“ಆಟಿಡೊಂಜಿ ದಿನ’ದ ಕುತೂಹಲ

Team Udayavani, Aug 22, 2019, 5:24 AM IST

ಆಟಿ ತಿಂಗಳು ಮೊನ್ನೆಯಷ್ಟೇ ಮುಗಿದಿದೆ. ಆಟಿಕೂಟಗಳೆಲ್ಲ ಮುಗಿದು ಈಗ ಸೋಣ ಬಂದಿದೆ. ಆದರೆ, ‘ಆಟಿಡೊಂಜಿ ದಿನ’ ಇನ್ನು ಸ್ವಲ್ಪ ದಿನದೊಳಗೆ ಮತ್ತೂಮ್ಮೆ ಬರಲಿದೆ. ಈ ಸಿನೆಮಾದ ಚಿತ್ರೀಕರಣವು ಚುರುಕಿನಿಂದ ನಡೆಯುತ್ತಿದ್ದ ಸಮಯದಲ್ಲಿ ನಿರ್ದೇಶಕ ಹಾರಿಸ್‌ ಕೊಣಾಜೆಕಲ್ಲು ಅವರು ಅಪಘಾತದಲ್ಲಿ ಮೃತರಾದರು. ಎಳೆಯ ಪ್ರಾಯದಲ್ಲಿ ನಿರ್ದೇಶಕನಾಗುವ ಉತ್ಸಾಹದಲ್ಲಿ ಅವರು ವಿರಾಮವಿಲ್ಲದೆ ದುಡಿಯುತ್ತಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ಅಂಥ ಒಂದು ಓಡಾಟದಲ್ಲಿರುವಾಗಲೇ ಅವರು ಪ್ರಯಾಣಿಸುತ್ತಿದ್ದ ಆಮ್ನಿ ಕಾರು ಮೂಡುಬಿದಿರೆ ಸಮೀಪ ಅಪಘಾತಕ್ಕೀಡಾಗಿ ಹಾರಿಸ್‌ ಕೊನೆಯುಸಿರೆಳೆದಿದ್ದರು.

ಇವರ ಸಾವಿನ ಸುದ್ದಿಯಿಂದಾಗಿ ಮುಂದೇನು? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಮೂಡಿತ್ತು. ಆ ಹೊತ್ತಿಗೆ ಆಟಿಡೊಂಜಿ ದಿನ ಸಿನೆಮಾದ ಶೇ.80ರಷ್ಟು ಶೂಟಿಂಗ್‌ ಮುಗಿದಿತ್ತು. ಬಳಿಕ ಇಡೀ ಚಿತ್ರತಂಡವೇ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಶೂಟಿಂಗ್‌ ಮಾಡಲು ನಿರ್ಧರಿಸಲಾಯಿತು.

ಬಳಿಕ ಚಿತ್ರತಂಡ ಶೂಟಿಂಗ್‌ ಮರು ಆರಂಭಿಸಲಾಗಿತ್ತು. ಎರಡು ಹಾಡು, ಮೂರು ಫೈಟ್ ದೃಶ್ಯಗಳ ಚಿತ್ರೀಕರಣ ಬಾಕಿಯಿತ್ತು. ಇತ್ತೀಚೆಗೆ ಸಿನೆಮಾದ ಎರಡನೇ ಹಂತದ ಶೂಟಿಂಗ್‌ ಪೂರ್ಣಗೊಳಿಸಿದೆ. ಆಕಾಶ್‌ ಹಾಸನ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಹಾಗೂ ಸಹನಿರ್ದೇಶಕರಾಗಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್, ಭೋಜರಾಜ ವಾಮಂಜೂರು, ಪೃಥ್ವಿ ಅಂಬರ್‌, ಸತೀಶ್‌ ಬಂದಲೆ, ನಿರೀಕ್ಷಾ ಶೆಟ್ಟಿ, ಸೂರಜ್‌ ಸಾಲ್ಯಾನ್‌, ಪೃಥ್ವಿರಾಜ್‌ ಮೂಡುಬಿದಿರೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಮಿಲಾಗ್ರಿಸ್‌ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಗ ಕಳೆದ cಎನ್‌.ಸಿ.ಸಿ. ಕ್ಯಾಂಪ್‌ಗ್ಳು ಜೀವನದಲ್ಲಿ ಮತ್ತೂಮ್ಮೆ ಬರಲು ಸಾಧ್ಯವೇ ಇಲ್ಲ ಎಂದು ನಾವೆಲ್ಲ...

  • ಕೋಸ್ಟಲ್‌ವುಡ್‌ನ‌ಲ್ಲಿ ಸದ್ದಿಲ್ಲದೆ ಶೂಟಿಂಗ್‌ ಆದ ಸಿನೆಮಾ "ಕಾರ್ನಿಕೊದ ಕಲ್ಲುರ್ಟಿ' ಸಿನೆಮಾ. ಫೀನಿಕ್ಸ್‌ ಫಿಲಂಸ್‌ ಲಾಂಛನದಡಿಯಲ್ಲಿ ಈ ಸಿನೆಮಾವು ತಯಾರಾಗಿದೆ....

  • ಹಿಂದಿ ಚಿತ್ರರಂಗದಲ್ಲಿ ದಾಖಲೆ ಬರೆದ "ಶೋಲೆ' ಸಿನೆಮಾದ "ಗಬ್ಬರ್‌ ಸಿಂಗ್‌' ಪಾತ್ರ ಎಲ್ಲರಿಗೂ ನೆನಪಿದೆ. ಆ ಹೆಸರು ಮುಂದಿನ ದಿನದಲ್ಲಿ ಬಹಳಷ್ಟು ಜನಪ್ರಿಯ ಕೂಡ ಆಗಿತ್ತು....

  • "ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...

  • ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್‌' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌,...

ಹೊಸ ಸೇರ್ಪಡೆ