ಜಾಗೆ ರಡ್ಡ್ ಎಕ್ರೆ.. ಬೈದೆರ್ ಲಪ್ಪೆರೆ..
Team Udayavani, Aug 8, 2019, 5:52 AM IST
ನವೀನ್ ಡಿ. ಪಡೀಲ್-ವಿಸ್ಮಯ ವಿನಾಯಕ್ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿತ್ತು. ಅದನ್ನು ಡೀಲ್ ಮಾಡುವ ಕಥಾನಕವೇ ‘ರಡ್ಡ್ ಎಕ್ರೆ’. ವಿಸ್ಮಯ ವಿನಾಯಕ್ ಚೊಚ್ಚಲ ನಿರ್ದೇಶನದ ಈ ಸಿನೆಮಾ ಬಗ್ಗೆ ಈಗ ಇಂತಹ ಒಂದೊಂದೇ ಕುತೂಹಲಗಳು ಇದೀಗ ಕೋಸ್ಟಲ್ವುಡ್ನಲ್ಲಿ ಶುರುವಾಗಿದೆ.
ಅಂದಹಾಗೆ ಸಿನೆಮಾದ ಶೂಟಿಂಗ್ ಎಲ್ಲಾ ಮುಗಿದಿದ್ದು, ಆ.12ಕ್ಕೆ ಆಡಿಯೋ ರಿಲೀಸ್ ಪುರಭವನದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ‘ಜಾಗೆ ರಡ್ಡ್ ಎಕ್ರೆ.. ಬೈದೆರ್ ಲಪ್ಪೆರೆ.. ಜಾಗೆದಕುಲು ಬನ್ನಗ ಮಾತ ಒತ್ತರೆ’ ಎಂಬ ಟೈಟಲ್ ಸಾಂಗ್ ಮೂಲಕ ಆರಂಭವಾಗಲಿರುವ ಈ ಸಿನೆಮಾ ಕುತೂಹಲ ಮೂಡಿಸಿದೆ. ‘ಡೆಂಗ್ಯೂ.. ಡೆಂಗ್ಯೂ’ ಎಂದು ಇತ್ತೀಚೆಗೆ ಹಾಡಿ ಮೋಡಿ ಮಾಡಿದ್ದ ವಿಸ್ಮಯ ವಿನಾಯಕ್ ರಡ್ಡ್ ಎಕ್ರೆಯ ಟೈಟಲ್ ಸಾಂಗ್ ಬರೆದಿದ್ದಾರೆ. ಶಶಿರಾಜ್ ರಾವ್ ಕಾವೂರು ಬರೆದಿರುವ ‘ಪಗೆಲ್ ಕರೀಂಡ್… ಮುಗಲ್ ಕಬೀಂಡ್..’ ಹಾಗೂ ‘ಇನಿ ದಾನೆ ಕುಸ್ಕೊಂದುಂಡು’ ಹಾಡುಗಳ ರಿಲೀಸ್ ಕೂಡ ಇದೇ ವೇಳೆ ನಡೆಯಲಿದೆ. ಇದೇ ಮೊದಲ ಬಾರಿಗೆ ಪೃಥ್ವಿ ಅಂಬರ್ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್ ಕೋಡಿಕಲ್ ಕೂಡ ಸ್ವರ ನೀಡಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ.
ಅರವಿಂದ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಹಲವು ಖ್ಯಾತನಾಮರು ಈ ಸಿನೆಮಾದಲ್ಲಿದ್ದಾರೆ.