“ಗಿರಿಗಿಟ್‌’ನಲ್ಲಿ ಪಡೀಲ್‌ ಮೀಸೆ ಮಾಮ!

Team Udayavani, Jun 13, 2019, 5:00 AM IST

ಸದ್ಯ ಪೋಸ್ಟರ್‌ ಹಾಗೂ ಒಂದೊಂದು ಡೈಲಾಗ್‌ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಸಿನೆಮಾ “ಗಿರಿಗಿಟ್‌’. ರೂಪೇಶ್‌ ಶೆಟ್ಟಿ ಅವರ ಮೊದಲು ಆ್ಯಕ್ಷನ್‌ ಕಟ್‌ ಹೇಳಿದ ಸಿನೆಮಾ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರ ಸಮ್ಮಿಲನದೊಂದಿಗೆ ಗಿರಿಗಿಟ್‌ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಮುಖ್ಯ ಕಲಾವಿದರ ಅಭಿನಯದ ಪೋಸ್ಟರ್‌ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಫೇಮಸ್‌ ಕಲಾವಿದರ ವಿಭಿನ್ನ ಅಭಿನಯದ ಚಿತ್ರಗಳು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮೂಡ್‌ ಕ್ರಿಯೇಟ್‌ ಮಾಡಿದೆ. ಅರವಿಂದ ಬೋಳಾರ್‌ ಕೋದಂಡ ಎಂಬ ಲಾಯರ್‌ ಲುಕ್‌ನಲ್ಲಿದ್ದರೆ, ವಾಮಂಜೂರು ಯಕ್ಷಗಾನದ ವೇಷ ಹಾಕಿದ ಪೋಸ್ಟರ್‌ ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ನವೀನ್‌ ಡಿ. ಪಡೀಲ್‌ ಸರದಿ. ಮುನ್ನಾ ದಿನ ಪೋಸ್ಟರ್‌ ರಿಲೀಸ್‌ ಎಂದು ವೀಡಿಯೋ ಶೂಟಿಂಗ್‌ ಮಾಡುವ ಕಾಲದಲ್ಲಿ ಪೋಸ್ಟರ್‌ನಲ್ಲಿ ಏನೂ ಇರಲಿಲ್ಲ. ಆಗ ನಿರ್ದೇಶಕ ರೂಪೇಶ್‌ ಬಂದು “ಇವತ್ತಲ್ಲ ಪೋಸ್ಟರ್‌ ರಿಲೀಸ್‌ ಜೂ.12ಕ್ಕೆ’ ಎನ್ನುತ್ತಾರೆ. ಈ ಮೂಲಕ ನಗುವಿನೊಂದಿಗೆ ಕುತೂಹಲ ಮೂಡಿಸಿದ ಈ ಸಣ್ಣ ವಿಡಿಯೋ ತುಣುಕು ವೈರಲ್‌ ಆಗಿತ್ತು.

ಬುಧವಾರ ರಿಲೀಸ್‌ ಆದ ಪೋಸ್ಟರ್‌ನಲ್ಲಿ ನವೀನ್‌ ಡಿ. ಪಡೀಲ್‌ ಮಿಲಿಟ್ರಿ ಆಫೀಸರ್‌ ಗೆಟಪ್‌ನಲ್ಲಿದ್ದಾರೆ. ದಪ್ಪ ಮೀಸೆಯಲ್ಲಿ ಪಡೀಲ್‌ ಮಿಂಚುತ್ತಿದ್ದಾರೆ. ನಟ ರೂಪೇಶ್‌ ಶೆಟ್ಟಿ ಹೊಸತನದೊಂದಿಗೆ ವಿನೂತನ ಸಿನೆಮಾ ಬರಬೇಕು ಎಂಬ ಲೆಕ್ಕ ಹಾಕಿಕೊಂಡವರು. ಆಗಸ್ಟ್‌ ವೇಳೆಗೆ ಬಿಡುಗಡೆಯ ನಿರೀಕ್ಷೆಯಲ್ಲಿರುವ ಈ ಸಿನೆಮಾ ರೂಪೇಶ್‌ ಅವರ ಬಹುನಿರೀಕ್ಷೆಯ ಸಿನೆಮಾ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತುಳು ಸಿನೆಮಾ ಇಂಡಸ್ಟ್ರಿಯ ರೀತಿಯಲ್ಲಿಯೇ ಕೊಂಕಣಿಯಲ್ಲಿಯೂ ಹಲವು ಸಿನೆಮಾಗಳು ತೆರೆ ಮೇಲೆ ಬರುತ್ತಿವೆ. ಕೊಂಕಣಿ ಭಾಷಿಗರು ಅಧಿಕವಿರುವ ಕರಾವಳಿಯಲ್ಲಿ ಈ ಸಿನೆಮಾಗಳಿಗೆ...

  • ಕೋಸ್ಟಲ್‌ವುಡ್‌ನ‌ಲ್ಲಿ ಸಿನೆಮಾಗಳ ಸಂಖ್ಯೆ ಮತ್ತೆ ಏರಿಕೆ ಹಂತದಲ್ಲಿದೆ. ಗಿರಿಗಿಟ್‌ ಮಾಡಿದ ಕಮಾಲ್‌ನಿಂದಾಗಿ ಬಹಳಷ್ಟು ನಿರ್ಮಾಪಕ-ನಿರ್ದೇಶಕರು ತುಳು ಸಿನೆಮಾದಲ್ಲಿ...

  • ಸಾಮಾನ್ಯವಾಗಿ "ಇಲ್ಲ್ ಒಕ್ಕೆಲ್‌' ದಿನ ಅಂದರೆ ಖುಷಿಯ ದಿನ.ನೆಂಟರ ಜತೆಗೆ ಸೇರಿಕೊಂಡು ಮನೆ ಮಂದಿಯೆಲ್ಲ ಸಂಭ್ರಮಿಸುವ ಕ್ಷಣ.ಆ ದಿನವೇ ಭಯಾನಕ ದೃಶ್ಯಗಳು ಸಂಭವಿಸಿದರೆ...

  • ತುಳು ಸಿನೆಮಾಗಳ ಪಾಲಿಗೆ ಕೆಲವೇ ದಿನಗಳಲ್ಲಿ ತೆರೆಕಾಣಲಿರುವ "ಇಂಗ್ಲೀಷ್‌' ಹೊಸ ನಿರೀಕ್ಷೆ ಮೂಡಿಸಿದೆ. ತುಳು ಭಾಷೆಯಲ್ಲಿ ಇಂಗ್ಲೀಷ್‌ ಎಂಬ ಟೈಟಲ್‌ ಅನ್ನು ಹಾಕಿಕೊಂಡ...

  •   ತುಳು ಸಿನೆಮಾ ರಂಗದಲ್ಲಿ ಚಾರಿತ್ರಿಕ ದಾಖಲೆ ಬರೆದ ಹಾಗೂ ಇತ್ತೀಚೆಗೆ 150ರ ಸಂಭ್ರಮವನ್ನು ದಾಖಲಿಸಿ ಸಾಗುತ್ತಿರುವ "ಗಿರಿಗಿಟ್‌' ಚಿತ್ರ ತಂಡದ ಮುಂದಿನ ಸಿನೆಮಾ...

ಹೊಸ ಸೇರ್ಪಡೆ