ಶಾಲಾ ಕಾಲೇಜುಗಳಲ್ಲಿ ಸೇವಾಧಾರಿತ ಶಿಕ್ಷಣ ಅಗತ್ಯ

Team Udayavani, Aug 1, 2019, 5:00 AM IST

ಭಾರತದ ಎರಡು ಆದರ್ಶಗಳೆಂದರೆ ಅದು ತ್ಯಾಗ ಮತ್ತು ಸೇವೆ. ಏಕೆಂದರೆ ಈ ಎರಡೂ ಮಹತ್ವಪೂರ್ಣ ಸಂಗತಿಗಳು ಭಾರತೀಯರ ಮನಸ್ಥಿತಿ ಯಲ್ಲಿ ನೆಲೆಸಿದೆ. ಇತ್ತೀಚಿನ ದಿನಗಳಲ್ಲಿ ಈ ಆದರ್ಶಗಳಿಗೆ ನಾಗರಿಕರಾಗಿ ನಮ್ಮ ಕೊಡುಗೆ ಕಡಿಮೆ ಯಾಗುತ್ತಿದೆಯೋ ಏನೋ ಎಂದು ಭಾಸವಾಗುತ್ತಿದೆ. ಇದಕ್ಕೆ ಕಾರಣ ಯಾವುದೇ ದೇಶದ ಮುಂದಿನ ಭವಿಷ್ಯವೆಂದು ಕರೆಯಲ್ಪಡುವ ವಿದ್ಯಾರ್ಥಿಗಳ ಪಾತ್ರ ಈ ಆದರ್ಶಗಳನ್ನು ಎಷ್ಟರ ಮಟ್ಟಿಗೆ ಮೈಗೂಡಿಸಿ ಕೊಂಡಿದ್ದಾರೆ ಎನ್ನುವುದು.

ಭಾರತದಲ್ಲಿ ಬದಲಾಗುತ್ತಿರುವ ಶಿಕ್ಷಣ ಪದ್ಧತಿ, ಹೆಚ್ಚಾಗುತ್ತಿರುವ ಆಕರ್ಷಣೆಗಳು,ವಿದ್ಯಾರ್ಥಿಗಳಿಗೆ ದೊರಕಬೇಕಾದ ಮೌಲ್ಯಯುತ ಶಿಕ್ಷಣದ ಕೊರತೆ, ಸಮಾಜಕ್ಕೆ ತಾನು ಕೊಡಬೇಕಾದ ಸೇವೆಗಳೇನು ಎಂಬ ಅರಿವಿಲ್ಲದೇ ಇರುವುದು, ರಾಷ್ಟ್ರದ ನಾಗರಿಕನಾಗಿ ತನ್ನ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳದಿರುವುದು ಎಂಬಿತ್ಯಾದಿ ಕಾರಣದಿಂದಾಗಿ ಸೇವೆಯ ಅಥವಾ ಸಾಮಾಜಿಕ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಮತ್ತು ಈ ಕ್ಷೇತ್ರಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ.

ಹೆಚ್ಚಿನ ವಿದ್ಯಾರ್ಥಿಗಳ ಮನೋಭಾವ ಆಟ, ಪಾಠ, ಊಟಗಳಿಗೆ ಸೀಮಿತವಾಗಿದ್ದು, ಈ ರಾಷ್ಟ್ರದ ಜಟಿಲ ಸಮಸ್ಯೆಗಳಿಗೂ ಪರಿಹಾರ ನೀಡಬಹುದಾದ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ, ಸುಂದರ ಸಮಾಜದ ನಿರ್ಮಾತೃಗಳಾಗುವ ಸಾಮರ್ಥ್ಯ ಮತ್ತು ಅವಕಾಶ ನಮಗಿದೆ ಎನ್ನುವುದರ ಕುರಿತು ಆಲೋಚಿಸುವ ಕಡಿಮೆಯಾಗಿದೆ.

ಶಾಲಾ ಕಾಲೇಜುಗಳಲ್ಲಿ ಸಮಾಜ ಸೇವಾ ಸಂಘಟನೆಗಳು ಹಲವಾರಿದೆ. ಉದಾಹರಣೆಗೆ ಎನ್ನೆಸ್ಸೆಸ್‌, ಎನ್‌.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್‌, ರೋವರ್-ರೇಂಜರ್, ನೇಚರ್‌ ಕ್ಲಬ್‌, ರೆಡ್‌ಕ್ರಾಸ್‌ಇತ್ಯಾದಿ. ಈ ಸಂಘಟನೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ, ಕಾಲೇಜುಗಳ ವತಿಯಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿ ಸುವ ಅವಕಾಶಗಳು ಇರುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಈ ಚಟುವಟಿಕೆಗಳಲ್ಲಿ ಅವರು ಮಾತ್ರ ಭಾಗವಹಿಸಬೇಕು ಎಂಬ ಮನೋಭಾವ ಬೆಳೆಯುತ್ತದೆ.

ಸ್ವಚ್ಛಭಾರತ, ಸಾಕ್ಷರತಾ ಭಾರತ, ಯೋಗ, ಆರೋಗ್ಯ, ಜೀವಜಲ, ರಕ್ತದಾನ, ಮತದಾನ, ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಎಚ್ಚರಿಕೆ, ಡ್ರಗ್ಸ್‌ ಸೇವನೆಯ ದುರಂತ ಮುಂತಾದ ಕಲ್ಪನೆಗಳಬಗ್ಗೆ ಮಾಹಿತಿ ನೀಡುವುದರ ಮೂಲಕ ಹಲವು ಶಾಲಾ-ಕಾಲೇಜುಗಳು ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗವಹಿಸಿದರೂ ನಿಗದಿತ ಸಮಾಜಸೇವೆಗೆ ಸೀಮಿತವಾದಂತಿದೆ. ಭಜನಾ ಮಂದಿರಗಳು, ವಿವಿಧ ಸಂಘಟನೆಗಳು, ಯುವ ಸಂಘಟನೆಗಳು ಮನೆ ಮನೆ ಸಂಪರ್ಕ, ದೇವಾಲಯಗಳ ಸ್ವಚ್ಛತೆ, ರಸ್ತೆಗುಂಡಿ ಮುಚ್ಚುವಿಕೆ, ಕಲ್ಯಾಣಿಗಳ ಹೂಳೆತ್ತುವಿಕೆ, ಶೈಕ್ಷಣಿಕವಾಗಿ ಜಾಗೃತಿ ಕಾರ್ಯಕ್ರಮಗಳು ಮುಂತಾದವುಗಳನ್ನು ಮಾಡಿದರೂ ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಕಡಿಮೆ.

ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಸಂಖ್ಯೆ ಹೆಚ್ಚಾಗಬೇಕಿದ್ದರೆ ಅನೇಕ ಬದಲಾವಣೆಗಳು ವಿದ್ಯಾಸಂಸ್ಥೆಗಳ ವ್ಯವಸ್ಥೆಯಲ್ಲಾ ಗಬೇಕು. ಮೊಟ್ಟಮೊದಲಿಗೆ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ನಿಜಾರ್ಥವನ್ನು ಕಲಿಸಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರೇರಣೆ ಸಿಗುವಂತಾಗಬೇಕು. ನಿನ್ನ ಕನಸಿನ ಗ್ರಾಮ/ರಾಷ್ಟ್ರ ಹೇಗಿರಬೇಕು ಅನ್ನುವುದನ್ನು ಕೇಳುವ ಬದಲು, ನಿನ್ನ ಗ್ರಾಮ/ರಾಷ್ಟ್ರ ನೀನು ಕನಸು ಕಂಡಂತೆ ಇರುವುದಕ್ಕೆ ನಿನ್ನ ಕೊಡುಗೆ ಏನು? ಎನ್ನುವುದನ್ನು ಕೇಳುವಂತಾಗಬೇಕು.

ಸಾಮಾಜಿಕ ಕಾರ್ಯಗಳು ಪಠ್ಯದ ಭಾಗವಾಗಬೇಕು. ಮನೆಯಲ್ಲಿಯೂ ಬದಲಾವಣೆ ಆದಾಗ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಾಗಬಹುದು. ಆಕರ್ಷಣೆಗೆ ಒಳಗಾಗುವ ಸಾಮಾಜಿಕ ಜಾಲತಾಣಗಳನ್ನೂ ಸಹ ಸಾಮಾಜಿಕ ಕಾರ್ಯಗಳಿಗಾಗಿ ಬಳಸುವಂತೆ ಪ್ರೇರಣೆ ದೊರೆತಾಗ ವಿದ್ಯಾರ್ಥಿಗಳ ಭಾಗವಹಿಸುವಿಕೆ ಪ್ರಾಮುಖ್ಯವನ್ನು ಪಡೆಯುತ್ತದೆ.

•ಅರುಣ್‌ ಕಿರಿಮಂಜೇಶ್ವರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ