ರೆಡಿಯಾಗುತ್ತಿದೆ ಕರಾವಳಿಯ ಶಾಲೆಯ ಕಥೆ!

Team Udayavani, May 16, 2019, 6:00 AM IST

ಕರಾವಳಿಯ ಹೊಸ ಮುಖಗಳನ್ನೇ ಬಳಸಿಕೊಂಡು ರೆಡಿ ಮಾಡುತ್ತಿರುವ “ಒಂದು ಶಾಲೆಯ ಕಥೆ’ ಸಿನೆಮಾ ಕರಾವಳಿಯ ಸರಕಾರಿ ಶಾಲೆಯ ಕಥೆ ಹೇಳಲು ರೆಡಿಯಾಗಿವೆ. ವಿದ್ಯಾಲತಾ ಯು. ಶೆಟ್ಟಿ ನಿರ್ಮಾಣದಲ್ಲಿ ಹೊರ ಬರಲಿರುವ ಈ ಚಿತ್ರವನ್ನು ಪ್ರಕಾಶ್‌ ಸುವರ್ಣ ಕಟಪಾಡಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಒಂದು ಶಾಲೆಯ ಕಥೆ ಎಂಬ ಆಕರ್ಷಕ ಹೆಸರಿನ ಈ ಚಿತ್ರವು ಕನ್ನಡ ಮಾಧ್ಯಮ ಶಾಲೆಯೊಂದರ ದುರಂತ ಕಥೆಯನ್ನು ಹೇಳಲಿದೆ.

ಪ್ರಮುಖ ಕಲಾವಿದರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹೊಸಬರು. ಅದರಲ್ಲೂ ಕಲಾವಿದರು ಬಹುತೇಕ ಕರಾವಳಿಯವರು. ಇದರಲ್ಲಿ ಬಾಲ ಕಲಾವಿದರ ಸಂಖ್ಯೆಯೂ ಹೆಚ್ಚಿರಲಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಲು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಒಪ್ಪಿದ್ದಾರೆ.

ಅನಂತನಾಗ್‌ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.ಜತೆಗೆ,ಹಿರಿಯ ಕಲಾವಿದರಾದ ತಾರಾ ಮತ್ತು ರಮೇಶ್‌ ಭಟ್‌ ನಟಿಸಲಿದ್ದು, ಸೋನಿ ಸಿಐಡಿ ಸೀರಿಯಲ್‌ ಖ್ಯಾತಿಯ ದಯಾಶೆಟ್ಟಿ ಅವರು ಅತಿಥಿ ಕಲಾವಿದರು. ಕಾಸರಗೋಡು ಸರ ಕಾರಿ ಕನ್ನಡ ಶಾಲೆ ಸಿನೆಮಾದಲ್ಲಿ ಮುಖ್ಯೋಪಾಧ್ಯಾಯರ ಪಾತ್ರವನ್ನು ಮಾಡಿದವರೇ ಇಲ್ಲೂ ಮುಖ್ಯ ಶಿಕ್ಷಕರ ಪಾತ್ರ ವನ್ನು ಮಾಡಲಿದ್ದಾರೆ.

ಖ್ಯಾತ ಬಡಗುತಿಟ್ಟು ಯಕ್ಷಗಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ, ವಿಜಯ ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಉಡುಪಿಯ ಪ್ರತಿಭೆ ಲಿಖೀತ್‌ ಕೋಟ್ಯಾನ್‌ ಮುಂತಾದವರು ಸ್ವರ ನೀಡಿದ್ದಾರೆ.

ರೋಹಿತ್‌ ಮಲ್ಪೆ ಅವರ ಸಂಗೀತವಿರಲಿದೆ. ಕೆಮರಾದಲ್ಲಿ ಯುವ ಪ್ರತಿಭೆ ಭುವನೇಶ್‌ ಪ್ರಭು ಹಿರೇಬೆಟ್ಟು ಕೆಲಸ ಮಾಡಲಿದ್ದಾರೆ.ಕೃಷ್ಣ ಪ್ರಸಾದ್‌ ಉಪ್ಪಿನಕೋಟೆ, ದಯಾನಂದ ಕೆ.ಶೆಟ್ಟಿ ದೆಂದೂರ್‌, ಪ್ರಶಾಂತ್‌ ಎಸ್‌.ಪಿ., ನಿತಿನ್‌ ಪೂಜಾರಿ ಪುತ್ತೂರು,ರಿತೇಶ್‌ ದೇವಾಡಿಗ ಅಲೆವೂರು ಮುಂತಾದವರು ತಂಡದಲ್ಲಿದ್ದಾರೆ.ಸಂಕಲನದಲ್ಲಿ ಪ್ರಜ್ವಲ್‌ ಸುವರ್ಣ ಕೆಲಸ ಮಾಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಸದ್ಯ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು. ಕೈಯಲ್ಲಿರುವ ಮೊಬೈಲ್‌ ಮೂಲಕವೇ ಸರ್ವ ಸಂಗತಿಗಳು ಜನರ ಕೈ ಸೇರುತ್ತಿವೆ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ...

  • ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ "ಇಂಗ್ಲಿಷ್‌' ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು...

  • "ಕೋರಿರೊಟ್ಟಿ' ಮೂಲಕ ಮನೆ ಮಾತಾದ ಉಡುಪಿಯ ರಜನೀಶ್‌ ನಿರ್ದೇಶನದ "ಬೆಲ್ಚಪ್ಪ' ಸಿನೆಮಾ ಬಿಡುಗಡೆಯ ಹಂತದಲ್ಲಿದೆ. ನಟನಾಗಿ ಬೆಳೆದರೂ ಕೂಡ ಅವರಿಗೆ ಮುಖ್ಯ ಗುರಿ ಇದ್ದದ್ದು...

  • "ಕಟಪಾಡಿ ಕಟ್ಟಪ್ಪ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ...

  • ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ...

ಹೊಸ ಸೇರ್ಪಡೆ