“2 ಎಕ್ರೆ’ಯಲ್ಲಿದೆ ಸಂಜೀವನ ಜೀವನ!

Team Udayavani, Oct 3, 2019, 4:50 AM IST

“2ಎಕ್ರೆ’ ಹೆಸರು ಕೇಳುವಾಗ ಇದು ಜಾಗದ ಬಗ್ಗೆ ಅನಿಸಬಹುದು. ಆದರೆ, ಇಲ್ಲಿ ಕಥೆ ಆರಂಭ ಆಗುವುದು ಹಾಗೂ ಮುಕ್ತಾಯ ಆಗುವುದು 2 ಎಕ್ರೆ ಜಾಗದಲ್ಲಿ ಮಾತ್ರ. ಉಳಿದಂತೆ ಇನ್ನೂ ಅನೇಕತೆ ಇದರಲ್ಲಿದೆ!

ಅಂದರೆ, 2ಎಕ್ರೆ ಜಾಗದಲ್ಲಿ ಒಬ್ಬ ಸಂಜೀವಣ್ಣ ಎನ್ನುವವರಿದ್ದಾರೆ. ಅದೇ ಊರಲ್ಲಿ ಮನೆ ಮನೆಗೆ ಬಟ್ಟೆ ಮಾರುವ ಇನ್ನೊಬ್ಬ ಸಂಜೀವ ಇದ್ದಾನೆ. ಇಂತಹ ಎರಡು ಸಂಜೀವರು ಬೇರೆ ಬೇರೆ ಆರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೀಗಾಗಿ ಇವರ ಒಂದೇ ಹೆಸರಿನಿಂದಾಗಿ ಸೃಷ್ಟಿಯಾಗುವ ಅವಾಂತರವೇ ಸಿನೆಮಾ!

ಸಂಜೀವನ ಜೀವನ ಆಗುವ ಒಟ್ಟು ಪರಿಸ್ಥಿತಿಯೇ 2 ಎಕ್ರೆ. ಜಾಗದಿಂದ ಹಿಡಿದು ಆಸ್ಪತ್ರೆಯಲ್ಲಿ ದಾಖಲಾಗಿ ಹೆಸರು ಬದಲಾಗಿ ಆಗುವ ಎಡವಟ್ಟಿನವರೆಗೆ ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ. ಹಾಸ್ಯವನ್ನೇ ಆಧಾರವಾಗಿಟ್ಟುಕೊಂಡು ಮಾಡಿದ ಸಿನೆ ಮಾ ಇದು ಎಂಬುದು ಇದರಿಂದ ಸ್ಪಷ್ಟ.

2 ಎಕ್ರೆಯ ಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿಸ್ಮಯ ವಿನಾಯಕ್‌ ಅವರದ್ದು. ಸಂದೇಶ್‌ ಬಂಗೇರ, ರೋಹನ್‌ ಕೋಡಿಕಲ್‌ ಚಿತ್ರ ನಿರ್ಮಾಪಕರು. ಒಟ್ಟು 2 ಗಂಟೆ ಎಂಟರ್‌ಟೈನ್‌ಮೆಂಟ್‌ ಮಾಡುವ ಸಿನೆಮಾ.

ಗಿರಿಗಿಟ್‌ ಸಿನೆಮಾದ ಸಹಾಯಕ ನಿರ್ದೇಶಕ ರಾಕೇಶ್‌ ಕದ್ರಿ ಸಹನಿರ್ದೇಶಕ. ಪ್ರದೀಪ್‌ ಕೋಡಿಕಲ್‌, ರಾಕೇಶ್‌ ದೇವಾಡಿಗ, ಸಂತೋಷ್‌ ಸುಳ್ಯ ಸಹಾಯಕ ನಿರ್ದೇಶಕರು.

ಅರವಿಂದ ಬೋಳಾರ್‌, ಶ್ರೀಪತಿ ಇಬ್ಬರೂ ಸಂಜೀವನ ಪಾತ್ರದಲ್ಲಿದ್ದರೆ, ನವೀನ್‌ ಡಿ. ಪಡೀಲ್‌, ವಿಸ್ಮಯ ವಿನಾಯಕ್‌ ಅಣ್ಣ ತಮ್ಮ. ಪೃಥ್ವಿ ಅಂಬರ್‌, ನಿರೀಕ್ಷಾ ಶೆಟ್ಟಿ ಹೀರೋ-ಹೀರೋಯಿನ್‌. ಪ್ರಕಾಶ್‌ ತೂಮಿನಾಡ್‌ 2 ಎಕ್ರೆಯ ಕೆಲಸದ ಆಳು, ಉಮೇಶ್‌ ಮಿಜಾರ್‌ ಆಸ್ಪತ್ರೆಯ ವಾರ್ಡನ್‌, ಮಂಜು ರೈ ಮೂಳೂರು ಸುಪಾರಿ ಕಿಲ್ಲರ್‌. ಮೈಮ್‌ ರಾಮ್‌ದಾಸ್‌, ದೀಪಕ್‌ ರೈ ಸಂಜೀವನ ಪ್ರಾಣ ಸ್ನೇಹಿತರು. ರೂಪಾ ವರ್ಕಾಡಿ ಸಂಜೀವನ ಹೆಂಡತಿ. ಶ್ರದ್ಧಾ ಸಾಲ್ಯಾನ್‌ ಕೂಡ ಇದೇ ಪಾತ್ರ. ರವಿ ರಾಮಕುಂಜ ಆಸ್ಪತ್ರೆಯ ಸೆಕ್ಯುರಿಟಿ, ಅನಿಶಾ ಶರತ್‌ ನರ್ಸ್‌ ಭಗ್ನ ಪ್ರೇಮಿಗಳು, ಸುರೇಶ್‌ ಮಂಜೇಶ್ವರ ಡಾಕ್ಟರ್‌. ಉಳಿದಂತೆ ಶಬರೀಶ್‌ ಕಬ್ಬಿನಾಳೆ, ಯತೀಶ್‌ ಪಸೋಡಿ, ಆರ್‌.ಜೆ.ಅರ್ಪಿತ್‌, ದೀಕ್ಷಿತ್‌ ಕೋಟ್ಯಾನ್‌, ಪ್ರದೀಪ್‌ ಅಭಿನಯಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ದೀಪಕ್‌ ರಾಜ್‌ ಶೆಟ್ಟಿ, ಸೂರಜ್‌ ಶೆಟ್ಟಿ , ಪ್ರಶಾಂತ್‌ ಸಿ.ಕೆ., ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಚಿತ್ರದಲ್ಲಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿಯೇ ಸಿನೆಮಾ ಶೂಟಿಂಗ್‌ ನಡೆದಿತ್ತು. ಸಿದ್ಧು ಜಿ.ಎಸ್‌. ಛಾಯಾಗ್ರಹಣ, ಕಿಶೋರ್‌ ಶೆಟ್ಟಿ ಸಂಗೀತ, ಸುನದ್‌ ಗೌತಮ್‌ ಹಿನ್ನೆಲೆ ಸಂಗೀತ, ರಾಹುಲ್‌ ವಶಿಷ್ಠ ಸಂಕಲನದಲ್ಲಿ ಕೈಜೋಡಿಸಿದ್ದಾರೆ. ಸುರೇಶ್‌ ನಾಯಕ್‌, ಮಹೇಶ್‌, ಕಿರಣ್‌ ಶೆಟ್ಟಿ ಸಹಕರಿಸಿದ್ದಾರೆ.

2 ಎಕ್ರೆಯಲ್ಲಿ ವಿಶೇಷವೆಂದರೆ ಸಾಕಷ್ಟು “2′ ಇದೆ. 2 ಗಂಟೆಯ, 2 ಸಂಜೀವನ, 2 ಮಕ್ಕಳ ಗಲಾಟೆಯ, 2 ಹೆಂಡತಿಯ, 2 ಕಥೆಯ, ನಿರ್ದೇಶಕ-ನಿರ್ಮಾಪಕರ 2ನೇ ಸಿನೆಮಾ ಇದಾಗಿರುವುದರಿಂದ ಸಿನಿಪ್ರಿಯರು 2 ಬಾರಿ ಸಿನೆಮಾ ನೋಡಲಿದ್ದಾರೆ ಎಂಬ ವಿಶ್ವಾಸ ನಮ್ಮದು ಎನ್ನುತ್ತಾರೆ ನಿರ್ದೇಶಕ ವಿಸ್ಮಯ ವಿನಾಯಕ್‌.

-  ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ