“ಆಟಿಡೊಂಜಿ ದಿನ’ದಲ್ಲಿ ಪಟ್ಲರ ಹಾಡು

Team Udayavani, Oct 3, 2019, 5:10 AM IST

ಯಕ್ಷಗಾನಕ್ಕೆ ಆಕರ್ಷಣೆ ಮತ್ತು ಮಹತ್ವ ನೀಡುವ ನೆಲೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಪಟ್ಲ ಸತೀಶ್‌ ಶೆಟ್ಟಿ ಅವರು ತುಳು ಸಿನೆಮಾದಲ್ಲಿಯೂ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಈಗಾಗಲೇ ಒಂದೆರಡು ತುಳು ಸಿನೆಮಾಗಳಲ್ಲಿ ಭಾಗವತಿಕೆ ಶೈಲಿಯಲ್ಲಿ ಸ್ವರಮಾಧುರ್ಯ ಹರಿಸಿದ ಪಟ್ಲ ಅವರು ತುಳು ಸಿನಿಪ್ರಿಯರ ಮನಸ್ಸು ಗೆದ್ದಿದ್ದಾರೆ.

ಇದೀಗ ಬಿಡುಗಡೆಗೆ ಸಿದ್ಧವಾಗಿರುವ “ಆಟಿಡೊಂಜಿ ದಿನ’ ಸಿನೆಮಾದಲ್ಲಿ ಪಟ್ಲ ಸತೀಶ್‌ ಶೆಟ್ಟಿ ಅವರ ಕಂಠಸಿರಿಯಿದೆ. ಸುಶ್ರಾವ್ಯ ಹಾಡಿನ ಮೂಲಕ ಮನೆಮಾತಾದ ಪಟ್ಲ ಇದೀಗ ಆಟಿಡೊಂಜಿ ದಿನದ ಮೂಲಕವೂ ಪ್ರೇಕ್ಷಕರ ಮನಸ್ಸು ಗೆಲ್ಲಲು ಸಿದ್ಧರಾಗಿದ್ದಾರೆ.

ಆಟಿಡೊಂಜಿ ದಿನ.. ಪಾಳೆದ ಕೊಡೆಟ್‌ ಊರಿಡೀ ತಿರುಗುವ ಕಳಂಜಾ… ತುಳುವೆರೆ ಊರುದ ಮಾರಿನ್‌ ಗಿಡತ್‌ದ್‌ ಪಾಳೆದ ಮದ್‌ì ಕೊರು ಕಳಂಜಾ… ಮಾಯಂದರಸು ಮಗೆ ಮಾಯೊಡು ಪುಟ್ಟಿಯೇ, ಪತ್ತೆ ಕಾಲೊಡು ಪದಿನಾಜಿ ಪ್ರಾಯೊಡು ಮಾರಿಗ್‌ ದಾನೇವು ಕಳಂಜಾ… ಬೀರಿಗ್‌ ದಾನೇವು ಕಳೆಂಜಾ..’ ಎಂಬ ಹಾಡು ಪಟ್ಲರಿಂದ ಧ್ವನಿಮುದ್ರಣಗೊಂಡಿದೆ.

ಈ ಹಾಡನ್ನು ಸಂಗೀತ ನಿರ್ದೇಶಕ ರಾಜೇಶ್‌ ಭಟ್‌ ಬರೆದಿದ್ದು, ಸಂಗೀತವೂ ಅವರದ್ದೇ ಆಗಿದೆ. ಭವಿಷ್‌ ಆರ್‌.ಕೆ ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ತುಳು ಸಿನೆಮಾ ಮುಂದಿನ ತಿಂಗಳು ತೆರೆಮೇಲೆ ಬರಲು ಸಿದ್ಧತೆ ಮಾಡಿ ಕೊಂಡಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿರುವ ಬೆರಳೆಣಿಕೆ ಸಿನೆಮಾಗಳ ಪೈಕಿ “ಆಟಿ ಡೊಂಜಿ ದಿನ’ ಕೂಡ ಒಂದಾಗಿರು ವುದರಿಂದ ಸಿನೆಮಾದ ಬಗ್ಗೆ ಈಗಲೇ ಕುತೂಹಲ ಶುರುವಾಗಿದೆ. ರಾಧಾಕೃಷ್ಣ ನಾಗರಾಜು ಮತ್ತು ಚೈತ್ರ ರಾಧಾಕೃಷ್ಣ ಚಿತ್ರ ನಿರ್ಮಿಸಿದ್ದು,

ಆಕಾಶ್‌ ಹಾಸನ್‌ ಸಹನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರು. ಈ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್‌ ಕೊಣಾಜೆಕಲ್ಲು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಪ್ರಸ್ತುತ ಎ.ಎಸ್‌ ವೈಭವ್‌ ಪ್ರಶಾಂತ್‌ ಅವರು ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್‌ಗೆ ಕಳುಹಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ