“ಇಂಗ್ಲಿಷ್’ಹಾಡು ಈಗ ಶುರು!
Team Udayavani, May 23, 2019, 6:00 AM IST
ಕೋಸ್ಟಲ್ವುಡ್ ಸಿನೆಮಾದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್ ಶೆಟ್ಟಿ ಅವರ “ಇಂಗ್ಲಿಷ್’ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ ಶೂಟಿಂಗ್ ನಡೆಸಲು ಅಣಿಯಾಗಿದೆ. ಒಟ್ಟು ನಾಲ್ಕು ಹಾಡುಗಳಿರುವ ಈ ಸಿನೆಮಾದ ಎರಡು ಹಾಡುಗಳು ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದೆ.
ಉಳಿದ ಎರಡು ಹಾಡುಗಳ ಶೂಟಿಂಗ್ ಬಾಕಿ ಇತ್ತು. ಸಿನೆಮಾದ ಎಡಿಟಿಂಗ್ ಕೂಡ ಈಗಾಗಲೇ ಪೂರ್ಣವಾಗಿದೆ. ಬಾಕಿ ಉಳಿದ ಎರಡು ಹಾಡುಗಳನ್ನು ಅದ್ಧೂರಿಯಾಗಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ವಿಭಿನ್ನ ಟೈಟಲ್ಗಳ ಮೂಲಕವೇ ಕೋಸ್ಟಲ್ವುಡ್ನಲ್ಲಿ ಸಕ್ಸಸ್ ಸಿನೆಮಾಗಳನ್ನು ನೀಡಿದ ಸೂರಜ್ ಅವರ “ಎಕ್ಕಸಕ್ಕ’,
“ಪಿಲಿಬೈಲ್ ಯಮುನಕ್ಕ’, “ಅಮ್ಮೆರ್ ಪೊಲೀಸಾ’ ಹಿಟ್ ಆದ ಬಳಿಕ ಈಗ ನಾಲ್ಕನೇ ಸಿನೆಮಾವಾಗಿ “ಇಂಗ್ಲಿಷ್’ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿ, “ಮಾರ್ಚ್ 22′, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ “ಇಂಗ್ಲಿಷ್’ ರೆಡಿಯಾಗುತ್ತಿದೆ.
ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಸಹಿತ ತುಳುನಾಡಿನ ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ.
ಪೃಥ್ವಿ ಅಂಬರ್ ಹಾಗೂ ನವ್ಯಾ ಪೂಜಾರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಶಶಿರಾಜ್ ಕಾವೂರು ಹಾಗೂ ಅರ್ಜುನ್ ಲೂಯಿಸ್ ಸಾಹಿತ್ಯ, ಕ್ಯಾಮರಾ ಕೃಷ್ಣ ಸಾರಥಿ, ಸಂಕಲನವನ್ನು ಮನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ