ಹಾರ್ಡ್‌ಡಿಸ್ಕ್ ಬಳಸಿ ಡೇಟಾ ಸುರಕ್ಷಿತವಾಗಿರಿಸಿ


Team Udayavani, Feb 28, 2017, 5:15 PM IST

Hard-Disc-28-2.jpg

ಕಂಪ್ಯೂಟರ್‌ಗಳಲ್ಲಿ ಸ್ಪೇಸ್‌ ಕಡಿಮೆಯಾದಂತೆ ಹ್ಯಾಂಗ್‌ ಆಗೋದು ಸಾಮಾನ್ಯ. ಈ ನಡುವೆ ಕೆಲವರಿಗೆ ಹೆಚ್ಚು ಡೇಟಾಗಳನ್ನು ಸೇವ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದ್ದರೆ, ಇನ್ನು ಕೆಲವರಿಗೆ ಹೆಚ್ಚೆಚ್ಚು ಮೂವೀಸ್‌, ಗೇಮ್ಸ್‌  ಮುಂತಾದವುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಕಂಪ್ಯೂಟರ್‌ನಲ್ಲಿ ಜಾಗವೇ ಇಲ್ಲದ ಮೇಲೆ ಮತ್ತೆಲ್ಲಿ ಸಂಗ್ರಹಿಸುವುದು ಎನ್ನುವ ಪ್ರಶ್ನೆಯೆದುರಾದಾಗ ಯೋಚನೆ ಬರುವುದು ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ ಗಳ ಬಗ್ಗೆ. 

ಪ್ರಸ್ತುತ, ಟೆರಾಬೈಟ್‌ನಷ್ಟು ಡೇಟಾಗಳನ್ನು ಸಂಗ್ರಹಿಸಬಹುದಾದ ಪೆನ್‌ ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ, ಕೆಲವೊಮ್ಮೆ ಕೆಲಸದ ಒತ್ತಡ, ನಿರ್ಲಕ್ಷ್ಯದಿಂದಾಗಿ ಇವುಗಳು ಬಿಸಾಡಿ ಹೋಗಬಹುದಾದ ಸಾಧ್ಯತೆಗಳೂ ಇವೆ. ಒಂದು ವೇಳೆ ಅತೀ ಪ್ರಾಮುಖ್ಯವಾಗಿರುವ ಮಾಹಿತಿಗಳನ್ನು ಹೊಂದಿರುವ ಪೆನ್‌ಡ್ರೈವ್‌ ಕೈಯಿಂದ ಮಿಸ್‌ ಆದರೆ ತುಂಬಾ ಪರಿತಪಿಸಬೇಕಾಗುತ್ತದೆ.  ಹೀಗಾಗಿ  ಕೈಯಲ್ಲಿ ಹೆಚ್ಚು ಸೇಫ್‌ ಆಗಿ ಇರಿಸಿಕೊಳ್ಳಲಾಗುವ ಎಕ್ಸ್‌ಟರ್ನಲ್‌  ಹಾರ್ಡ್‌ ಡಿಸ್ಕ್ ಗಳ ಬಳಕೆ ಮಾಡಿದಲ್ಲಿ  ಅಗತ್ಯ ಹಾಗೂ ಪ್ರಾಮುಖ್ಯ ಡೇಟಾಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಹಾಗೂ ಗಾತ್ರದಲ್ಲೂ ಪೆನ್‌ಡ್ರೈವ್‌ಗಳಿಗಿಂತ ದೊಡ್ಡದಾಗಿರುವುದರಿಂದ ಹೆಚ್ಚು ಏಕಾಗ್ರತೆ ವಹಿಸುವಂತೆ ಮಾಡುತ್ತದೆ. ಸೀಮಿತ ಪ್ರಮಾಣದಲ್ಲಿ ಅಗತ್ಯ ಮಾಹಿತಿಗಳನ್ನು ಗೂಗಲ್‌ ಡ್ರೈವ್‌ನಲ್ಲೂ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದ್ದರೂ, ಹೆಚ್ಚು ದಾಖಲೆಗಳ ಸಂಗ್ರಹಕ್ಕೆ ಎಕ್ಸಟರ್ನಲ್‌ ಹಾರ್ಡ್‌ ಡಿಸ್ಕ್ ಉತ್ತಮ.

ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ ಬಳಕೆ
ಕಂಪ್ಯೂಟರ್‌ನಲ್ಲಿರುವ ಹಾರ್ಡ್‌ ಡಿಸ್ಕ್ ನಂತೆ ಕಾರ್ಯನಿರ್ವಹಿಸುವ ಎಕ್ಸ್‌ಟರ್ನಲ್‌  ಹಾರ್ಡ್‌ ಡಿಸ್ಕ್ ನೋಡಲು ಹಾಗೂ ಗಾತ್ರದಲ್ಲಿ ಭಿನ್ನವಾಗಿರುತ್ತದೆ. ಇದನ್ನು ಕಂಪ್ಯೂಟರ್‌ಗೆ ಸಾಟಾ, ಯುಎಸ್‌ಬಿ ಅಥವಾ ಫೈರ್‌ ವೈರ್‌ ಮೂಲಕ ಸಂಪರ್ಕಿಸಬಹುದು. ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್‌ ಬಳಕೆ ಮಾಡುವಾಗ ಅಥವಾ ಇತರರ ಪೆನ್‌ಡ್ರೈವ್‌ ಉಪಯೋಗಿಸುವಾಗ ಆ್ಯಂಟಿ ವೈರಸ್‌ ಬಾಧಿಸುವ ಸಾಧ್ಯತೆ ಹೆಚ್ಚಾಗಿದ್ದು, ವೈರಸ್‌ ಅಟ್ಯಾಕ್‌ ಮಾಡಿದಲ್ಲಿ ಹಾರ್ಡ್‌ಡಿಸ್ಕ್ ಕೆಲಸ ಮಾಡದಂತಾಗಿ ಸಂಗ್ರಹಿಸಲಾದ ಮಾಹಿತಿಗಳೂ ಸಿಗದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರಮುಖ ಮಾಹಿತಿಗಳನ್ನು ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ ನಲ್ಲಿ ಸಂಗ್ರಹಿಸಿಟ್ಟುಕೊಂಡಲ್ಲಿ ಅದು ಎಂದೆಂದಿಗೂ ಸುರಕ್ಷಿತ.

ಹಿಂದೆ ಸಿನೆಮಾಗಳನ್ನು ಸಿಡಿ ಅಥವಾ ಡಿವಿಡಿ ಪ್ಲೇಯರ್‌ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಅವುಗಳನ್ನು ಬರ್ನ್ ಮಾಡಬೇಕಾದರೇ ಸಾಕಷ್ಟು ಸಮಯಗಳನ್ನೂ ತೆಗೆದುಕೊಳ್ಳುತ್ತಿತ್ತು. ಆದರೆ, ಇಂದು ಗಿಗಾಬೈಟ್‌, ಟೆರಾಬೈಟ್‌ಗಳಷ್ಟು ಇರುವ ಯಾವುದೇ ಕಂಪೆನಿ ಮಾಹಿತಿ ಇರಬಹುದು ಅಥವಾ ನೂರಾರು ಸಿನೆಮಾ, ಸಾವಿರಾರು ಎಂಪಿ3, ಫೋಟೊ, ಗೇಮ್ಸ್‌ಗಳನ್ನು ಕೆಲವೇ ಸಮಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಫೈರ್‌ ವೈರ್‌ ಬಳಕೆಯಿಂದ ಹೆಚ್ಚು ವೇಗದಲ್ಲಿ ದಾಖಲೆಗಳನ್ನು ಹಾರ್ಡ್‌ ಡಿಸ್ಕ್ ನಲ್ಲಿ ದಾಖಲಿಸಿಕೊಳ್ಳಬಹುದಾಗಿದೆ. ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ ಖರೀದಿಯ ಮುನ್ನ ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ಗಳ ನಕಲಿ ತಯಾರಿಸುವುದು ಉಳಿದಕ್ಕೆ ಹೋಲಿಸಿದಲ್ಲಿ ಕೊಂಚ ಕಡಿಮೆ. ತೊಶಿಬಾ, ಡಬ್ಲ್ಯೂಡಿ, ಟ್ರಾನ್ಸೆಂಡ್‌, ಸೀ ಗೇಟ್‌ನ ಉತ್ತಮ ಬ್ರ್ಯಾಂಡ್‌ಗಳತ್ತ ಗ್ರಾಹಕರು ಮುಖ ಮಾಡಿದರೆ ಉತ್ತಮ.
 
ಎಕ್ಸ್‌ಟರ್ನಲ್‌ ಹಾರ್ಡ್‌ ಡಿಸ್ಕ್ನ ಬಾರ್‌ ಕೋಡ್‌ ಹಾಗೂ ಸೀರಿಯಲ್‌ ನಂಬರ್‌ ಅನ್ನು ಪರಿಶೀಲಿಸಿದಾಗ ನೈಜ ಕಂಪೆನಿಯದ್ದೇ ಎನ್ನುವ ಮಾಹಿತಿ ಪಡೆಯಬಹುದಾಗಿದೆ. ಕೆಲವೆಡೆ ನಕಲಿ ಪವರ್‌ ಬ್ಯಾಂಕ್‌ನಂತೆ ಎಕ್ಸ್‌ಟರ್ನಲ್‌  ಹಾರ್ಡ್‌ ಡಿಸ್ಕ್ ಮಾರಾಟ ಮಾಡುವವರೂ ಇದ್ದಾರೆ. ಇವುಗಳ ಮೇಲೆ ಯಾವುದೇ ಕಂಪೆನಿಯ ಸೀಲ್‌ ಸರಿಯಾಗಿರುವುದಿಲ್ಲ ಹಾಗೂ ವ್ಯಾರಂಟಿಯೂ ನೀಡಲಾಗುವುದಿಲ್ಲ. ತೀರಾ ಕಡಿಮೆ ಬೆಲೆಗೆ ಲಭ್ಯವಿವೆ ಎಂದು ಖರೀದಿಸಿದರೆ ಮೋಸ ಹೋಗೋದು ಗ್ಯಾರಂಟಿ. 

ಅಲ್ಲದೇ, ಹಾರ್ಡ್‌ ಡಿಸ್ಕ್ಗಳನ್ನು ಇರಿಸಲಾಗುವ ಪ್ಯಾಕ್‌ ಕವರ್‌ಗಳಿಂದಲೂ ನೈಜವೋ ಅಥವಾ ನಕಲಿಯೋ ಎಂದು ತಿಳಿಯಬಹುದು. ಪ್ರಸ್ತುತ, ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಎಕ್ಸ್‌ಟರ್ನಲ್‌  ಹಾರ್ಡ್‌ ಡಿಸ್ಕ್ಗಳು ಲಭ್ಯವಿದ್ದು, ಬಳಕೆದಾರರು ತಮಗೆ ಅಗತ್ಯವಿರುವ ಸ್ಪೇಸ್‌ಗಿಂತ ದ್ವಿಗುಣ ಸ್ಪೇಸ್‌ ಹೊಂದಿರುವಂತದ್ದು ಖರೀದಿಸಿದಲ್ಲಿ  ಭವಿಷ್ಯದಲ್ಲೂ  ಇದು ಸಹಾಯಕವಾಗಲಿದೆ ಎನ್ನುತ್ತಾರೆ ಹಾರ್ಡ್‌ವೇರ್‌ ತಜ್ಞ ಲಕ್ಷ್ಮೀಶ್‌.

– ಭರತ್‌ರಾಜ್‌ ಕಲ್ಲಡ್ಕ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.