“ಪೊಡಿ ದಾಮು’ ನಾಪತ್ತೆ!
Team Udayavani, Feb 27, 2020, 4:48 AM IST
ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ದಾಮುವಿನ ಫೋಟೋ ಹಾಕಿ ನಾಪತ್ತೆ ಸುದ್ದಿ ಹರಿದಾಡುತ್ತಿದೆ!
ಅಂದಹಾಗೆ, ಇದು ನಿಜ ವಿಚಾರವಲ್ಲ; ಬದಲಾಗಿ ಸಿನೆಮಾ ಪ್ರಚಾರಕ್ಕಾಗಿ ಮಾಡಿದ ಹೊಸ ತಂತ್ರ. ಕೋಸ್ಟಲ್ವುಡ್ನಲ್ಲಿ ಸಿನೆಮಾ ಪ್ರಚಾರ ಸದ್ಯ ವಿಭಿನ್ನವಾಗಿ ನಡೆಯುತ್ತಿರುವುದು ನಿಮಗೆ ಗೊತ್ತೇ ಇದೆ. ಪ್ರಚಾರದ ಮೂಲಕವೇ ತುಳು ಸಿನೆಮಾಕ್ಕೆ ಪ್ರೇಕ್ಷಕರನ್ನು ಆಕರ್ಷಿಸುವ ಕಲೆ ನಡೆಯುತ್ತಿದೆ. ಅದರಲ್ಲಿಯೂ ಖ್ಯಾತ ನಿರ್ದೇಶಕ ಸೂರಜ್ ಶೆಟ್ಟಿ ಇಂತಹ ಪ್ರಚಾರದ ಮೂಲಕ ಸುದ್ದಿ ಮಾಡುತ್ತಲೇ ಇರುತ್ತಾರೆ. ವಿಶೇಷವೆಂದರೆ “ಪೊಡಿ ದಾಮು’ ನಾಪತ್ತೆಯ ಪ್ರಚಾರದ ತಂತ್ರ ಕೂಡ ಸೂರಜ್ ಶೆಟ್ಟಿ ಅವರದ್ದು. ನವೀನ ಡಿ. ಪಡೀಲ್ ಅವರನ್ನು ಪೊಡಿ ದಾಮು ರೂಪದಲ್ಲಿ ಬದಲಾಯಿಸಿ ಮಾಡಿರುವ ಪೋಸ್ಟರ್ ಎಲ್ಲೆಡೆ ಕಾಣಸಿಗುತ್ತಿದೆ.
ಮುಂದಿನ ತಿಂಗಳು 20ರಂದು ಬಿಡುಗಡೆ ಆಗುವ “ಇಂಗ್ಲೀಷ್’ ಸಿನೆಮಾ ಇಂತಹ ಪ್ರಚಾರಕ್ಕೆ ಮೊರೆಹೋಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪೃಥ್ವಿ ಅಂಬರ್ ಹಾಗೂ ನವ್ಯ ಜೋಡಿಯ ಜತೆಗೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ ಮೊದಲಾದ ಸಿನೆಮಾದಲ್ಲಿ ಕಾಮಿಡಿ ಹವಾ ಸೃಷ್ಟಿಸಿದ್ದಾರೆ. ಸಿನೆಮಾದ ಒಂದು ದೃಶ್ಯ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ