ಬೋಳಾರ್‌ ಕೊಂಡಾಡಿದ ಪವರ್‌ಸ್ಟಾರ್‌!

Team Udayavani, Nov 7, 2019, 3:35 AM IST

ಅರವಿಂದ ಬೋಳಾರ್‌ ಕೋಸ್ಟಲ್‌ವುಡ್‌ನ‌ ಬಹುನಿರೀಕ್ಷಿತ ನಟ. ಕಾಮಿಡಿ ಮೂಲಕವೇ ಮನೆಮಾತಾದ ಬೋಳಾರ್‌ ಸಿನೆಮಾ ಬಗ್ಗೆ ಕರಾವಳಿಯಲ್ಲಿ ತುಂಬಾನೆ ಕುತೂಹಲ. ಸ್ಯಾಂಡಲ್‌ವುಡ್‌ನ‌ಲ್ಲಿಯೂ ಸಿನೆಮಾ ಮಾಡಿದ ಬೋಳಾರ್‌ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ಪ್ರೀತಿ. ಗಿರಿಗಿಟ್‌ ಸಕ್ಸಸ್‌ ಬರೆದ ಬಳಿಕವಂತು ಬೋಳಾರ್‌ ಅವರ ಬಗ್ಗೆ ಎಲ್ಲೆಲ್ಲಿಯೂ ಒಳ್ಳೆಯ ಮಾತುಗಳೇ ಕೇಳಿಬರುತ್ತಿವೆ. ಇಂತಹ ಕಾಲದಲ್ಲಿಯೇ ಸ್ಯಾಂಡಲ್‌ವುಡ್‌ನ‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅರವಿಂದ ಬೋಳಾರ್‌ ಅವರನ್ನು ಕೊಂಡಾಡಿದ್ದಾರೆ.

ಅಂದಹಾಗೆ, ಇತ್ತೀಚೆಗೆ ವಿದೇಶದಲ್ಲಿ ನಡೆದ ಪಟ್ಲ ಫೌಂಡೇಶನ್‌ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಭಾಗವಹಿಸಿದ್ದರು. ಇದರಲ್ಲಿ ಅರವಿಂದ ಬೋಳಾರ್‌ ಅವರು ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್‌ ಹಾಗೂ ಬೋಳಾರ್‌ ಇಬ್ಬರು ಸಿನೆಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ ಬೋಳಾರ್‌ ಅವರಿಗೆ ವಿದೇಶದಲ್ಲಿ ತುಳು ಅಭಿಮಾನಿಗಳು ನೀಡಿದ ಪ್ರೀತಿಯನ್ನು ಕಂಡ ಪುನೀತ್‌, ಅವರ ಡೈಲಾಗ್‌ ಹಾಗೂ ಹಾವಭಾವ ನೋಡಿ ಖುಷಿಯಾದರು.

ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಬೋಳಾರ್‌ ಅವರ ವಿಶೇಷತೆ ಬಗ್ಗೆ ತಿಳಿದ ಪುನೀತ್‌ ಅವರು ಬೋಳಾರ್‌ ಅವರನ್ನು ಭಾಷಣ ದಲ್ಲಿಯೂ ಶ್ಲಾಘಿಸಿದರು. ಅನಂತರ ಮಾತ ನಾಡಿದ ಅವರು, ನಮ್ಮ ಸಿನೆಮಾ ದಲ್ಲಿ ನೀವು ಅಭಿನ ಯಿ ಸಬೇಕು ಎಂದು ಆಫರ್‌ ಕೂಡ ಕೊಟ್ಟ ರು. ಇತ್ತೀಚೆಗೆ ಕನ್ನಡ ಸಿನೆಮಾ ದಲ್ಲಿ ಅಭಿನಯಿಸಲು ಬೆಂಗಳೂರಿಗೆ ತೆರಳಿದ್ದ ಬೋಳಾರ್‌ ಅವರಿಗೆ ಮತ್ತೆ ಪುನೀತ್‌ ಅವರು ಸಿಕ್ಕಿದ್ದರು.

ಆಗಲೂ ನಮ್ಮ ಸಿನೆಮಾದಲ್ಲಿ ನೀವು ಅಭಿನಯಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ. ಹೀಗಾಗಿ ಪುನೀತ್‌ ಅವರ ಜತೆಗೆ ಬೋಳಾರ್‌ ಕಾಂಬಿನೇಶನ್‌ ಕೆಲವೇ ದಿನದಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ