ತುಳುನಾಡಿನ ಬದುಕು ಕಟ್ಟಿಕೊಡುತ್ತಿದೆ ಪಿಂಗಾರ!


Team Udayavani, Mar 5, 2020, 5:22 AM IST

PINGARA

1960ರಿಂದ 2019ರವರೆಗೆ ತುಳುನಾಡಿನಲ್ಲಿ ಆಗಿರುವ ಬದಲಾವಣೆಯ ಚಿತ್ರಣಗಳನ್ನು ಬಿಂಬಿಸುವ ಹೊಸ ಸಿನೆಮಾ “ಪಿಂಗಾರ’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಸದ್ದು ಮಾಡುತ್ತಿದೆ. ಬೀಡಿ ಉದ್ಯಮ, ಉಳುವವನೇ ಹೊಲದೊಡೆಯ ಮುಂತಾದವುಗಳೆಲ್ಲ ತುಳುನಾಡಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಹಾಗೂ ದೈವದ ಕಾರಣಿಕ ಮುಂತಾದ ಕಥಾನಕಗಳನ್ನೇ ತುಂಬಿರುವ ಪಿಂಗಾರ ಸಾಕಷ್ಟು ವಿಚಾರಗಳೊಂದಿಗೆ ಪ್ರಸ್ತುತ ಚರ್ಚೆಗೆ ಬಂದಿದೆ.

ಅದರಲ್ಲಿಯೂ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಮತ್ತು ಭಾರತೀಯ ಚಲನಚಿತ್ರ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿರುವ ಮೊದಲ ತುಳು ಚಿತ್ರ ಎಂಬ ಮಾನ್ಯತೆಗೂ ಪಿಂಗಾರ ಪಾತ್ರವಾಗಿದೆ.

ಗುರುಪುರದ ಆರ್‌. ಪ್ರೀತಮ್‌ ಶೆಟ್ಟಿ ಎಂಬ ಉತ್ಸಾಹಿ ಯುವಕನ ನಿರ್ದೇಶನದ ಸಿನೆಮಾ. ಅವಿನಾಶ್‌ ಯು. ಶೆಟ್ಟಿ ಮತ್ತು ಡಿ.ಎನ್‌. ಮಂಜುನಾಥ್‌ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.

ತುಳುನಾಡಿನಲ್ಲಿ ಭೂತಾರಾಧನೆ ಒಂದು ವಿಶಿಷ್ಠ ಪದ್ದತಿ. ಇಲ್ಲಿ ತನಿಯ ಎಂಬಾತನ ಮೈಯಲ್ಲಿ ದೈವ ಆವಾಹನೆಯಾಗಿ ಸತ್ಯವನ್ನೇ ನುಡಿಯುತ್ತದೆ. ಇದರಿಂದ ಮೇಲ್ವರ್ಗದ ವ್ಯಕ್ತಿಗಳು ಕಸಿವಿಸಿಗೊಳ್ಳುತ್ತಾರೆ. ಪ್ರತಿಷ್ಠೆ ಮತ್ತು ಜಾತಿ ತಾರತಮ್ಯದ ಅಮಾನವೀಯ ಘಟನೆಗಳು ಚಲಾವಣೆಯಲ್ಲಿದ್ದು, ಸಾಮಾಜಿಕ ನ್ಯಾಯ ಕಾಣೆಯಾಗಿದೆ ಎಂಬ ಅಂಶಗಳು ಈ ಮೂಲಕ ಬಹಿರಂಗವಾಗುತ್ತವೆ. ಇದರಿಂದ ಮುಂದೆ ನಡೆಯುವ ಕಥಾನಕವೇ ಪಿಂಗಾರ.

ನೀಮಾ ರೈ, ಶರಣ್‌ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸುನೀಲ್‌ ನೆಲ್ಲಿಗುಡ್ಡೆ, ಸಿಂಚನಾ ಚಂದ್ರ ಮೋಹನ್‌, ಪ್ರಶಾಂತ್‌ ಸಿ.ಕೆ. ಮುಂತಾದವರು ನಟಿ ಸಿ ದ್ದಾರೆ. ಶಶಿರಾಜ್‌ ಕಾವೂರು ಅವರ ಸಂಭಾಷಣೆ ಹೊಂದಿರುವ ಸಿನೆಮಾಕ್ಕೆ ಮೈಮ್‌ ರಾಮದಾಸ್‌ ಹಾಗೂ ಶೀನಾ ನಾಡೋಲಿ ಅವರ ಸಾಹಿತ್ಯವಿದೆ. ಛಾಯಾಗ್ರಹಣದಲ್ಲಿ ವಿ. ಪವನ್‌ ಕುಮಾರ್‌ ಸಹಕರಿಸಿದ್ದು, ಗಣೇಶ್‌ ನೀರ್ಚಾಲ್‌ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನವಿದೆ. ನಿರ್ದೇಶಕ ಪ್ರೀತಂ ಶೆಟ್ಟಿ ಅವರು ತುಳುನಾಡಿನ ಸಂಸ್ಕೃತಿ ಮತ್ತು ದೈವಾರಾಧನೆ ಬಗ್ಗೆ ಆಳವಾದ ಮಾಹಿತಿ ಮತ್ತು ಆಸಕ್ತಿ ಹೊಂದಿದವರು. ಧಾರಾವಾಹಿ ನಿರ್ದೇಶನದ ಮೂಲಕ ವೃತ್ತಿ ರಂಗ ಪ್ರವೇಶಿಸಿದವರು. ಪ್ರೀತಮ್‌ ಶೆಟ್ಟಿ ಕರಾವಳಿಯ ಹುಡುಗ. ತುಳುವಿನಲ್ಲಿ ಪಿಂಗಾರ ಸಿನೆಮಾ ನಿರ್ದೇಶಿಸಿರುವ ಇವರು ಕನ್ನಡದಲ್ಲಿ “ಸದ್ಗುಣ ಸಂಪನ್ನ ಮಾಧವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ಚಿತ್ರಕ್ಕೆ ರವಿಶಂಕರ್‌ ನಾಯಕ ನಟನಾಗಿದ್ದು, ಕಥೆ ಚಿತ್ರಕಥೆ ಕೂಡ ಪ್ರೀತಮ್‌ ಅವರದ್ದಾಗಿದೆ. ಹಿಂದಿ, ಕನ್ನಡ ಕಿರುತೆರೆಯಲ್ಲಿ ಪ್ರೀತಮ್‌ ಅವರು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವವಿದೆ.

– ದಿನೇಶ್‌ ಇರಾ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.