ಕುಡ್ಲದ ‘ಲುಂಗಿ’ಯ ಮೇಲೆ ಸ್ಯಾಂಡಲ್ ವುಡ್ ಕಣ್ಣು!

Team Udayavani, Sep 12, 2019, 5:00 AM IST

ಪ್ರಭುದೇವ್‌ ಜತೆಗೆ ಮಹೇಂದ್ರ ಸಿಂಗ್‌ ಧೋನಿ ಅವರ ಲುಂಗಿ ಡ್ಯಾನ್ಸ್‌ ಜಾಹೀರಾತು ನೀವು ನೋಡಿರಬಹುದು. ಹಳ್ಳಿಯಿಂದ ದಿಲ್ಲಿಯವರೆಗೆ ಫೇಮಸ್‌ ಆದ ಬಗೆ ಬಗೆಯ ಲುಂಗಿ ಡ್ಯಾನ್ಸ್‌ ಬಗ್ಗೆಯೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಕೇರಳದ ಹುಡುಗಿಯರ ಲುಂಗಿ ಡ್ಯಾನ್ಸ್‌/ ಜಿಮ್ಕಿ ಕಮಾಲ್ ಸ್ಟೆಪ್‌ ಸಾಮಾಜಿಕ ಜಾಲತಾಣಗಳ ಮೂಲಕ ತುಂಬಾನೆ ಫೇಮಸ್‌ ಆಗಿದೆ. ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ‘ಲುಂಗಿ ಡ್ಯಾನ್ಸ್‌’ ಹಾಡು ಸಾಕಷ್ಟು ಖ್ಯಾತಿ ಪಡೆದಿದೆ.

ಇಂತಹುದೇ ಒಂದು ಲುಂಗಿಯ ಕಥೆಯೊಂದಿಗೆ ಕುಡ್ಲದ ಸಿನೆಮಾ ಟೀಮ್‌ ಸ್ಯಾಂಡಲ್ವುಡ್‌ನ‌ಲ್ಲಿ ಕಮಾಲ್ ಮಾಡಲು ರೆಡಿಯಾಗಿದೆ. ಪಕ್ಕಾ ಕುಡ್ಲದವರೇ ಅಭಿನಯಿಸಿದ ಹಾಗೂ ಕುಡ್ಲದಲ್ಲಿಯೇ ಶೂಟಿಂಗ್‌ ಆಗಿರುವ ವಿಭಿನ್ನ ಶೈಲಿಯ ‘ಲುಂಗಿ’ ಇದು. ವಿಭಿನ್ನ ಸಿನೆಮಾ ನೀಡಿದ ರಕ್ಷಿತ್‌ ಶೆಟ್ಟಿ ಅವರೇ ಲುಂಗಿ ಸಿನೆಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಸ್ಯಾಂಡಲ್ವುಡ್‌ಗೆ ಇದೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿನೆಮಾ ಎಂದು ಅವರೇ ಕೊಂಡಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಟ್ರೇಲರ್‌ ಸಾಕಷ್ಟು ಸದ್ದು ಮಾಡಿದೆ.

ತುಳುವಿನಲ್ಲಿ ಬರ್ಸ, ಅರೆ ಮರ್ಲೆರ್‌ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ ಎ.ಮುಕೇಶ್‌ ಹೆಗ್ಡೆ ನಿರ್ಮಾಣದಲ್ಲಿ ಸಿನೆಮಾ ಸಿದ್ಧವಾಗಲಿದೆ. ಅರ್ಜುನ್‌ ಲೂವಿಸ್‌, ಅಕ್ಷಿತ್‌ ಶೆಟ್ಟಿ ನಿರ್ದೇ ಶನದ ‘ಲುಂಗಿ’ ಮೇಲೆ ಇದೀಗ ಸ್ಯಾಂಡಲ್ವುಡ್‌ ಕಣ್ಣುಬಿದ್ದಿದೆ. ನಿರ್ದೆಶಕರು-ನಿರ್ಮಾಪಕರು ಹೀಗೆ ಸಿನೆಮಾದ ಬಹುತೇಕ ಭಾಗ ಇಲ್ಲಿಂದಲೇ ಇರುವುದರಿಂದ ಇದು ಅಪ್ಪಟ ‘ಮಂಗಳೂರು ಲುಂಗಿ’ ಎನ್ನುವುದರಲ್ಲಿ ತಪ್ಪಿಲ್ಲ.

ಪ್ರಣವ್‌ ಹೆಗ್ಡೆ, ಅಹಲ್ಯಾ ಸುರೇಶ್‌, ರಾಧಿಕಾ ರಾವ್‌, ಪ್ರಕಾಶ್‌ ಕೆ.ತೂಮಿನಾಡ್‌, ವಿ.ಜೆ.ವಿನಿತ್‌, ಕಾರ್ತಿಕ್‌ ವರದರಾಜ್‌, ದೀಪಕ್‌ ರೈ ಪಾಣಾಜೆ, ರೂಪಾ ವರ್ಕಾಡಿ ಸೇರಿದಂತೆ ಕುಡ್ಲದ ಕಲಾವಿದರ ತಂಡ ಸಿನೆಮಾದಲ್ಲಿದೆ. ಮಲಯಾಳಂನ ರಿಜೋ ಡಿ.ಜಾನ್‌ ಕೆಮರಾದಲ್ಲಿ ಕೈಜೋಡಿಸಿದ್ದು, ಪ್ರಸಾದ್‌ ಕೆ. ಶೆಟ್ಟಿ ಸಂಗೀತ ಒದಗಿಸಲಿದ್ದಾರೆ. ಮುಂದಿನ ತಿಂಗಳು 11ರಂದು ಸಿನೆಮಾ ರಾಜ್ಯಾದ್ಯಂತ ತೆರೆಕಾಣಲಿದೆ. ಲುಂಗಿ ಬಗ್ಗೆ ಯುವ ಜನರಿಗೆ ಅರಿವು ಮೂಡಿಸುವ, ಪ್ರೀತಿ, ಕಾಮಿಡಿ ವಿಷಯಗಳನ್ನು ಬಗಲಲ್ಲಿಟ್ಟು ಲುಂಗಿ ಉಡಿಸಲಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ