ಮೊಬೈಲ್ ಆ್ಯಪ್‌ಗ್ಳು ಮಾರಕವಾಗದಿರಲಿ

ಮೊಬೈಲ್ ಆ್ಯಪ್‌ಗ್ಳು ಮಾರಕವಾಗದಿರಲಿ

Team Udayavani, Aug 8, 2019, 5:00 AM IST

ಇಂದು ಎಳೆಯರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ನಲಿದಾಡುತ್ತಿವೆ. ಯಾವುದೋ ಅನಿರ್ವಾಯ ಕಾರಣಕ್ಕೆ ಮಕ್ಕಳಿಗೆ ಫೋನ್‌ ತೆಗೆದುಕೊಡುವ ಹೆತ್ತವರು, ಮಕ್ಕಳು ಯಾವ ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ ಎಂಬ ಬಗ್ಗೆ ಗಮನ ಹರಿಸುವುದಿಲ್ಲ. ಮಕ್ಕಳ್ಳೋ ಅಗತ್ಯಕ್ಕಿಂತಲೂ ಹೆಚ್ಚು ಈ ಮೊಬೈಲ್ ಫೋನ್‌ಗಳಲ್ಲಿ ಕಾಲ ಕಳೆದು ಬಿಡುತ್ತಾರೆ. ಯುವಜನಾಂಗವನ್ನು ಸೆಳೆಯಬೇಕೆಂಬ ಕಾರಣಕ್ಕೆ ಟಿಕ್‌ಟಾಕ್‌, ಮೊಬೈಲ್ ಗೇಮ್‌ ಆ್ಯಪ್‌ಗ್ಳು ಲೆಕ್ಕವಿಲ್ಲದಷ್ಟಿವೆ.

ಯುವಜನಾಂಗವನ್ನು ಬಹುಬೇಗನೇ ಸೆಳೆದಿರುವುದು ಸೆಲ್ಫಿ, ಮೊಬೈಲ್ ಗೇಮ್‌, ಟಿಕ್‌ ಟಾಕ್‌ ಆ್ಯಪ್‌ಗ್ಳು. ಆದರೆ ಇದು ಧನಾತ್ಮಕ ಸಂಗತಿ ಸೃಷ್ಟಿಸುವ ಪ್ರಮಾಣಕ್ಕಿಂತ ನಕರಾತ್ಮಕ ವಿದ್ಯಾಮಾನಗಳಿಗೆ ಕಾರಣವಾಗುತ್ತಿರುವುದು ಆತಂಕದ ಸಂಗತಿ. ಟ್ರೆಂಡ್‌ ಆಗುತ್ತಿರುವ ಈ ಟಿಕ್‌ ಟಾಕ್‌ ಇತ್ತೀಚೆಗೆ ಯುವಕರ ಸಾವಿಗೂ ಕಾರಣವಾಗಿದೆ. ಯಾವುದೋ ಸಿನೆಮಾದ ಡೈಲಾಗ್‌, ಹಾಡನ್ನು ಅನುಕರಣೆ ಮಾಡಿ ಅದರ ವೀಡಿಯೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಜನರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇನ್ನೊಬ್ಬರ ಟೀಕೆಗೂ ಈ ಟಿಕ್‌ಟಾಕ್‌ ಆ್ಯಪ್‌ಗ್ಳು ಸಹಕರಿಸುತ್ತಿವೆ. ಇವುಗಳು ಮನೋರಂಜನೆಗಾಗಿದ್ದರೂ, ಆ ಉದ್ದೇಶದಿಂದ ಬಳಕೆಯಾಗದೇ ಇರುವುದು ಖೇದಕರ ಸಂಗತಿ.

ಸಾಮಾಜಿಕ ಜಾಲ ತಾಣಗಳ ಅತಿ ಬಳಕೆಯಿಂದ ಮಕ್ಕಳ ವಿದ್ಯಾಭ್ಯಾಸ, ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಮಕ್ಕಳನ್ನು ಹೇಗೆ ದೂರವಿಡಬಹುದು ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಜತೆಗೆ ಬಳಕೆ ವೇಳೆ ಅದರಲ್ಲಿನ ಧನಾತ್ಮಕ ಅಂಶಗಳ ಬಳಕೆಗೆ ಪ್ರೋತ್ಸಾಹ ನೀಡಬೇಕು.

ಟಿಕ್‌ ಟಾಕ್‌ ವೀಡಿಯೋದಲ್ಲಿ ಒಳ್ಳೆಯ ಟ್ರೆಂಡಿಂಗ್‌ ಹ್ಯಾಶ್‌ ಟಾಗ್‌ಗಳು ಇವೆ. ಮಕ್ಕಳಿಗೆ ಜ್ಞಾನ ತುಂಬುವಂತಹ ನೀಡುವಂತಹ ವೀಡಿಯೊಗಳಿರುತ್ತವೆ. ಸುರಕ್ಷಿತ ವಿಧಾನವಾದ ಡಿಜಿಟಲ್ ವೆಲ್ಲ್ ಬೀಯಿಂಗ್‌ ಎಂಬ ಆ್ಯಪ್‌ ಇದ್ದು, ಈ ಮೂಲಕ ಪೋಷಕರು ಸಮಯ ಸೆಟ್ ಮಾಡಿ ಮಕ್ಕಳಿಗೆ ಮೊಬೈಲ್ ಬಳಸಲು ನೀಡಬೇಕು. ಅವಧಿ ಮುಗಿದರೆ ಮಕ್ಕಳು ಮುಂದುವರಿಯಲು ಪಾಸ್‌ ವರ್ಡ್‌ ನೀಡಬೇಕು.

ರಿಸ್ಟ್ರಿಕ್ಟೆಡ್‌ ಮೋಡ್‌, ಕಮೆಂಟ್ಸ್‌ ಫಿಲ್ಟರ್‌, ಡಿವೈಸ್‌ ಮ್ಯಾನೇಜ್‌ ಮೆಂಟ್ ಮೊದಲಾದ ಮಾರ್ಗಗಳ ಮೂಲಕ ಟಿಕ್‌ಟಾಕ್‌ ಅತಿ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿದೆ. ಇಂತಹ ನಿಯಂತ್ರಣ ಮಾರ್ಗಗಳು ಮೊಬೈಲ್ ಗೇಮ್‌, ಸೆಲ್ಪಿ ಮೊದಲಾದವುಗಳಲ್ಲಿಯೂ ಇವೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಅಪ್‌ಲೋಡ್‌ ಮಾಡಿ ಲೈಕ್‌, ಕಮೆಂಟ್ ಎಂಬ ಪ್ರಚಾರದ ಗೀಳಿಗೆ ಕಡಿವಾಣ ಅಗತ್ಯ. ಪೋಟೋ ದುರ್ಬಳಕೆ ಆಗಿ ಭವಿಷ್ಯವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಂತಹ ಗೀಳು ನಿಯಂತ್ರಣಕ್ಕೆ ಮನೆಯೇ ಪಾಠ ಶಾಲೆಯಾಗಬೇಕು.

ಮುಖ ಪರಿಚಯ ಇರದ ಮಿತ್ರರ ಗೆಳೆತನ, ಪ್ರಶಂಸೆಗಿಂತ ಹತ್ತಿರದ ಬಂಧುಮಿತ್ರರ ಗೆಳೆತನ, ಪ್ರಶಂಸೆಗಳು ಮುಖ್ಯ ಎನ್ನುವ ಬುದ್ಧಿವಾದವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಮೊಬೈಲ್ ಮಾತ್ರ ಜೀವನ ಎಂದೆನಿಸದೆ ಸೃಜನಾತ್ಮಕ ಗುಣಗಳಿಗೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದು. ಕಲೆಯಾಧಾರಿತ ಚಟುವಟಿಕೆಗಳಿಗೆ ಉತ್ಸಾಹಿಸಬೇಕು. ಸ್ಮಾರ್ಟ್‌ಫೋನ್‌ ಮತ್ತು ನೆಟ್ನಿಂದ ಆಗುವ ಅನಾಹುತಗಳ ಬಗ್ಗೆ ಗಮನ ಹರಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಲು ಪೋಷಕರು ಕೈ ಜೋಡಿಸಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • 'ಇಲ್ಲೊಕ್ಕೆಲ್' ಕೋಸ್ಟಲ್ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ಇದೂ ಕೂಡ ಹಲವು ದಿನಗಳ ಹಿಂದೆಯೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ....

  • ಕೋಸ್ಟಲ್ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ 'ಇಂಗ್ಲೀಷ್‌' ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ...

  • ಭಾರೀ ಮಳೆಯ ಕಾರಣದಿಂದ ಕೋಸ್ಟಲ್ವುಡ್‌ ಕೂಡ ಮರುಗಿದ್ದು, ತುಳು ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಮುಂದೂಡಿದೆ. ರಾಜ್ಯದಲ್ಲಿ ಹಾಗೂ ದ.ಕ. ಜಿಲ್ಲೆಯ ವಿವಿಧೆಡೆ ನೆರೆ...

  • ಸಂಗಾತಿಯ ಸಾಂಗತ್ಯವಿಲ್ಲದೆ ನೊಂದು ಬೆಂದಿದ್ದ ಇಳೆಯ ಸಕಲ ಬಯಕೆಗಳನ್ನು ಪೂರೈಸುವಂತೆ ಮಳೆ ಧಾರೆಯಾಗಿ ಸುರಿಯುತ್ತಿತ್ತು. ಮುಂಗಾರಿನ ಅಭಿಷೇಕದಿಂದ ಪ್ರೀತಿಯಂಥ...

  • ಪತ್ನಿಯನ್ನು ಕಳೆದುಕೊಂಡ ಪತಿ ಅದೇ ಆಘಾತದಿಂದ ಹೊರಗೆ ಬಂದಿರುವುದಿಲ್ಲ. ಪತ್ನಿ ಸತ್ತರೂ ಆಕೆ ಇನ್ನೂ ಜತೆಗಿದ್ದಾಳೆ ಎಂದು ಹುಡುಕುವ ಆತ ಅದೇ ಗುಂಗಿನಲ್ಲಿ ದಿನಕಳೆಯುತ್ತಾನೆ! ಇದೇ...

ಹೊಸ ಸೇರ್ಪಡೆ