ಕುಡ್ಲದ “ಲುಂಗಿ’ ತೆಲುಗಿಗೆ!

Team Udayavani, Dec 5, 2019, 4:07 AM IST

ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ “ಲುಂಗಿ’. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ “ಲುಂಗಿ’ ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ. ಅರ್ಜುನ್‌ ಲೂಯಿಸ್‌ ಹಾಗೂ ಅಕ್ಷಿತ್‌ ಶೆಟ್ಟಿ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಣವ್‌ ಹೆಗ್ಡೆ ನಾಯಕ. ಅಹಲ್ಯಾ ಸುರೇಶ್‌ ಹಾಗೂ ರಾಧಿಕಾ ರಾವ್‌ ನಾಯಕಿಯರು. ಸಿನೆಮಾದಲ್ಲಿ ಸಂಚಿತ್‌ ಹೆಗ್ಡೆ ಹಾಡಿರುವ “ವೇಸ್ಟ್‌ ಬಾಡಿ’ ಹಾಡು ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಪ್ರಸಾದ್‌ ಕೆ.ಶೆಟ್ಟಿ ಸಂಗೀತ ನೀಡಿದ್ದಾರೆ.

“ಲುಂಗಿ’ ಸಿನೆಮಾ ತೆಲುಗಿನಲ್ಲಿ ರೀಮೆಕ್‌ ಕೂಡ ಆಗುತ್ತಿದೆ. ಒಟಿಟಿ ಪ್ಲಾಟ್‌ ಫಾರಂಗೆ ದೊಡ್ಡ ಮೊತ್ತಕ್ಕೆ ರೀಮೇಕ್‌ ಸೇಲ್‌ ಆಗಿರುವುದು ಚಿತ್ರ ತಂಡದ ಉತ್ಸಾಹ ಹೆಚ್ಚಿಸಿದೆ. ರೀಜೋ ಪಿ.ಜಾನ್‌ ಕೆಮೆರಾ ಹಿಡಿದಿರುವ ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯ ಆಗಿದ್ದಾರೆ. ಪ್ರೀತಿ-ಪ್ರೇಮ ಹಾಗೂ ದೇಸಿತನದ ಸೊಗಡು ಇರುವ ಈ ಚಿತ್ರವನ್ನು, ಈಗಾಗಲೇ ಕೋಸ್ಟಲ್‌ವುಡ್‌ನ‌ಲ್ಲಿ ಎರಡು ಯಶಸ್ವಿ ಚಿತ್ರಗಳನ್ನು ನೀಡುವ ಮುಖೇಶ್‌ ಹೆಗ್ಡೆ ತಮ್ಮ ಖಾರ ಎಂಟರ್‌ಟೈನ್‌ಮೆಂಟ್‌ ಮೂಲಕ ನಿರ್ಮಿಸಿದ್ದಾರೆ.

ಯುವ ಜನಾಂಗದ ಅನೇಕ ತವಕ ತಲ್ಲಣಗಳನ್ನು ಹೊತ್ತು ತಂದ ಈ ಚಿತ್ರಕ್ಕೆ ಲುಂಗಿ ಎಂದು ಹೆಸರಿಡಲು ಕಾರಣವಿದೆ. ಕಥಾ ನಾಯಕನಿಗೂ ಲುಂಗಿಗೂ ಒಂದು ಸಂಬಂಧವಿದೆ. ಹಾಗಾಗಿಯೇ ಈ ಸಿನೆಮಾಗೆ ಇಂಥದೊಂದು ಟೈಟಲ್‌ ಇಟ್ಟಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುತೂಹಲ ಪ್ರದೇಶಕ್ಕೆ ಹೋಗುವುದೆಂದರೆ ನಿಜಕ್ಕೂ ಸಾಹಸ ಹಾಗೂ ಮೈ ರೋಮಾಂಚನಗೊಳ್ಳುವ ವಿಚಾರ. ಚಿತ್ರದಲ್ಲಿ ಹಿಮಾಲಯದ ಸೌಂದರ್ಯವನ್ನು ನೋಡಿ ಖುಷಿ ಪಟ್ಟಿದ್ದೆ. ಆದರೆ...

  • ಜಿಆರ್‌ಕೆ ನಿರ್ಮಾಣದ ಎ.ವಿ. ಜಯರಾಜ್‌ ನಿರ್ದೇಶನದ ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ ನಿರ್ಮಾಣದ "ಕುದ್ಕನ ಮದ್ಮೆ' ಸಿನೆಮಾ ಜ. 31ರಿಂದ ತುಳುನಾಡಿನಾದ್ಯಂತ...

  • ಕೋಸ್ಟಲ್‌ವುಡ್‌ನ‌ಲ್ಲಿ "ಅಪ್ಪೆ ಟೀಚರ್‌' ಸಿನೆಮಾ ಮಾಡಿದ ಸಾಧನೆ ಉಲ್ಲೇಖ ನೀಯ. ತುಳು ಸಿನೆಮಾ ರಂಗದಲ್ಲಿ ಈ ಸಿನೆಮಾ ಹೊಸ ಮನ್ವಂತರವನ್ನೇ ಸೃಷ್ಟಿಸಿತ್ತು. ಸ್ವಯಂ...

  • ಕೋಸ್ಟಲ್‌ವುಡ್‌ನ‌ ಅತಿ ಬೇಡಿಕೆಯ ನಟ ಪೃಥ್ವಿ ಅಂಬರ್‌ ಸಿನೆಮಾದ ಜತೆಗೆ ಧಾರವಾಹಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ...

  • ಕಾಂಕ್ರೀಟ್‌ ಸ್ಲ್ಯಾಬ್ ಹಾಸಿದ ಹಾಗಿರುವ ಈ ಪಾರೆಯ ಮೇಲ್ಭಾಗದಲ್ಲಿ ಆರಾಮವಾಗಿ ಯಾವುದೇ ಆತಂಕವಿಲ್ಲದೇ ನಡೆದಾಡಬಹುದು. ಹತ್ತಿರ ಹತ್ತಿರ ಇಂಥ ಎರಡು ರಚನೆಗಳನ್ನು...

ಹೊಸ ಸೇರ್ಪಡೆ