ಶತಕದ ಹೊಸ್ತಿಲಲ್ಲಿ ಕಟಪಾಡಿ ಕಟ್ಟಪ್ಪ

Team Udayavani, Jun 20, 2019, 5:00 AM IST

2019ರ ಕೋಸ್ಟಲ್‌ವುಡ್‌ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್‌ ನಿರ್ದೇಶನದ “ಕಟಪಾಡಿ ಕಟ್ಟಪ್ಪ’ ಸಿನೆಮಾ 75ರ ಗಡಿದಾಟಿ ಮುನ್ನುಗ್ಗುತ್ತಿದೆ.

ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು, ಸಖತ್‌ ರೆಸ್ಪಾನ್ಸ್‌ ನೀಡಿದ್ದಾರೆ. ಭಾರೀ ದಿನಗಳ ಅನಂತರ ತುಳುವಿನ ಒಂದು ಸಿನೆಮಾ 100ರ ಗಡಿಯತ್ತ ಸಾಗುತ್ತಿರುವುದು ಕೋಸ್ಟಲ್‌ವುಡ್‌ನ‌ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ವಿಶೇಷವೆಂದರೆ ಈ ವರ್ಷ ಬಿಡುಗಡೆಯಾದ ಸಿನೆಮಾಗಳ ಪೈಕಿ ಗರಿಷ್ಠ ದಿನಗಳ ಪ್ರದರ್ಶನ ಕಂಡ ಸಿನೆಮಾ ಇದು ಎಂಬ ಹೆಗ್ಗಳಿಕೆಯನ್ನು ಕೂಡ ಪಡೆಯಲಿದೆ.

ಮಾ. 29ರಂದು ದೇಶ, ವಿದೇಶಗಳಲ್ಲಿ ಏಕಕಾಲದಲ್ಲಿ ಈ ಚಿತ್ರ ಬಿಡುಗಡೆಗೊಂಡಿತ್ತು. ರಾಜೇಶ್‌ ಬ್ರಹ್ಮಾವರ ಚಿತ್ರ ನಿರ್ಮಿಸಿದ್ದಾರೆ. ಬಿರುವೆರ್‌ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಯಜ್ಞೆಶ್ವರ ಬರ್ಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚರಿಷ್ಮಾ ಎಂಬ ಕಲಾವಿದೆ ಈ ಚಿತ್ರದ ಮೂಲಕ ಕೋಸ್ಟಲ್‌ವುಡ್‌ಗೆ ಎಂಟ್ರಿಯಾಗಿದ್ದಾರೆ. ಖ್ಯಾತ ನಿರ್ದೇಶಕ ರಂಗ ಕಲಾವಿದ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಈ ಸಿನೆಮಾದ ಮೂಲಕ ನಟರಾಗಿ ಕೋಸ್ಟಲ್‌ವುಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • "ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...

  • ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್‌' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌,...

  • ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ "ಲುಂಗಿ'. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ "ಲುಂಗಿ' ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ....

  • ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ "ಆಟಿಡೊಂಜಿ ದಿನ' ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ....

  • ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು...

ಹೊಸ ಸೇರ್ಪಡೆ