ಆಸ್ತಿ ಆಸೆಗಾಗಿ ಅರ್ಕಾಡಿ ಬರ್ಕೆಯಲ್ಲಿ “ಕುದ್ಕನ ಮದ್ಮೆ’!

Team Udayavani, Oct 10, 2019, 5:32 AM IST

“ತುಳು ನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ “ಅರ್ಕಾಡಿ ಬರ್ಕೆ’. ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈ ಮನಸ್ಸು. ಆದರೆ ಹಿರಿಯರ ವಿಲ್‌ ಪ್ರಕಾರ ಇವರೆಲ್ಲರೂ ಒಂದಾಗದೆ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕುವುದಿಲ್ಲ. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು ಬ್ರೋಕರುಗಳು-ಸಮಯ ಸಾಧಕರು. ಇವರೆಲ್ಲ ಸೇರಿ ಸೃಷ್ಟಿಸುವ ಅವಾಂತರಗಳೇ “ಕುದ್ಕನ ಮದ್ಮೆ’.

ಈ ಮಧ್ಯೆ “ಅಪರಿಚಿತನೊಬ್ಬ’ ಈ ಮನೆಗೆ ಸೇರಿಕೊಳ್ಳುತ್ತಾನೆ. ನಾಯಕಿಯ ಅಪಹರಣವಾಗುತ್ತದೆ. ಜೋತಿಷಿಯೊಬ್ಬರ ಸಲಹೆಯಂತೆ “ಮಳೆ ಮತ್ತು ಬಿಸಿಲು ಒಟ್ಟಾಗಿ ಬರುವಾಗ ಈ ಮನೆಯಲ್ಲಿ ಒಂದು ಮದುವೆ ನಡೆದರೆ ಸಮಸ್ಯೆ ಬಗೆಹರಿಯುವುದೆಂದು ತಿಳಿದು ಮದುವೆಗೆ ಸಿದ್ಧರಾಗುತ್ತಾರೆ. ಇದೇ “ಕುದ್ಕನ ಮದ್ಮೆ’.

ನಿರ್ದೇಶಕ ಎ.ವಿ ಜಯರಾಜ್‌ ಹೇಳುವ ಪ್ರಕಾರ ಇದೊಂದು ಸಂಪೂರ್ಣ ಕಾಮಿಡಿ-ಫ್ಯಾಮಿಲಿ ಓರಿಯೆಂಟೆಡ್‌ ಸಬೆಕ್ಸ್‌. ಕುಟುಂಬ ಸಮೇತ ನೋಡುವಂತಹ ಚಿತ್ರ. ತುಳುವರಿಗೆ ಬೇಕಾದ ಕಾಮಿಡಿ, ಫೈಟ್‌ ಹಾಡುಗಳು ಇವೆ. ಸುರತ್ಕಲ್‌, ಖಂಡಿಗೆ, ಬೀಚ್‌, ಪೊಳಲಿ, ತಣ್ಣೀರುಬಾವಿ ಸುತ್ತ ಮುತ್ತ ಚಿತ್ರೀಕರಣಗೊಂಡಿದೆ.

ಜಿಆರ್‌ಕೆ ನಿರ್ಮಾಣದ ಬಿಡುಗಡೆಯ ನಿರೀಕ್ಷೆಯಲ್ಲಿರುವ “ಕುದ್ಕನ ಮದ್ಮೆ ಸಿನೆಮಾದ ಆಡಿಯೋ ಸದ್ಯ ಸದ್ದು ಮಾಡುತ್ತಿದೆ. ಆಡಿಯೋ ರಿಲೀಸ್‌ ಲೇಡಿಹಿಲ್‌ನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ನಡೆದಿತ್ತು.

ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಅಂಬರ್‌ ಹಾಗೂ ನಾಯಕಿಯಾಗಿ ಶೀತಲ್‌ ನಾಯಕ್‌ ಅಭಿನಯಿಸಿದ್ದಾರೆ. ದೇವಿ ಪ್ರಕಾಶ್‌ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್‌ ರಾವ್‌ ಮತ್ತು ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್‌ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್‌ ಉಳ್ಳಾಲ್‌, ಸೂರಜ್‌ ಸಾಲ್ಯಾನ್‌, ಮೋಹನ್‌ ಕೊಪ್ಪಳ, ಚೇತನ್‌ ಕದ್ರಿ, ಸುಮತಿ ಹಂದೆ, ಉದಯ್‌ ಆಳ್ವ ಸುರತ್ಕಲ್‌, ಯಶವಂತ್‌ ಶೆಟ್ಟಿ ಕೃಷ್ಣಾಪುರ, ಸುನಿಲ್‌ ಪಡುಬಿದ್ರಿ, ಕೃಷ್ಣ ಸುರತ್ಕಲ್‌, ರವೀಶ್‌ ಜೋಗಿ, ಯೋಗೀಶ್‌, ಅರುಣ್‌ ಶೆಟ್ಟಿ, ಸುಮಿತ್ರಾ ರೈ, ಕಿಶೋರ್‌ ಡಿ. ಶೆಟ್ಟಿ ತಾರಾಗಣದಲ್ಲಿದ್ದಾರೆ.

ಚಿತ್ರದ ಕಥೆ-ಚಿತ್ರಕಥೆ: ಸುಧನ್‌ ಶ್ರೀಧರ್‌, ಛಾಯಾಚಿತ್ರಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್‌ ಆಚಾರ್ಯ ಕುಂಬ್ಳೆ, ನೃತ್ಯ: ಅಕುಲ್‌ ಮಾಸ್ಟರ್‌, ಸಾಹಸ: ಕೌರವ ವೆಂಕಟೇಶ್‌, ನಿರ್ದೇಶಕರು: ರಾಕೇಶ್‌, ನವೀನ್‌ ಶೆಟ್ಟಿ, ಅನಿರುದ್ಧ್ ಉಳ್ಳಾಲ್‌, ಕರುಣ್‌ ಶೆಟ್ಟಿ, ರೋಶನಿ, ಕಾವ್ಯ ಶರತ್‌, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್‌ ಉಳ್ಳಾಲ್‌, ನಿರ್ದೇಶನ ಎ.ವಿ. ಜಯರಾಜ್‌, ನಿರ್ಮಾಪಕರು: ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ.

-   ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ