಳೆದ ಕೆಲ ಶತಮಾನಗಳಿಂದಲೂ ಧರಿಸುತ್ತಾ ಬರಲಾಗುತ್ತಿದೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದರ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕುಗ್ಗಿದ್ದು, ಇಂದು ತುಂಬಾ ಗಾಢವಾದ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಪುರುಷರ ಧಿರಿಸಾಗಿದ್ದು ಇಂದಿನ ಆಧುನಿಕತೆಗೆ ಒಗ್ಗಿಕೊಂಡಂತಿದೆ.

ದಿನದಿಂದ ದಿನಕ್ಕೆ ಬಂಗಾಲಿ ಸಾಂಪ್ರದಾಯಿಕ ಉಡುಪಿನಲ್ಲಿ ಹೊಸತನ ಬರುತ್ತಿದ್ದು ಅದಕ್ಕೆ ಪ್ರಮುಖ ಉದಾಹರಣೆ ಎಂದರೆ ಸ್ಟ್ರಿಪ್ಡ್ ಕುರ್ತಾ ಗಳು. ಇದು ಬಂಗಾಲಿಗರಲ್ಲಿ ತುಂಬಾ ಹೊಸತನವನ್ನು ಪಡೆದು ಕೊಂಡಿದೆ. ಸ್ಟ್ರಿಪ್ಡ್ ಕುರ್ತಾಗಳು ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಇದನ್ನು ಧರಿಸಲು ವಯಸ್ಸಿನ ಅಂತರ ಬೇಕೆಂದಿಲ್ಲ. ಎಲ್ಲರಿಗೂ ಒಗ್ಗುವ ಮುಖ್ಯ ಧಿರಿಸಿನಲ್ಲಿ ಇದು ಕೂಡ ಒಂದು. ಮಹಿಳೆಯರಿಗೆ ಕೂಡ ಸಮಾರಂಭಗಳಲ್ಲಿ ಕುರ್ತಾ ಉತ್ತಮ ಧಿರಿಸಾಗಿದ್ದು, ಸಾಂಪ್ರದಾಯಿಕ ಲುಕ್‌ ನೀಡುತ್ತದೆ. ಮಹಿಳೆಯರ ಬಂಗಾಲಿ ಕುರ್ತಾದಲ್ಲಿ ಕತಿಗಳನ್ನು ಮಾಡಲಾಗಿದ್ದು ಸಾಮಾನ್ಯವಾಗಿ ಕಾಣುತ್ತದೆ.

 ನವೀನ್‌ ಭಟ್‌ ಇಳಂತಿಲ


ಈ ವಿಭಾಗದಿಂದ ಇನ್ನಷ್ಟು

 • ದಾವಣಗೆರೆಯ ಜಿಲ್ಲೆ, ಹೊನ್ನಾಳಿ ತಾಲೂಕಿನಲ್ಲಿರುವ ತೀರ್ಥ ರಾಮೇಶ್ವರ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳ. ಶ್ರೀರಾಮನಿಂದ ತೀರ್ಥ ಮತ್ತು ಈಶ್ವರನ ಮೂರ್ತಿ ಉದ್ಭವವಾಗಿದ್ದರಿಂದ...

 • ಕೋಸ್ಟಲ್‌ವುಡ್‌ನ‌ ಸ್ಟಾರ್‌ ಡೈರೆಕ್ಟರ್‌ ಎಂಬ ಮಾನ್ಯತೆ ಪಡೆದ ಸೂರಜ್‌ ಶೆಟ್ಟಿ ನಿರ್ದೇಶನದ ಉದ್ಯಮಿ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ...

 • ಮಾತಿನಲ್ಲೇ ಮೋಡಿ ಮಾಡಿ, ಹುಡುಗಾಟದಲ್ಲೇ ಕಾಲ ಕಳೆದ ಮೂವರು "ಚಾಲಿ ಪೋಲಿಗಳು' ಕೋಸ್ಟಲ್‌ವುಡ್‌ನ‌ಲ್ಲಿ ಮಾಡಿದ ದಾಖಲೆ ಹೊಸ ಮನ್ವಂತರವನ್ನು ಸೃಷ್ಟಿಸಿತ್ತು. ಒಂದೊಮ್ಮೆ...

 • ಖ್ಯಾತ ನಟ ರೂಪೇಶ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ "ಗಿರಿಗಿಟ್‌' ಸಿನೆಮಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾರಣವೆಂದರೆ ಮೊದಲ ಬಾರಿಗೆ...

 • ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ "ಇಲ್ಲೊಕ್ಕೆಲ್‌'. ಕುಡ್ಲದ ಸ್ಟಾರ್‌ ಕಲಾವಿದರ ಮೂಲಕ ನಡೆಸಿದ ಈ ಸಿನೆಮಾ ಈಗಾಗಲೇ ಶೂಟಿಂಗ್‌ ಎಲ್ಲ ಮುಗಿಸಿ...

ಹೊಸ ಸೇರ್ಪಡೆ

 • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

 • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

 • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

 • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

 • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

 • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...