“ಆಟಿಡೊಂಜಿ ದಿನ’ ನಡೆದಿದ್ದು ಏನು?

Team Udayavani, Dec 5, 2019, 4:05 AM IST

ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ. ಚಳಿಯ ಮಧ್ಯೆಯೇ ಆಟಿಡೊಂಜಿ ದಿನದ ಕಥೆ ಕರಾವಳಿ ಹಾಗೂ ದೇಶ-ವಿದೇಶದಲ್ಲಿ ಪ್ರದರ್ಶನಗೊಳ್ಳಲಿದೆ.

ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿರುವ ಬೆರಳೆಣಿಕೆ ಸಿನೆಮಾಗಳ ಪೈಕಿ “ಆಟಿಡೊಂಜಿ ದಿನ’ ಕೂಡ ಒಂದಾಗಿರುವುದರಿಂದ ಸಿನೆಮಾದ ಬಗ್ಗೆ ಈಗಲೇ ಕುತೂಹಲ ಶುರುವಾಗಿದೆ. ರಾಧಾಕೃಷ್ಣ ನಾಗರಾಜು ಮತ್ತು ಚೈತ್ರಾ ರಾಧಾಕೃಷ್ಣ ಚಿತ್ರ ನಿರ್ಮಿಸಿದ್ದು, ಆಕಾಶ್‌ ಹಾಸನ್‌ ಸಹನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರು.

ಚಿತ್ರದ ನಿರ್ಮಾಪಕ ರಾಧಾಕೃಷ್ಣ ನಾಗರಾಜು ಹೇಳುವ ಪ್ರಕಾರ “ಆಟಿಡೊಂಜಿ ದಿನ’ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್‌ ಕೊಣಾಜೆಕಲ್ಲು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಎ.ಎಸ್‌.ವೈಭವ್‌ ಪ್ರಶಾಂತ್‌ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅತ್ಯುತ್ತಮ ರೀತಿಯಲ್ಲಿ ಸಿನೆಮಾ ಮೂಡಿಬಂದಿದೆ’ ಎನ್ನುತ್ತಾರೆ.

ಎ.ಎಸ್‌.ವೈಭವ್‌ ಪ್ರಶಾಂತ್‌ ಮಾತನಾಡಿ, “ಆಟಿಯಲ್ಲಿ ಒಂದು ದಿನ ನಡೆಯುವ ಕಥೆಯನ್ನು ಆಧರಿಸಿ ಈ ಸಿನೆಮಾ ತಯಾರಿಸಲಾಗಿದೆ. ಆ ಮೂಲಕ ಸಿನೆಮಾ ಮಾಡಬೇಕು ಎಂದು ಹ್ಯಾರಿಸ್‌ ಕೊಣಾಜೆಕಲ್ಲು ಅವರ ಕನಸನ್ನು ನನಸು ಮಾಡಲಾಗುತ್ತಿದೆ. ಪೃಥ್ವಿ ಅಂಬರ್‌ ನಾಯಕ ನಟನಾಗಿ, ನಿರೀûಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ನವೀನ್‌ ಡಿ. ಪಡೀಲ್‌, ವಾಸು ಮಲ್ಪೆ, ಶ್ರದ್ಧಾ ಸಾಲಿಯಾನ್‌, ದೀಪಕ್‌ ರೈ ಪಾಣಾಜೆ, ಅನಿಲ್‌ ರಾಜ್‌, ವಿಶ್ವನಾಥ್‌ ಮೂಡಬಿದ್ರೆ, ಸೂರಜ್‌ ಸಾಲ್ಯಾನ್‌, ಸುರೇಂದ್ರ ಕುಮಾರ್‌ ಹೆಗ್ಡೆ, ಶೈಲಶ್ರೀ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಹಾಡಿದ್ದಾರೆ. ಇದೇ ವಾರದಲ್ಲಿ ಸಿನೆಮಾ ತೆರೆಕಾಣಲಿದೆ’ ಎನ್ನುತ್ತಾರೆ.

“ಆಟಿಡೊಂಜಿ ದಿನ’ದ ಕಥೆ ಏನು? ಅಂದಾಗ ಉತ್ತರ ನೀಡಲು ನಿರಾಕರಿಸುವ ಚಿತ್ರತಂಡ, ಪ್ರೇಕ್ಷಕರು ತೆರೆಯ ಮೇಲೆಯೇ ನೋಡಿದರೆ ಗೊತ್ತಾಗಲಿದೆ ಎಂದು ನಗು ಬೀರುತ್ತಾರೆ.

ಚಿತ್ರದ ಛಾಯಾಗ್ರಹಣ: ನರೇಂದ್ರ ಗೌಡ, ಕಥೆ-ಚಿತ್ರಕಥೆ: ಹ್ಯಾರಿಸ್‌ ಕೊಣಾಜೆಕಲ್‌, ಆಕಾಶ್‌ ಹಾಸನ, ಸಹ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕ: ಆಕಾಶ್‌ ಹಾಸನ, ಸಂಕಲನ: ಶ್ರೀನಿವಾಸ್‌ ಪಿ. ಬಾಬು ಮತ್ತು ಮೆವಿನ್‌ ಜೋಯಲ್‌ ಪಿಂಟೋ, ಸಾಹಿತ್ಯ-ಸಂಗೀತ: ರಾಜೇಶ್‌ ಭಟ್‌ ಮೂಡಬಿದಿರೆ, ಹಿನ್ನಲೆ ಸಂಗೀತ: ಎಸ್‌.ಪಿ.ಚಂದ್ರಕಾಂತ್‌, ನಿರ್ಮಾಣ ನಿರ್ವಹಣೆ: ಸತೀಶ್‌ ಬ್ರಹ್ಮಾವರ್‌, ಕಲಾ ನಿರ್ದೇಶನ: ಹರೀಶ್‌ ಆಚಾರ್ಯ, ವಸ್ತ್ರಾಲಂಕಾರ: ವಲ್ಲಿ , ವರ್ಣಾಲಂಕಾರ: ಜಗದೀಶ್‌, ನಿರ್ದೇಶನ ಸಹಾಯ: ಕೆ. ಜಗದೀಶ್‌ ರೆಡ್ಡಿ, ಸಂದೀಪ್‌ ಬಾರಾಡಿ , ನವೀನ್‌ ನೆರೋಳ್ತಾಡಿ.

-  ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ