ಹಾಡಿನಲ್ಲಿ ಮೋಡಿ ಮಾಡುವ ‘ಪೆನ್ಸಿಲ್ ಬಾಕ್ಸ್’
Team Udayavani, Jul 25, 2019, 5:00 AM IST
ದಯಾನಂದ ಎಸ್ ರೈ ಬೆಟ್ಟಂಪಾಡಿ ನಿರ್ಮಾಣದ ‘ಪೆನ್ಸಿಲ್ ಬಾಕ್ಸ್’ ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಪೆನ್ಸಿಲ್ ಬಾಕ್ಸ್ ಸಿನೆಮಾದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆೆ.
ಪೆನ್ಸಿಲ್ ಬಾಕ್ಸ್ ಚಿತ್ರದ ಕತೆ, ಚಿತ್ರಕತೆ, ನಿರ್ದೇಶನ ರಝಾಕ್ ಪುತ್ತೂರು ಅವರದ್ದು. ‘ಡ್ಯಾನ್ಸ್ ಡ್ಯಾನ್ಸ್’ ಜೂನಿಯರ್ ಖ್ಯಾತಿಯ ದೀಕ್ಷಾ ಡಿ ರೈ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನೆಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಸರಿಗಮಪ ಖ್ಯಾತಿಯ ಡಾ|ಅಭಿಷೇಕ್, ವೈಷ್ಣವಿ, ರವಿ, ಕ್ಷಿತಿ ಕೆ. ರೈ ಧರ್ಮಸ್ಥಳ, ಅಪೇಕ್ಷಾ ಪೈ, ಜನ್ಯ ಪ್ರಸಾದ್, ಶಿವಾನಿ ಕೊಪ್ಪ ಮುಂತಾದವರು ಧ್ವನಿ ನೀಡಿದ್ದಾರೆ. ರಝಾಕ್ ಅವರ ಸಾಹಿತ್ಯಕ್ಕೆ ಜಯಕಾರ್ತಿ ಸಂಗೀತ ನೀಡಿದ್ದಾರೆ. ಸಿನೆಮಾದಲ್ಲಿ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ ಅಭಿನಯಿಸಿದ್ದಾರೆ.