ಗೋಲ್‌ಮಾಲ್‌ನಲ್ಲಿ ಉಡುಪಿಯ ಮರ್ಡರ್‌ ಮಿಸ್ಟ್ರಿ ?

Team Udayavani, Mar 7, 2019, 7:15 AM IST

7-mach-7.jpg

ಉಡುಪಿಯಲ್ಲಿ ಕೆಲವೇ ತಿಂಗಳ ಹಿಂದೆ ನಡೆದ ಒಂದು ಮರ್ಡರ್‌ ಕೇಸ್‌ ಕರಾವಳಿ ಮಾತ್ರವಲ್ಲದೆ, ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಸುದ್ದಿ- ಚರ್ಚೆಗೆ ಕಾರಣವಾಗಿತ್ತು. ಉಡುಪಿಯ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಸಂಗತಿ ಎಲ್ಲೆಡೆ ಸಂಚಲನಕ್ಕೆ ಕಾರಣವಾಗಿತ್ತು. ಒಂದು ಹತ್ಯೆಯ ಹಿಂದಿನ ಕಥಾನಕ ಬಹಳಷ್ಟು ರೋಚಕ ಹಾಗೂ ಆಶ್ಚರ್ಯ ಮೂಡಿಸುವಂತಾಗಿತ್ತು. ಹೀಗೂ ಇರುತ್ತಾರಾ? ಎಂದು ಜನ ಮಾತನಾಡುವಂತಾಗಿತ್ತು.

ಇದೇ ಕಥಾನಕ ಕೋಸ್ಟಲ್‌ ವುಡ್‌ನ‌ಲ್ಲಿ ಸಿನೆಮಾ ರೂಪ ಪಡೆದಿದೆಯೇ? ಈ ಕಥೆಗೆ ಸಿನೆಮಾ ರೂಪ ನೀಡಲಾಗಿದೆಯೇ? ಕೆಲವೇ ದಿನಗಳಲ್ಲಿ ತೆರೆಮೇಲೆ ಬರುವ ಬಿಗ್‌ ಬಜೆಟ್‌ ಸಿನೆಮಾ ಇದೇ ಕಥೆಯಾಧಾರಿತವಾಗಿ ಇರಲಿದೆಯೇ? ಎಂಬೆಲ್ಲ ಪ್ರಶ್ನೆ ಈಗ ಕೋಸ್ಟಲ್‌ ವುಡ್‌ನ‌ಲ್ಲಿ ಕೇಳಿಬರುತ್ತಿದೆ. ಆದರೆ, ಈ ಯಾವುದೇ ಪ್ರಶ್ನೆಗಳಿಗೆ ಚಿತ್ರತಂಡ ಮಾತ್ರ ಸದ್ಯಕ್ಕೆ ಉತ್ತರ ನೀಡಿಲ್ಲ. ‘ಸಿನೆಮಾ ನೋಡಿ- ಆ ಮೇಲೆ ಮಾತನಾಡಿ’ ಎಂದಷ್ಟೇ ಹೇಳುತ್ತಿದ್ದಾರೆ.

ಅಂದಹಾಗೆ, ಇದು ‘ಗೋಲ್‌ಮಾಲ್‌’ ಸಿನೆಮಾ ಸಂಗತಿ. ತುಳು ಚಿತ್ರರಂಗದ ಅದ್ದೂರಿ ಸಿನೆಮಾ ಎಂದೇ ಹೇಳಲಾಗುತ್ತಿರುವ ಮಂಜುನಾಥ ನಾಯಕ್‌ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರು ನಿರ್ಮಾಣದಲ್ಲಿ ರಮಾನಂದ ನಾಯಕ್‌ ನಿರ್ದೇಶನದಲ್ಲಿ ತಯಾರಾದ ಸಿನೆಮಾ. ಈ ಸಿನೆಮಾದ ಟೀಸರ್‌ನಲ್ಲಿ ಮಾತು ಕಡಿಮೆ. ಆದರೆ ಇರುವ ಒಂದೆರಡು ಮಾತು ಮತ್ತು ದೃಶ್ಯಗಳು ಉಡುಪಿ ಮೂಲದ ಮರ್ಡರ್‌ ಕಥೆಗೆ ಲಿಂಕ್‌ ಪಡೆದಿವೆ ಎಂಬುದು ಈಗಿನ ಕುತೂಹಲಕ್ಕೆ ಕಾರಣ. ಈ ಟೀಸರ್‌ನಲ್ಲಿ ಬರುವ ಒಂದು ಸಂಭಾಷಣೆ ಹೀಗಿದೆ. ‘ಸರ್‌, ಉಂದು ಆನಿ ರಾತ್ರಿ ನಡತಿನ ಕಥೆ’ ಎಂದು. ಹಾಗಾದರೆ ಆ ರಾತ್ರಿ ನಡೆದಿದ್ದು ಏನು? ಎಂಬುದು ಪ್ರಶ್ನೆ. ಕೊನೆಯಲ್ಲಿ ಬರುವ ಒಂದು ಸಂಭಾಷಣೆ ‘ಒಂಜಿ ಸಾಕ್ಷಿಲಾ ಒರಿಯೆರೆ ಬಲ್ಲಿ’ ಎಂಬ ಮಹಿಳೆಯ ಮಾತು ! ಹಾಗಾದರೆ ಇಲ್ಲಿ ಏನೋ ಇದೆ ಎಂಬುದು ಸ್ಪಷ್ಟವಾಗುತ್ತಿದೆ.

ಹೀಗೆ ಇಂತಹ ಟೀಸರ್‌ ಮೂಲಕ ಸುದ್ದಿಯಾಗುತ್ತಿರುವ ಈ ಸಿನೆಮಾವು ಭಾರೀ ಕುತೂಹಲ ಕೆರಳಿಸಿದೆ. ಉಡುಪಿಯಲ್ಲಿ ಬಹಳಷ್ಟು ಸಂಚಲನ ಮೂಡಿಸಿದ ಮರ್ಡರ್‌ ಕಥಾನಕವನ್ನು ಹೋಲುವ ರೀತಿಯಲ್ಲಿದೆ ಎಂಬುದು ಸದ್ಯದ ಸಂಗತಿ. ಹಾಗೆಂದು ನಿಜಕ್ಕೂ ಈ ಸಿನೆಮಾದ ಕಥೆ ಏನು ಎಂಬುದನ್ನು ಸಿನೆಮಾ ಬಿಡುಗಡೆಯ ಬಳಿಕವಷ್ಟೇ ತಿಳಿಯಬೇಕಿದೆ.

ತುಳುವಿನಲ್ಲಿ ನಿರ್ಮಾಣಗೊಂಡ ಭಾರೀ ಬಜೆಟ್‌ನ ಸಿನೆಮಾ ಇದಾಗಿದ್ದು, ಕನ್ನಡದ ಖ್ಯಾತ ನಟ ಸಾಯಿ ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಸತೀಶ್‌ ಬಂದಲೆ, ಸುನೀಲ್‌ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮುಂತಾದ ಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ.

‘ಪಿಲಿಬೈಲ್‌ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬರ್‌ ಸಿನೆಮಾದಲ್ಲಿ ನಾಯಕ ನಟನಾಗಿದ್ದು, ಶ್ರೇಯಾ ಅಂಚನ್‌ ನಾಯಕಿ. ಸುನಾದ್‌ ಗೌತಮ್‌ ಸಂಗೀತದ ಜತೆಗೆ ಛಾಯಾಗ್ರಹಣದಲ್ಲಿ ದುಡಿದಿದ್ದಾರೆ. ಶಂಕರ್‌ ನಾರಾಯಣ್‌ ಪೆರ್ಡೂರು ಸಂಕಲನ ಮಾಡಿದ್ದಾರೆ. ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್‌ ಜೋಗಿ ದುಡಿದಿದ್ದಾರೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.