ಮಹಿಳಾ ಹಾಕಿ ತಂಡದ ದಿಗ್ವಿಜಯ

ಮಹಿಳಾ ಹಾಕಿ ತಂಡದ ದಿಗ್ವಿಜಯ

Team Udayavani, Jul 4, 2019, 5:00 AM IST

ಭಾರತ ಮಹಿಳಾ ಹಾಕಿ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕೂಟಗಳಲ್ಲಿ ಪುರುಷರ ತಂಡದಷ್ಟು ಸಾಧನೆಯನ್ನು ಭಾರತ ಮಹಿಳಾ ತಂಡ ಮಾಡಿಲ್ಲವಾದರೂ ಎಫ್ಐಎಚ್ ಮಹಿಳಾ ಹಾಕಿ ಸೀರೀಸ್‌ನಲ್ಲಿ ಪ್ರಶಸ್ತಿ ಗೆದ್ದ ಮೇಲೆ ರಾಣಿ ರಾಂಪಾಲ್ ಪಡೆ ನಾವು ಯಾರಿಗೂ ಕಮ್ಮಿ ಇಲ್ಲ’ ಎನ್ನುವುದನ್ನು ಸಾರಿದೆ.

ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತ ಮಹಿಳಾ ತಂಡ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಗುರ್ಜಿತ್‌ ಕೌರ್‌ ಅವರಂತಹ ತಾರಾ ಆಟಗಾರರು, ರಾಣಿ ರಾಂಪಾಲ್ ಅವರಂತಹ ಶ್ರೇಷ್ಠ ನಾಯಕಿಯ ಬಲ ತಂಡಕ್ಕಿದೆ. ಇನ್ನಷ್ಟು ತರಬೇತಿ, ಕೋಚ್, ಕಠಿಣ ಶ್ರಮವಹಿಸಿದ್ದೇ ಆದರೆ ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತ ಸ್ವರ್ಣ ನಗು ಚೆಲ್ಲುವುದರಲ್ಲಿ ಅನುಮಾನವೇ ಇಲ್ಲ.

ಭಾರತ ಸಂಭ್ರಮ: ಜಪಾನ್‌ ಪ್ರವಾಸಕ್ಕೂ ಮೊದಲು ಎಫ್ಐಎಚ್ ಮಹಿಳಾ ಹಾಕಿ ಸೀರೀಸ್‌ ಫೈನಲ್ನಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರು ಊಹಿಸಿರಲಿಕ್ಕಿಲ್ಲ. ಎಲ್ಲ ಸಂದೇಹಗಳಿಗೂ ಭಾರತ ಆಟಗಾರ್ತಿಯರು ಉತ್ತರ ನೀಡಿದರು. ಎಲ್ಲ ಸವಾಲನ್ನು ಮೆಟ್ಟಿನಿಂತು ಕೂಟದ ಅಂತಿಮ ಹಂತಕ್ಕೆ ಪ್ರವೇಶಿಸಿಯೇ ಬಿಟ್ಟರು. ಆದರೆ ಫೈನಲ್ ಗೆಲ್ಲುವುದು ರಾಣಿ ರಾಂಪಾಲ್ ಪಡೆಗೆ ಅಷ್ಟೊಂದು ಸುಲಭದ ವಿಷಯವಾಗಿರಲಿಲ್ಲ. ಏಕೆಂದರೆ ಎದುರಾಳಿ ಆತಿಥೇಯ ಜಪಾನ್‌ ತಂಡ. ತವರಲ್ಲಿ ಆ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಗುರ್ಜಿತ್‌ ಕೌರ್‌ ಬುಲೆಟ್ ವೇಗದಲ್ಲಿ ಸಿಡಿಸಿದ ಎರಡು ಗೋಲಿನ ನೆರವಿನಿಂದ ಕೆಚ್ಚೆದೆಯ ಪ್ರದರ್ಶನ ನೀಡಿದರು. ಭಾರತ ಕಪ್‌ ಗೆಲ್ಲುವುದರಲ್ಲಿ ಮುಂಚೂಣಿಯ ಪಾತ್ರವಹಿಸಿದರು. ರಾಣಿ ರಾಂಪಾಲ್ ಕೂಡ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಒಟ್ಟಿನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲ ಕಡೆಯಿಂದ ಭಾರತೀಯ ಆಟಗಾರ್ತಿಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂತು.

ಒಲಿಂಪಿಕ್ಸ್‌ ಗೆಲ್ಲುವ ಗುರಿ: ಭಾರತೀಯ ಆಟಗಾರ್ತಿಯರು ಎಫ್ಐಎಚ್ ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್ ಜಯಿಸುವ ಮೂಲಕ ಮುಂಬರುವ ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟೋಕಿಯೊ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು.

ಭಾರತ ಮಹಿಳಾ ತಂಡ ಇದುವರೆಗೆ ಒಟ್ಟು 2 ಸಲ ಒಲಿಂಪಿಕ್‌ನಲ್ಲಿ ಪಾಲ್ಗೊಂಡಿದೆ. 1980ರಲ್ಲಿ ಮೊದಲ ಬಾರಿಗೆ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾಗವಹಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆ ಬಳಿಕ 2016ರಲ್ಲಿ ಭಾರತ ರಿಯೋ ಒಲಿಂಪಿಕ್‌ನಲ್ಲಿ ಪಾಲ್ಗೊಂಡು 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸೂರಜ್‌ ಶೆಟ್ಟಿ ನಿರ್ದೇಶನ ಮತ್ತು ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ 'ಇಂಗ್ಲಿಷ್‌' ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ...

  • ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸ ಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ ಇಂತಹ...

  • ಬ್ರಹ್ಮಾವರ ಮೂವೀಸ್‌ ಸಂಸ್ಥೆ ನಿರ್ಮಾಣದ ತುಳು ಚಿತ್ರ 'ಕಟಪಾಡಿ ಕಟ್ಟಪ್ಪ' ಕೋಸ್ಟಲ್ವುಡ್‌ನ‌ಲ್ಲಿ ಈ ಬಾರಿ ಹೊಸ ದಾಖಲೆ ಮಾಡಿದೆ. ಮಾ.29 ರಂದು ದೇಶದಾದ್ಯಂತ 200 ಚಿತ್ರಮಂದಿರಗಳಲ್ಲಿ...

  • ಕೊಲೆ, ಅತ್ಯಾಚಾರದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ಆರೋಪಿ, ಅಪರಾಧಿಗಳಾಗಿ ಬಂಧಿತರಾಗುವವರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಅಪರಾಧ ಕೃತ್ಯಗಳಲ್ಲಿ...

  • ಬೆಂಗಳೂರಿನಲ್ಲಿ ನೆಲೆಸಿರುವ ಮಿತ್ರರು ದೇವರಗುಂಡಿ ಜಲಪಾತದ ಸೊಬಗನ್ನು ಸವಿಯಲು ಹೋಗೋಣ ಎಂದು ನನ್ನನ್ನು ಒತ್ತಾಯಿಸುತ್ತಲೇ ಇದ್ದರು. ನಾನು ಮಾತ್ರ, ಬೇಸಗೆಯಲ್ಲಿ...

ಹೊಸ ಸೇರ್ಪಡೆ