ಸೆಟ್ಟೇರುತ್ತಿದೆ “ವೋಡ್ತಾಂತ್ಲೆ ಫುಲ್‌’ ಕೊಂಕಣಿ ಸಿನೆಮಾ

Team Udayavani, Feb 13, 2020, 7:11 AM IST

ತುಳು ಸಿನೆಮಾ ಇಂಡಸ್ಟ್ರಿಯ ರೀತಿಯಲ್ಲಿಯೇ ಕೊಂಕಣಿಯಲ್ಲಿಯೂ ಹಲವು ಸಿನೆಮಾಗಳು ತೆರೆ ಮೇಲೆ ಬರುತ್ತಿವೆ. ಕೊಂಕಣಿ ಭಾಷಿಗರು ಅಧಿಕವಿರುವ ಕರಾವಳಿಯಲ್ಲಿ ಈ ಸಿನೆಮಾಗಳಿಗೆ ವಿಶೇಷ ಒಲವು ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದೆ.

ಇದೀಗ ಕೊಂಕಣಿಯಲ್ಲಿ ಮತ್ತೂಂದು ಸಿನೆಮಾ ಸೆಟ್ಟೇರುತ್ತಿದೆ. ಬರೆಟ್ಟೊ ಪ್ರೊಡಕ್ಷನ್‌ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಕೊಂಕಣಿ ಸಿನೆಮಾದ ಹೆಸರು “ವೋಡ್ತಾಂತ್ಲೆ ಫುಲ್‌’. ಮೆಲ್ವಿನ್‌ ಎಲ್ಪೆಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ವಿಶೇಷವೆಂದರೆ, ಅವರ ನಿರ್ದೇಶನದ 3ನೇ ಸಿನೆಮಾ ಇದು. ಸುನಿಲ್‌ ಬರೆಟ್ಟೊ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ.

ಇದರ ಸಿನೆಮಾಟೋಗ್ರಫಿ ವಿಜಯ್‌ ಎಸ್‌. ಮತ್ತು ಸಂಕಲನ ರಘುನಾಥ್‌ ಅವರದ್ದು. ಸಂಗೀತ ನಿರ್ದೇಶನವನ್ನು ಡೊಲ್ವಿನ್‌ ಕೊಳಲಗಿರಿ ಮಾಡಿದ್ದು, ಸಾಹಿತ್ಯ ಅರ್ಜುನ್‌ ಲೂಯಿಸ್‌ ಅವರದ್ದು.ಚಿತ್ರದಲ್ಲಿ ಲಿಷಾ,ಆಸ್ಕರ್‌, ಸುನಿತಾ, ಸ್ಟಾನಿ ಅಲ್ವಾರಿಸ್‌, ಜೀವನ್‌ ವಾಸ್‌,ನೊರ್ಬರ್ಟ್‌ ಜೋನ್‌ ನಟಿಸಿದ್ದಾರೆ.

ನೀರುಮಾರ್ಗ,ವಾಮಂಜೂರು,ಮಂಗಳೂರು,ಕೆಲರಾಯ್‌ ಮತ್ತು ಬೆಂಗಳೂರಿನಲ್ಲಿ ಸಿನೆಮಾದ ಒಂದು ಹಂತದ ಶೂಟಿಂಗ್‌ ಮುಗಿದಿದೆ.ಕೆಲವೇ ದಿನಗಳಲ್ಲಿ ಹಾಡಿನ ದೃಶ್ಯ ಚಿತ್ರೀಕರಣ ನಡೆಯಲಿದೆ.ಎಪ್ರಿಲ್‌ನಲ್ಲಿ ಸಿನೆಮಾ ಬಿಡುಗಡೆಯ ನಿರೀಕ್ಷೆಯಲ್ಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ಕಡೆ ಶಾಂತವಾಗಿ ಹರಿಯುವ ನದಿ, ಇನ್ನೊಂದೆಡೆ ಸಮುದ್ರ. ನಡುವೆ ತೆಂಗಿನ ತೋಟದೊಳಗೆ ಮನೆಗಳ ಸಾಲು. ಅದರ ಮಧ್ಯದಲ್ಲಿ ಕಾಂಕ್ರೀಟ್‌ ರೋಡ್‌. ಇದು ಉಡುಪಿಯ ಕೋಡಿಬೇಂಗ್ರೆ...

  • ಕೊರೊನಾ ಕಪಿಮುಷ್ಟಿಯಿಂದಾಗಿ ಜಗತ್ತು ತಲ್ಲಣಗೊಂಡಿದೆ. ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ಬೇರೆ ಬೇರೆ ಉದ್ಯಮದ ಮೇಲೆ ಆತಂಕದ ಕರಿಛಾಯೆ ಮೂಡಿದೆ....

  • ದಕ್ಷಿಣ ಭಾರತದಲ್ಲಿ ದೋಸೆಗಳು ಹೆಚ್ಚು ಫೇಮಸ್‌. ಸಾದಾ ದೋಸೆ, ನೀರ್‌ದೋಸೆಯಿಂದ ಹಿಡಿದು ಸ್ಪೆಷಲ್‌ ಮಸಾಲಾ ದೋಸೆವರೆಗೆ ಬಗೆಬಗೆಯ ವೆರೈಟಿ ದೋಸೆಗಳನ್ನು ಇಲ್ಲಿ...

  •   ಅತ್ಯುತ್ತಮ ಏಷಿಯನ್‌ ಚಲನಚಿತ್ರ ಪ್ರಶಸ್ತಿ ಪಡೆದ ತುಳುವಿನ "ಪಿಂಗಾರ' ಈಗ ರಿಲೀಸ್‌ಗೆ ಅಣಿಯಾಗಿದೆ. ಸಿನೆಮಾ ಬಿಡುಗಡೆಗೂ ಮುನ್ನವೇ ಪ್ರಶಸ್ತಿಯ ಮೂಲಕ ಗಮನಸೆಳೆದಿರುವುದು...

  • ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿದೆ. ಪೊನ್ಮುಡಿ ಪ್ರವಾಸಿ ತಾಣವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು...

ಹೊಸ ಸೇರ್ಪಡೆ