ಕುಡ್ಲದಲ್ಲಿ ಆಯೆ ಏರ್‌?

Team Udayavani, Apr 25, 2019, 6:33 AM IST

ಆಕರ್ಷಕ ಟೈಟಲ್‌ ಮೂಲಕ ಸುದ್ದಿಯಾಗಿರುವ ಸಿನೆಮಾ “ಆಯೆ ಏರ್‌?’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆ. ಮಂಜುನಾಥ್‌ ಅವರದ್ದು ವಿಶೇಷವಾಗಿ ಗಮನ ಸೆಳೆಯುವಂತಹ ಕೆಲಸವನ್ನು ಈ ಸಿನೆಮಾದಲ್ಲಿ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಮಂಜುನಾಥ್‌ ಅವರದ್ದು. ಸಿನೆಮಾದ ನಿರ್ದೇಶನದ ಜವಾಬ್ದಾರಿಯೂ ಇವರದ್ದೇ ಅಗಿದೆ.

ಶ್ರೀಕಾಂತ್‌ ರೈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನುಸುತ್ತಿದ್ದಾರೆ. ಅರವಿಂದ ಬೋಳಾರ್‌ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಭರ್ಜರಿ ನಗುವಿಗೆ ಇಲ್ಲಿ ಯಥೇತ್ಛ ಅವಕಾಶವಿದೆ. ಕೋಸ್ಟಲ್‌ವುಡ್‌ನ‌ ಪ್ರಮುಖ ಕಲಾವಿದರು ನಟಿಸಿದ್ದಾರೆ. ಕೆಲವು ಹೊಸ ಪ್ರತಿಭಾನ್ವಿತ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಭರ್ಜರಿ ಮನರಂಜನೆ ಖಚಿತ ಎಂದು ಚಿತ್ರ ತಂಡ ಹೇಳುತ್ತಿದೆ. ಸಂಗೀತದಲ್ಲಿ ಶ್ರೀಧರ ದೀಕ್ಷಿತ್‌ (ಅರುಣ್‌), ಛಾಯಾಗ್ರಹಣದಲ್ಲಿ ಶ್ರೀನಿವಾಸನ್‌, ಸಂಕಲನದಲ್ಲಿ ಕಾರ್ತಿಕ್‌, ನೃತ್ಯದಲ್ಲಿ ವಿಕ್ರಮ್‌ ಅವರ ದುಡಿದಿದ್ದಾರೆ. ಟೋನಿ ಅವರು ಸಹ ನಿರ್ದೇಶಕರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ