“ಇಂಗ್ಲೀಷ್‌’ ಹಾಡಿಗೆ ತಲೆದೂಗಿದ ರಿಷಬ್‌!

Team Udayavani, Oct 10, 2019, 5:19 AM IST

“ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ “ಇಂಗ್ಲೀಷ್‌’ ಸಿನೆಮಾದ ಹಾಡುಗಳಿಗೆ ನಟರಾದ ಅನಂತ್‌ನಾಗ್‌, ರಿಷಬ್‌ ಶೆಟ್ಟಿ ಅವರು ತಲೆಬಾಗಿದ್ದಾರೆ. “ಗಿರಿಗಿಟ್‌’ ಸಿನೆಮಾ ಮಾಡಿದ ಯಶಸ್ವಿ ಸಾಧನೆಯನ್ನು ಕೊಂಡಾಡಿದ ಅವರು ಇಂಗ್ಲೀಷ್‌ ಸಿನೆಮಾದ ಹಾಡುಗಳಿಗೂ ಫಿದಾ ಆಗಿದ್ದಾರೆ.

ಮಂಗಳೂರು ದಸರಾ ಮೆರವಣಿಗೆ ಸಾಗುವ ವೇಳೆಯಲ್ಲಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುಗಳ ರಿಲೀಸ್‌ ನಡೆದಿದೆ. ಚಿತ್ರದಲ್ಲಿ 4 ಹಾಡುಗಳಿವೆ.

ವಿಭಿನ್ನ ಟೈಟಲ್‌ಗ‌ಳ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ಸಕ್ಸಸ್‌ ಸಿನೆಮಾಗಳನ್ನು ನೀಡಿದ ಸೂರಜ್‌ ಶೆಟ್ಟಿ ಅವರ “ಎಕ್ಕಸಕ್ಕ’, “ಪಿಲಿಬೈಲ್‌ ಯಮುನಕ್ಕ’, “ಅಮ್ಮೆರ್‌ ಪೊಲೀಸಾ’ ಹಿಟ್‌ ಆದ ಬಳಿಕ ಇದೀಗ ನಾಲ್ಕನೇ ಸಿನೆಮಾವಾಗಿ “ಇಂಗ್ಲೀಷ್‌’ ಮಾಡಿದ್ದಾರೆ. ಖ್ಯಾತ ಉದ್ಯಮಿ, “ಮಾರ್ಚ್‌ 22′, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್‌ ಶೇರಿಗಾರ್‌ ಹಾಗೂ ಶರ್ಮಿಳಾ ಹರೀಶ್‌ ಶೇರಿಗಾರ್‌ ನಿರ್ಮಾಣದಲ್ಲಿ “ಇಂಗ್ಲೀಷ್‌’ ರೆಡಿಯಾಗಿದೆ. ಬಿಗ್‌ ಬಜೆಟ್‌ನಲ್ಲಿ ಮೂಡಿಬಂದ ಸಿನೆಮಾ ಇದು.

ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ವಿಸ್ಮಯ ವಿನಾಯಕ್‌, ಸಂದೀಪ್‌ ಶೆಟ್ಟಿ, ಪ್ರಸನ್ನ ಬೈಲೂರು ಸೇರಿದಂತೆ ತುಳುನಾಡಿನ ಸ್ಟಾರ್‌ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ. ಪೃಥ್ವಿ ಅಂಬರ್‌ ಹಾಗೂ ನವ್ಯಾ ಪೂಜಾರಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ, ಶಶಿರಾಜ್‌ ಕಾವೂರು ಹಾಗೂ ಅರ್ಜುನ್‌ ಲೂಯಿಸ್‌ ಸಾಹಿತ್ಯ, ಕೆಮರಾ ಕೃಷ್ಣ ಸಾರಥಿ, ಸಂಕಲನವನ್ನು ಮನು ಅವರದ್ದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ