ದೇಶ ಸುತ್ತು ಕೋಶ ಓದು

ಇಂದು ವಿಶ್ವ ಪ್ರವಾಸೋದ್ಯಮ ದಿನ

Team Udayavani, Sep 27, 2019, 6:00 AM IST

ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿ ಕೇಳದವರಿಲ್ಲ. ಜೀವನಾನುಭವ ಸಿಗುವುದೇ ದೇಶ ಸುತ್ತಿದಾಗ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸ-ಯಾತ್ರೆಗಳ ಪಾತ್ರ ದೊಡ್ಡದು. ಪ್ರವಾಸ ಎಂದರೆ ಹೊಸ ಜಗತ್ತಿನ ಮುಖಾಮುಖೀಯೆಂದೇ ಅರ್ಥ. ಮನೋರಂಜನೆ, ಶೈಕ್ಷಣಿಕ ಪ್ರವಾಸವೇ ಆಗಿರಬಹುದು. ಅವುಗಳು ನಮ್ಮೊಳಗೆ ತುಂಬುವ ಹೊಸ ಉತ್ಸಾ ಸಣ್ಣದಲ್ಲ.

ಇಂದು ವಿಶ್ವ ಪ್ರವಾಸೋದ್ಯಮ ದಿನ. ಹಾಗಾಗಿ ದೇಶದ 25 ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿ ಕೊಟ್ಟಿದ್ದೇವೆ. ಜತೆಗೆ ಅಲ್ಲಿನ ವಿಶಿಷ್ಟತೆ ಏನು ಎಂಬುದನ್ನೂ ವಿವರಿಸಿದ್ದೇವೆ. ಜೀವನದಲ್ಲಿ ಒಮ್ಮೆ ನೋಡಿ ಬರಬೇಕೆನಿಸುವ ತಾಣಗಳಲ್ಲಿ ಕೆಲವೇ ಕೆಲವು ಇವು.

ಮನಾಲಿ

ಮನಾಲಿ ಹಿಮಾಚಲ ಪ್ರದೇಶದ ಭವ್ಯವಾದ ಪ್ರವಾಸಿ ತಾಣ. ರಾಷ್ಟ್ರದಲ್ಲಿ ಅತೀ ಹೆಚ್ಚು ಜನ ಸಂದರ್ಶಿಸುವ ತಾಣವಿದು. ಬಿಯಾಸ್‌ ನದಿ ದಡದಲ್ಲಿರುವ ಈ ಊರಿನ ಸುತ್ತಲೂ ಹಿಮ ಶಿಖರಗಳೇ. ಸೋಲಾಂಗ್‌ ಕಣಿವೆ, ಪಾರ್ವತಿ ಕಣಿವೆ, ಪಿರ್‌ ಪಾಂಚಾಲಿ ಪರ್ವತಗಳನ್ನು ನೋಡಲೇಬೇಕು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಆಯ್ಕೆಯೂ ಇವೇ. ಚಾರಣ, ಸಿನಿಮಾ ಚಿತ್ರೀಕರಣಕ್ಕೆ ಈ ಪ್ರದೇಶ ಖ್ಯಾತಿ.

ವಿಶೇಷತೆ:  ಪ್ಯಾರಾಗ್ಲೆ„ಡಿಂಗ್‌, ರಾಪೆಲ್ಲಿಂಗ್‌, ಟ್ರಕ್ಕಿಂಗ್‌, ಹಿಮಾಲಾಯನ್‌ ರಾಷ್ಟ್ರೀಯ ಉದ್ಯಾನವನ ಸಂದರ್ಶನ, ರಿವರ್‌ ರಾಫ್ಟಿಂಗ್‌ ಮೊದಲಾದವುಗಳಿಗೆ ಸೂಕ್ತ.

ಸೂಕ್ತ ಸಮಯ:  ಅಕ್ಟೋಬರ್‌-ಫೆಬ್ರವರಿ ತಿಂಗಳು. ಜನವರಿಯಲ್ಲಿ ಮಂಜು ಆವರಿಸಿರುತ್ತದೆ. ಅದೂ ಒಂದು ಬಗೆಯ ವಿಶಿಷ್ಟ ಅನುಭವ ನೀಡುವಂಥದ್ದು.

ಋಷಿಕೇಶ

ಈ ತಾಣ ಇರುವುದು ಉತ್ತರಾಖಂಡ್‌ ರಾಜ್ಯದ ಹೃದಯ ಭಾಗದಲ್ಲಿ. ಗಂಗಾ ನದಿ ದಡದಲ್ಲಿರುವ ನಗರವಿದು. ವರ್ಷ ಪೂರ್ತಿ ಜನ ಜಂಗುಳಿ. ಈ ಊರೇ ಪ್ರಸಿದ್ಧವಾಗಿರುವುದು ರಿವರ್‌ ರಾಫ್ಟಿಂಗ್‌. ಇದನ್ನು ನಿರ್ವಹಿಸುವ ನೂರಾರು ತಂಡಗಳಿವೆ. ಒಂದು ಬಗೆಯಲ್ಲಿ ಧಾರ್ಮಿಕ ಸ್ಥಳವಾಗಿಯೂ ಹಾಗೂ ಸಾಹಸಪ್ರಿಯರ ತಾಣವಾಗಿಯೂ ಇದು ಹೆಸರುವಾಸಿ. ಹಾಗೆ ಎರಡೂ ಭಿನ್ನ ವಯೋಮಾನದವರಿಗೆ ಇಷ್ಟವಾಗುವ ಅಪರೂಪದ ಸ್ಥಳಗಳಲ್ಲಿ ಇದೂ ಒಂದು.

ವಿಶೇಷತೆ: ರಿವರ್‌ ರಾಫ್ಟಿಂಗ್‌, ನದಿ ದಡದಲ್ಲಿ ಕ್ಯಾಂಪ್‌ಗ್ಳನ್ನು ಹಾಕಿ ವಾಸಿಸಬಹುದು. ಬಂಗಿ ಜಂಪಿಂಗ್‌, ಪ್ಲೆ„ಯಿಂಗ್‌ ಪಾಕ್ಸ್‌ ಇತ್ಯಾದಿ ಸಾಹಸ ಕ್ರೀಡೆಗಳಿಗೆ ಅವಕಾಶ.

ಸೂಕ್ತ ಸಮಯ: ಮಾರ್ಚ್‌-ಎಪ್ರಿಲ್‌, ಸೆಪ್ಟೆಂಬರ್‌-ನವೆಂಬರ್‌.ಮೇ ಮತ್ತು ಜೂನ್‌ನಲ್ಲಿ 35 ಡಿಗ್ರಿ ಸೆ.ಗಿಂತ ಹೆಚ್ಚು ಉಷ್ಣಾಂಶ ಇರುತ್ತದೆ.

ಚಾದರ್‌ ಟ್ರೆಕ್‌

ಥ್ರಿಲ್ಲಿಂಗ್‌ ಪ್ರವಾಸಿ ತಾಣಗಳ ಪೈಕಿ ಚಾದರ್‌ ಟ್ರೆಕ್‌ ಒಂದು. ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ ಈ ತಾಣವಿದು. ಸುಮಾರು 100 ಕಿ.ಮೀ. ದೂರವನ್ನು ಹಲವು ದಿನಗಳ ಕಾಲ್ನಡಿಗೆಯಲ್ಲಿ ಸೇರುವುದು ಅತ್ಯಂತ ರೋಮಾಂಚನಕಾರಿ ಅನುಭವ. ಕಲ್ಲುಗಳು ಮತ್ತು ಮಂಜುಗಡ್ಡೆಯಿಂದ ಕೂಡಿರುವ ಈ ಚಾದರ್‌ ಟ್ರೆಕ್‌ ಬದುಕಿನಲ್ಲಿ ನವೋಲ್ಲಾಸವನ್ನು ತುಂಬುವಂಥದ್ದು. ಇಲ್ಲಿ ಅಲ್ಲಿನ ಹವಾಮಾನವನ್ನು ಆಧರಿಸಿಯೇ ಯೋಜನೆ ರೂಪಿಸಿಕೊಳ್ಳಬೇಕು.

ವಿಶೇಷತೆ: ಚಾರಣಕ್ಕೆ ಹೇಳಿ ಮಾಡಿಸಿದ ತಾಣ.

ಸೂಕ್ತ ಸಮಯ : ಜನವರಿ ಮತ್ತು ಫೆಬ್ರವರಿ.

ಅಂಡಮಾನ್‌ ನಿಕೋಬಾರ್‌

572 ದ್ವೀಪಗಳಲ್ಲಿ ಅಂಡಮಾನ್‌ ಪ್ರತಿಯೊಬ್ಬರ ಕನಸಿನ ತಾಣ. ಈ ದ್ವೀಪದಲ್ಲಿನ ಕರಾವಳಿ ಯಾವತ್ತೂ ಶಾಂತವಾಗಿರುತ್ತದೆ ಎಂಬ ಮಾತಿದೆ. ಕಣ್ಣಳತೆಯುದ್ದಕ್ಕೂ  ಆವರಿಸಿಕೊಳ್ಳುವ ನೀಲಸಾಗರವೇ ಇಲ್ಲಿನ ಆಕರ್ಷಣೆ. ಇದರೊಂದಿಗೆ ಬ್ರಿಟಿಷ್‌ ಸರಕಾರ ಸ್ವಾತಂತ್ರ್ಯಚಳುವಳಿಗಾರರಿಗೆ ಆಮರಣಾಂತ ಜೈಲುವಾಸ ವಿಧಿಸಿ ಕಳುಹಿಸುತ್ತಿದ್ದುದು ಇಲ್ಲಿನ ಸೆಲ್ಯುಲರ್‌ ಜೈಲ್‌ಗೆ. ಅದಕ್ಕೇ ಇದನ್ನು ಕರಿನೀರ ಶಿಕ್ಷೆ ಎಂದೂ ಕರೆಯಲಾಗುತ್ತಿತ್ತು. ಈಗ ಸೆಲ್ಯುಲರ್‌ ಜೈಲ್‌ ರಾಷ್ಟ್ರೀಯ ಸ್ಮಾರಕವಾಗಿದೆ.

ವಿಶೇಷತೆ: ಸ್ಕೂಬಾ ಡೈವಿಂಗ್‌, ಸ್ನಾಕ್ಲಿìಂಗ್‌, ಜೆಟ್‌ ಸ್ಕೀಯಿಂಗ್‌, ಪ್ಯಾರಾಸೈಲಿಂಗ್‌, ಬೋಟಿಂಗ್‌ ಇತ್ಯಾದಿ.  ಸದಾ ತಂಗಾಳಿ ಬೀಸುತ್ತಿರುವ ದ್ವೀಪದಲ್ಲಿ ಚಾರಣಕ್ಕೆ ಅವಕಾಶ ಇದೆ.

ಸೂಕ್ತ ಸಮಯ : ಸರ್ವ ಋತು (ಯಾವುದೇ ದಿನದಲ್ಲೂ ಬರಬಹುದು).

ಪ್ಯಾಗೊಂಗ್‌ ಸರೋವರ

ಇದು ಲಡಾಕ್‌ನಲ್ಲಿನ ಸರೋವರ. ಲಡಾಕ್‌ನ ಅತೀ ದೊಡ್ಡ ಪ್ರವಾಸಿ ತಾಣವೂ ಹೌದು. ಈ ಸರೋವರದ ಶೇ. 60 ಭಾಗವಿರುವುದು ಟಿಬೆಟ್‌ನ ಭಾಗದಲ್ಲಿ. ಚಳಿಗಾಲದಲ್ಲಿ ಇಡೀ ಸರೋವರ ಹಿಮದ ಮೈದಾನವಾಗುತ್ತದೆ.  ಅತ್ಯಂತ ಸುಂದರವಾದ ಈ ಸರೋವರವೂ ಬಣ್ಣ ಬದಲಾಯಿಸುವುದುಂಟು. ಇಲ್ಲಿಗೆ ಹಲವು ಪಕ್ಷಿಗಳು ವಲಸೆ ಬರುವುದುಂಟು.

ವಿಶೇಷತೆ: ಪ್ಯಾಗೊಂಗ್‌ ದಡದಲ್ಲಿ ಸ್ಕೂಟಿ ರೈಡಿಂಗ್‌, ನುಬ್ರದಲ್ಲಿ ಒಂಟೆ ಸವಾರಿ, ಝಾನ್ಸ$Rರ್‌ನಲ್ಲಿ ರಾಫ್ಟಿಂಗ್‌ ಮಾಡಬಹುದು.

ಸೂಕ್ತ ಸಮಯ: ಮೇ-ಸೆಪ್ಟೆಂಬರ್‌.

ಮೌಂಟ್‌ ಅಬು

ಇದು ರಾಜಸ್ಥಾನದಲ್ಲಿರುವ ತಾಣ. ಇಲ್ಲಿನ ನಿಕ್ಕಿ ಸರೋವರದ ನೀರೇ ನೋಡಲು ಸೊಗಸು. ಅತ್ಯಂತ ಶುಭ್ರ. ಅರಾವಳಿ ಬೆಟ್ಟಗಳು ಚಾರಣಕ್ಕೆ ಹೆಸರುವಾಸಿ. ಅತೀ ಶೀತದಿಂದ ಕೂಡಿದ ವಲಯ ಇದು. ಸುತ್ತಲೂ ಕಾಡುಗಳು ಆವರಿಸಿವೆ. ಜತೆಗೆ ಗುರು ಶಿಖರ್‌, ದಿಲ್ವಾರ ದೇವಸ್ಥಾನ ಮತ್ತು ಅಚಲ್‌ಗ‌ರ್‌ ಕೋಟೆ ಸದಾ ನೆನಪಿನಲ್ಲಿ ಉಳಿಯುವಂಥದ್ದು.

ವಿಶೇಷತೆ: ರಾಕ್‌ ಕ್ಲೈಬಿಂಗ್‌, ಹೆಲಿಕಾಪ್ಟರ್‌ ರೈಡ್ಸ್‌, ಕ್ಯಾಪಿಂಗ್‌, ಟ್ರೆಕ್ಕಿಂಗ್‌, ಬೋಟಿಂಗ್‌.

ಸೂಕ್ತ ಸಮಯ : ಮಳೆಗಾಲ ಪ್ರಸಕ್ತ. ಜತೆಗೆ ಜುಲೈ-ಸೆಪ್ಟೆಂಬರ್‌ ಸಹ ಸೂಕ್ತ.

ಗೋವಾ

ಗೋವಾ ಸದಾ ಪ್ರವಾಸಿಗರಿಗೇ ಅಚ್ಚುಮೆಚ್ಚಿನ ತಾಣ. ದೇಶದ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡುವಾಗ ಇದನ್ನು ಬಿಡುವಂತೆಯೇ ಇಲ್ಲ. ಬೀಚ್‌ ಟೂರಿಸಂ ಇಲ್ಲಿನ ವಿಶೇಷ. ಇಲ್ಲಿ ಹಲವಾರು ಬೀಚ್‌ಗಳಿವೆ, ಒಂದೊಂದೂ ತನ್ನದೇ ಆದ ವಿಶಿಷ್ಟ ಸೊಗಸನ್ನು ಹೊಂದಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ತಾಣ. ಕೋಟೆಗಳು, ಮ್ಯೂಸಿಯಂಗಳು ಮತ್ತು ಚರ್ಚ್‌ಗಳೂ ಇಲ್ಲಿವೆ.

ವಿಶೇಷತೆ: ಜಲಕ್ರೀಡೆ, ಮೀನುಗಾರಿಕೆ, ಕ್ರೂಸ್‌ ಟೂರಿಸಂ.

ಸೂಕ್ತ ಸಮಯ : ಸರ್ವ ಋತು. ಅದರಲ್ಲೂ ನವೆಂಬರ್‌-ಮಾರ್ಚ್‌ ಆಹ್ಲಾದಕರ ಹವಾಮಾನದ ಸಮಯ.

ಗೋಕರ್ಣ

ಗೋಕರ್ಣವೂ ಬಹಳ ಪ್ರಸಿದ್ಧ ತಾಣ. ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇಗುಲ ಒಂದು ಕಡೆಯಾದರೆ, ಇನ್ನು ಪ್ರವಾಸಿಗರನ್ನು ಕೈ ಬೀಸಿ ಕರೆಯುವುದು ಇಲ್ಲಿನ ವಿಶಿಷ್ಟ ಬೀಚ್‌ಗಳು. ಹಾಗಾಗಿ ಇದನ್ನು ಒಂದು ರೀತಿಯಲ್ಲಿ “ಮಿನಿ ಗೋವಾ’ ಎಂದು ಕರೆಯುವುದುಂಟು. ಗೋವಾದಲ್ಲಿರುವ ಎಲ್ಲಾ ಮನೋರಂಜನೆಗಳು ಇಲ್ಲಿ ಇದ್ದು, ಸುತ್ತಲೂ ರಮಣೀಯ ತೆಂಗಿನ ತೋಟಗಳಿವೆ. ಓಂ ಬೀಚ್‌, ಗೋಕರ್ಣ ಬೀಚ್‌ ಮತ್ತು ಕುಡ್ಲೆ ಬೀಚ್‌ ಹೆಸರುವಾಸಿ.

ವಿಶೇಷತೆ: ಬೀಚ್‌ ಟ್ರಕ್ಕಿಂಗ್‌, ವಾಟರ್‌ ನ್ಪೋರ್ಟ್ಸ್, ಶಾಪಿಂಗ್‌, ಯೋಗ, ಬೋನ್‌, ಫೈರ್‌ಕ್ಯಾಂಪ್‌ಗ್ಳು.

ಸೂಕ್ತ ಸಮಯ : ಜೂನ್‌-ಅಗಸ್ಟ್‌ ಮಳೆಗಾಲ ಚೆಂದ. ಜತೆಗೆ ಅಕ್ಟೋಬರ್‌-ಮಾರ್ಚ್‌ ತಿಂಗಳೂ ಯೋಗ್ಯ.

ಹಂಪಿ

ಹಂಪಿ ಇಲ್ಲೇ ಇದೆಯಲ್ಲ ಎನಿಸಬಹುದು. ಆದರೂ ನೋಡದಿರುವ ಸಾಧ್ಯತೆಗಳೇ ಹೆಚ್ಚು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಹಂಪಿ. ಇದು ವಿಶ್ವಸಂಸ್ಥೆಯ ಪಾರಂಪರಿಕ ತಾಣ.ಇಲ್ಲಿನ ವಿರೂಪಾಕ್ಷ ದೇಗುಲ, ಕಡಳೆಕಾಳು ಗಣಪ, ಸಾಸಿವೆಕಾಳು ಗಣಪ, ಉಗ್ರ ನರಸಿಂಹ, ಅಕ್ಕ ತಂಗಿ ಕಲ್ಲು ಎಲ್ಲವೂ ಜಗತ್‌ ಪ್ರಸಿದ್ಧಿ ಪಡೆದವು. ಹಂಪಿಯ ಕಲ್ಲಿನ ರಥ, ಪುರಂದರ ಮಂಟಪದ ಸೊಗಸು ಅನುಭವಿಸಲೇಬೇಕು.

ವಿಶೇಷತೆ: ರೋಯಿಂಗ್‌ ಕೋರಾಕಲ್ಸ್‌, ಬೈಕ್‌ ರೈಡ್‌, ಕ್ಲಿಫ್ ಜಂಪಿಂಗ್‌ ಮೊದಲಾದವುಗಳಿವೆ.

ಸೂಕ್ತ ಸಮಯ : ಅಕ್ಟೋಬರ್‌-ಫೆಬ್ರವರಿ.

ಪಾಂಡಿಚೇರಿ

ಫ್ರೆಂಚರು ಆಡಳಿತ ನಡೆಸುತ್ತಿದ್ದ ಈ ಪ್ರದೇಶವನ್ನು ಹಿಂದೆ “ಪಾಂಡಿ’ ಎಂದು ಕರೆಯಲಾಗುತ್ತಿತ್ತು. ಇಂದು ಅದು ಪಾಂಡಿಚೇರಿ ಅಥವಾ ಪುದುಚೇರಿ. ಕೇಂದ್ರಾಡಳಿತ ಪ್ರದೇಶ. ಇಲ್ಲಿನ ಕಟ್ಟಡಗಳು ಫ್ರೆಂಚ್‌ ಶೈಲಿಯಿಂದ ಕೂಡಿದವು. “ಟೌನ್‌ ಪ್ಲಾನಿಂಗ್‌’ ಸಹ ಅದೇ ಮಾದರಿಯದ್ದು. ಮಹರ್ಷಿ ಅರವಿಂದರ ಆಶ್ರಮ ಇಲ್ಲಿದೆ. ಇಲ್ಲಿನ ಸಮುದ್ರ ತೀರವೂ ಸೊಗಸಿನದು.

ವಿಶೇಷತೆ:  ವಾಟರ್‌ ನ್ಪೋರ್ಟ್ಸ್, ಸನ್‌ ಬಾತಿಂಗ್‌, ಬೈಸಿಕಲ್‌ ಟೂರ್‌ಗೆ ಯೋಗ್ಯ. ಫ್ರೆಂಚ್‌ ಪಾಕ ಪದ್ದತಿಯ ಖಾದ್ಯಗಳು, ಭಾರತೀಯ, ಇಟಲಿ, ಮೆಕ್ಸಿಕನ್‌, ಥಾç ಮತ್ತು ಚೈನೀಸ್‌ ಶೈಲಿಯ ತಿಂಡಿ ತಿನಿಸು ಇಲ್ಲಿ ಲಭ್ಯ.

ಸೂಕ್ತ ಸಮಯ : ಅಕ್ಟೋಬರ್‌-ಮಾರ್ಚ್‌. ಎಪ್ರಿಲ್‌-ಜೂನ್‌ ವರೆಗೆ 40 ಡಿಗ್ರಿ ಸೆಲ್ಸಿಯಸ್‌ ವರೆಗೂ ಉಷ್ಣಾಂಶ ಏರುವುದುಂಟು.

ಸ್ಪಿಟಿ ಕಣಿವೆ

ಸ್ಪಿಟಿ ಕಣಿವೆ ಇಂಡೋ ಟಿಬೆಟ್‌ ಪ್ರಾಂತ್ಯದಲ್ಲಿನ ಮರುಭೂಮಿ ಪರ್ವತ. ಇದನ್ನು “ಲಿಟ್ಲ ಟಿಬೆಟ್‌’ ಎಂದೂ ಕರೆಯುತ್ತಾರೆ. ª ಹಿಮಾಚಲ ಪ್ರದೇಶದ ಉತ್ತರ ಭಾಗದಲ್ಲಿದೆ. ಇಲ್ಲಿನ ದಾಂಧರ್‌ ಮತ್ತು ಲಾಲುಂಗ್‌ ಸರೋವರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಕಣಿವೆಗಳು ಮಂಜು ಮುಸುಕಿದ್ದು, ಹಸುರಿನ ಪ್ರಕೃತಿಯ ಸಾಲನ್ನು ಹೊಂದಿರುವುದು ಆಹ್ಲಾದಕರ ಅನುಭವ ನೀಡುತ್ತದೆ.

ವಿಶೇಷತೆ: ನಕ್ಷತ್ರ ವೀಕ್ಷಣೆ, ಫಾಸಿಲ್‌ ಹಂಟಿಂಗ್‌, ಶಿಬಿರ ನಿವಾಸ . ದಾಂದರ್‌ ಲೇಕ್‌ಅನ್ನು ತಪ್ಪಿಸುವಂತಿಲ್ಲ.

ಸೂಕ್ತ ಸಮಯ : ಎಪ್ರಿಲ್‌-ಜುಲೈ.

ಕೌರಿ ಪಾಸ್‌ ಟ್ರೆಕ್‌

ಗೆಳೆಯರೊಂದಿಗೆ ಟ್ರಕ್ಕಿಂಗ್‌ ಹೋಗಲು ನೀವು ನಿರ್ಧರಿಸಿದ್ದರೆ ಉತ್ತರಾಖಂಡ್‌ನ‌ ಹಿಮಾಲಯದ ತಪ್ಪಲಿನಲ್ಲಿರುವ ಕೌರಿ ಪಾಸ್‌ಗೆ ತೆರಳಲೇಬೇಕು. ದೇಶದ ಉತ್ತಮ ಹಿಮಾಲಯನ್‌ ಟ್ರಕ್ಕಿಂಗ್‌ ಮಾರ್ಗ ಇದು. ಲಘು ಎತ್ತರ ಇರುವ ಈ ಚಾರಣ ತುಂಬಾ ಆಯಾಸಗೊಳಿಸುವುದಿಲ್ಲ. ಸುಸ್ತಾದಂತೆ ಕಂಡು ಬಂದರೂ ನಿಸರ್ಗದ ಸೌಮ್ಯತೆ ಮತ್ತು ಭವ್ಯತೆ ನಮ್ಮೊಳಗೆ ಉತ್ಸಾಹ ತುಂಬುತ್ತದೆ.

ವಿಶೇಷತೆ: ಸಸ್ಯ ಕಾಶಿಯ ಸೊಗಸು, ಚಾರಣಕ್ಕೆ ಹೇಳಿ ಮಾಡಿಸಿದ ಜಾಗ.ಕ್ಯಾಂಪ್‌ ಮಾಡುವವರಿಗೆ ಮನಮೋಹಕ ಪ್ರದೇಶ.

ಸೂಕ್ತ ಸಮಯ : ಎಪ್ರಿಲ್‌-ಜುಲೈ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ.

ನೈನಿತಾಲ್‌

ಉತ್ತರಾಖಂಡದ ರತ್ನ ನಗರಿ ಎಂದೇ ಕರೆಯಲ್ಪಡುವ ನೈನಿತಾಲ್‌ ಆಕರ್ಷಣೀಯ ಗಿರಿಧಾಮ. ಇಲ್ಲಿನ ಸರೋವರವಂತೂ ಜಗತ್ಪ್ರಸಿದ್ಧ. ಕುಮಾನ್‌ ಪರ್ವತ ಶ್ರೇಣಿಗಳಿಂದ ಕೂಡಿದ್ದು, ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳದ ಸುತ್ತ ಇರುವ ಹಸಿರಿನ ಹೊದಿಕೆಯೇ ಕಣ್ಣಿಗೆ ಸೊಗಸು. ಈ ನಗರಕ್ಕೆ ಸರೋವರಗಳ ಜಿಲ್ಲೆ ಎಂಬ ಮಾತೂ ಇದೆ. ಯಾಕೆಂದರೆ ಇಲ್ಲಿ ನೈನಿತಾಲ್‌ ಅಲ್ಲದೇ ಇನ್ನೂ ಹಲವು ಸರೋವರಗಳಿವೆ.

ವಿಶೇಷತೆ: ಸರೋವರ ವೀಕ್ಷಣೆ, ಕುದುರೆ ಸವಾರಿ ಹಾಗೂ ದೋಣಿ ವಿಹಾರ, ಪಕ್ಷಿಧಾಮ, ರಾಷ್ಟ್ರೀಯ ಉದ್ಯಾನವನ. ಅಲಂಕಾರ ಪ್ರಿಯರಿಗೆ ಬಾರಾ ಬಜಾರ್‌ಇದೆ.

ಸೂಕ್ತ ಸಮಯ : ಮಾರ್ಚ್‌-ಜೂನ್‌ ತಿಂಗಳು ನೈನಿತಾಲ್‌ ಸೌಂದರ್ಯವನ್ನು ತುಂಬಿಕೊಳ್ಳಲು ಸೂಕ್ತ.

ಶಿಮ್ಲಾ

ದೇವಭೂಮಿ ಎಂದೇ ಕರೆಯಲಾಗುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸಮುದ್ರ ಮಟ್ಟದಿಂದ 2,200 ಮೀಟರ್‌ ಎತ್ತರದಲ್ಲಿದೆ. ತಂಪು ಹವೆ, ಅದ್ಭುತ ನಿಸರ್ಗ ಸೌಂದರ್ಯವೇ ಇಲ್ಲಿನ ವಿಶೇಷ. ಈಗ ಆಧುನಿಕ ಸ್ಪರ್ಶ ಪಡೆದರೂ ಗತಕಾಲವೈಭವವನ್ನು ನೆನಪಿಸುವ ನಗರಿ.

ವಿಶೇಷತೆ: ಗಿರಿಧಾಮ, ಚಾರಣ, ಸ್ಕೀಯಿಂಗ್‌, ಮೌಂಟೇನ್‌ ಬೈಕಿಂಗ್‌, ಐಸ್‌ಸ್ಕೇಟಿಂಗ್‌, ರಿವರ್‌ರಾಫ್ಟಿಂಗ್‌.

ಸೂಕ್ತ ಸಮಯ : ಎಪ್ರಿಲ್‌-ಜೂನ್‌ ಅತ್ಯಂತ ಯೋಗ್ಯ.

ಕಸೋಲ್‌

ಹಿಮಾಚಲ ಪ್ರದೇಶದ ಕಸೋಲ್‌ ಹಿಮಚ್ಛಾದಿತ ಪರ್ವತ, ನದಿಗಳ ಸೊಬಗು ಪ್ರವಾಸಿಗರನ್ನು ಸೆಳೆಯುತ್ತವೆ. ಕಸೋಲ್‌ ಯುವಜನರ ನೆಚ್ಚಿನ ತಾಣ.ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಯುವಜನರ ಸಂಖ್ಯೆ ಹೆಚ್ಚುತ್ತಿರುವುದೇ ಈ ಮಾತಿಗೆ ಪುಷ್ಟಿ ನೀಡಿದೆ.

ವಿಶೇಷತೆ: ಹಲವಾರು ಚಾರಣ ಸ್ಥಳಗಳಿವೆ, ಫೈರ್‌ ಕ್ಯಾಂಪ್‌ನ ಅನುಭವ ಅತ್ಯಂತ ಆಹ್ಲಾದಕರ.

ಸೂಕ್ತ ಸಮಯ : ಏಪ್ರಿಲ್‌-ನವೆಂಬರ್‌.

ಲೋನಾವಾಲ

ಮುಂಬಯಿ ಮತ್ತು ಪುಣೆ ಹೆದ್ದಾರಿ ಮಧ್ಯದಲ್ಲಿ ಹಸಿರು ಬೆಟ್ಟಗಳಿಂದ ಆವೃತವಾಗಿರುವ ಗಿರಿಧಾಮ. ಕಡಿದಾದ ಮಂಜು ಮುಸುಕಿದ ಬೆಟ್ಟಗಳು, ಕಣಿವೆಗಳು, ಜಲಪಾತಗಳೇ ಇಲ್ಲಿನ ಆಕರ್ಷಣೆ. ಜತೆಗೆ ಐತಿಹಾಸಿಕ ಹಿನ್ನಲೆಯೂ ಇದೆ. ಬಾಜಾ, ಕಾರ್ಲಾ, ಏಕವೀರ ದೇವಾಲಯ ನಾಗಫ‌ಣ-ಡ್ಯುಕ್ಸ್‌ ನೋಸ್‌ ಸೇರಿದಂತೆ ಹಲವರು ಪ್ರಸಿದ್ಧ ಸ್ಥಳಗಳು ಇಲ್ಲಿದೆ. ಖಂಡಾಲಾ-ಲೋನಾವಾಲ ಅವಳಿ ಗಿರಿಧಾಮಗಳು.

ವಿಶೇಷತೆ: ಸರೋವರಗಳು, ಚಾರಣ ಯೋಗ್ಯ ಪರ್ವತಗಳು, ಗಿರಿಧಾಮ.

ಸೂಕ್ತ ಸಮಯ : ಅಕ್ಟೋಬರ್‌ – ಮೇ

ರಣ್‌ ಆಫ್ ಕಚ್‌

ಈ ಸ್ಥಳವನ್ನು ಗ್ರೇಟ್‌ ರಣ್‌ ಆಫ್ ಕಚ್‌ ಎನ್ನುತ್ತಾರೆ. ಇದು ಗುಜರಾತಿನಲ್ಲಿರುವ ನೀಡಲೇಬೇಕಾದ ಸ್ಥಳ. ಸುಮಾರು 10,000 ಚದರ ಕಿ.ಮೀ ಗಿಂತಲೂ ದೊಡ್ಡದಾದ  ಉಪ್ಪಿನ ಮರುಭೂಮಿ. ಬಹುಭಾಗ ನಮ್ಮ ದೇಶದಲ್ಲಿದ್ದರೆ, ಸ್ವಲ್ಪ ಭಾಗ ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿದೆ.ಈ ಸ್ಥಳದ ವಿಶೇಷವೆಂದರೆ ಒಂದೆಡೆ ಮರುಭೂಮಿ, ಮತ್ತೂಂದೆಡೆ ಸಮದ್ರ ತೀರ.

ವಿಶೇಷತೆ: ನವೆಂಬರ್‌ನಿಂದ ಮಾರ್ಚ್‌ವರೆಗೆ ನಡೆಯುವ ರಣ್‌ ಉತ್ಸವ.

ಸೂಕ್ತ ಸಮಯ : ನವೆಂಬರ್‌-ಮಾರ್ಚ್‌.

ಸಿಕ್ಕಿಂ

ಹಿಮದ ರಸ್ತೆಯಲ್ಲಿ ಪಯಾಣ. ಜತೆಗೆ ನದಿಗಳ ನಿನಾದ. ಇದೇ ಸಿಕ್ಕಿಂ ವಿಶೇಷ. ಚಾಂಗ್‌ ಸರೋವರ, ಬಾಬಾ ಹರಭಜನ್‌ ಮಂದಿರ, ಲಾಚುಂಗ್‌ ಸಿಕ್ಕಿಂ ಮತ್ತಿತರ ಸ್ಥಳಗಳು ಇಲ್ಲಿನ ಪ್ರಮುಖ ವಿಶೇಷ.

ವಿಶೇಷತೆ: ಇಲ್ಲಿನ ತಿನಿಸು ಮೊಮೋಸ್‌ ಬಹಳ ಪ್ರಸಿದ್ಧ.

ಸೂಕ್ತ ಸಮಯ : ಮಾರ್ಚ್‌-ಅಕ್ಟೋಬರ್‌

ಡಾರ್ಜಿಲಿಂಗ್‌

ಪರ್ವತ ಶ್ರೇಣಿಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಇದು ಸಮುದ್ರ ಮಟ್ಟದಿಂದ ಸುಮಾರು 2,050 ಅಡಿ ಎತ್ತರ ಪ್ರದೇಶದಲ್ಲಿದೆ. ಸುತ್ತ ಹಸಿರುವ ವನರಾಶಿ, ಭವ್ಯ ಬೌದ್ಧಲಾಯಗಳಿವೆ. ಚಹಾದ ತೊಟ್ಟಿಲೂ ಸಹ.

ವಿಶೇಷತೆ: ಕಾಂಚನಜುಂಗ ಪರ್ವತದಲ್ಲಿನ ಅರುಣೋದಯ, ಟಾಯ್‌ಟ್ರೈನ್‌ ಹಾಗೂ ವಿಶಿಷ್ಟ ಚಹಾ.

ಸೂಕ್ತ ಸಮಯ : ಮಾರ್ಚ್‌ನಿಂದ ಆಗಸ್ಟ್‌

ಕೊಡಗು

ದೇಶದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಕರ್ನಾಟಕದ ಸ್ಥಳಗಳಲ್ಲಿ ಕೊಡಗೂ ಒಂದು. ಮಡಿಕೇರಿ ಕೋಟೆ, ಅರಮನೆ, ಅಬ್ಬಿ ಜಲಪಾತ, ರಾಜಾಸೀಟ್‌, ದುಬಾರೆ ಹಾಗೂ ಓಂಕಾರೇಶ್ವರ ದೇವಾಲಯಗಳು ಇಲ್ಲಿನ ಪ್ರಮುಖ ಆಕರ್ಷಣೆ.

ವಿಶೇಷತೆ: ರಮಣೀಯ ಕಾಫಿ ತೋಟಗಳು, ಬೆಟ್ಟ ಗುಡ್ಡಗಳು, ಸದಾ ಆವರಿಸಿಕೊಳ್ಳುವ ಮಂಜು ಇಲ್ಲಿನ ವಿಶೇಷ.

ಸೂಕ್ತ ಸಮಯ : ಅಕ್ಟೋಬರ್‌-ಮಾರ್ಚ್‌ . ಬಳಿಕವೂ ಮೇ ವರೆಗೂ ತೆರಳಬಹುದು.

ಮುನ್ನಾರ್‌

ಇಡುಕ್ಕಿ ಜಿÇÉೆಯಲ್ಲಿರುವ ಮುನ್ನಾರ್‌ ಮನಮೋಹಕ ಗಿರಿಧಾಮ. ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮುನ್ನಾರ್‌ ಎಂದರೆ ಮೂರು ನದಿಗಳು ಎಂದರ್ಥ. ಈ ಪ್ರಾಂತ್ಯವು ಮಧುರಪುಳ, ನಲ್ಲತಣ್ಣಿ ಮತ್ತು ಕುಂಡಲಿ ಎಂಬ ಮೂರು ನದಿಗಳು ಹರಿಯುವ ವಿಶಿಷ್ಟವಾದ ಪ್ರದೇಶ. ಚಹಾ ತೋಟಗಳು ಇಲ್ಲಿನ ಮತ್ತೂಂದು ಆಕರ್ಷಣೆ.

ವಿಶೇಷತೆ: ಚಾರಣಿಗರಿಗೆ ಮತ್ತು ಬೈಕ್‌ ಸವಾರರಿಗೆ ಉತ್ತಮ ಸ್ಥಳ. ಟೀ ತೋಟಗಳ ನಡುವಿನ ದೀರ್ಘ‌ ನಡಿಗೆ ಮನಸ್ಸಿಗೆ ಉಲ್ಲಾಸ ತುಂಬುವಂಥದ್ದು.

ಸೂಕ್ತ ಸಮಯ : ಜನವರಿ-ಮಾರ್ಚ್‌ ಸೂಕ್ತ. ಚಳಿಯ ಸವಿಯನ್ನು ಸವಿಯುವವರು ಚಳಿಗಾಲದಲ್ಲೂ ತೆರಳಬಹುದು.

ಲೇಹ್‌

ಲೇಹ್‌ ಅನ್ನು ಲಡಾಖ್‌ನ ಹಿಮಾಲಯಗಳ ಕಿಂಗ್‌ ಡಮ್‌ ಎನ್ನುತ್ತಾರೆ. ತನ್ನ ಸೌಂದರ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ತಾಣವಿದು. ಬೌದ್ಧರಿಗಂತೂ ಅತ್ಯಂತ ಪ್ರಿಯ. ಲೇಹ್‌- ಹಿಮ ಆವರಿಸಿದ ಪರ್ವತ ಶ್ರೇಣಿ, ಶುಭ್ರ ಸರೋವರಗಳಿಗೇ ಪ್ರಸಿದ್ಧ.

ವಿಶೇಷತೆ: ಟಿಬೆಟಿಯನ್‌ ಕರಕುಶಲ ವಸ್ತುಗಳು, ಬೆಳ್ಳಿಯೊಡವೆಗಳು, ರಗ್‌ಗಳು, ಕಾಪೆìಟ್‌ಗಳಿಗೆ ಹೆಸರುವಾಸಿ.

ಸೂಕ್ತ ಸಮಯ : ಎಪ್ರಿಲ್‌-ಮೇ ತಿಂಗಳು ಅತ್ಯಂತ ಯೋಗ್ಯ.

ಊಟಿ

ದಕ್ಷಿಣ ಭಾರತದ ರಾಣಿ ಎಂದೇ ಕರೆಸಿಕೊಳ್ಳುವ ಊಟಿ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣ.  ಗಿರಿಧಾಮವಾಗಿದ್ದು, ಇಲ್ಲಿನ ಬೊಟಾನಿಕಲ್‌ ಗಾರ್ಡನ್‌, ಕುಕನೂರಿನ ಟಾಯ್‌ ಟ್ರೈನ್‌ ಹಾಗೂ ಆ ರೈಲು ಮಾರ್ಗ ರಮಣೀಯ ತಾಣಗಳು. ಗಳು, ಚಾರಣ ಸ್ಥಳಗಳು ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಾಗಿದ್ದು, ಸ್ನೇಹಿತರೊಂದಿಗೆ ಭೇಟಿ ನೀಡಲು ಈ ಸ್ಥಳ ಹೇಳಿ ಮಾಡಿಸಿದ ಹಾಗೆ ಇದೆ.

ವಿಶೇಷತೆ : ಚಾರಣ, ದೋಣಿ ವಿಹಾರ, ನಿಸರ್ಗ ವಿಹಾರ.

ಸೂಕ್ತ ಸಮಯ : ನವೆಂಬರ್‌-ಫೆಬ್ರವರಿ. ಉಳಿದ ಸಮಯವೂ ಹೋಗಬಹುದು. ಚಳಿಗಾಲ ಒಳ್ಳೆಯದು.

ಲಕ್ಷದ್ವೀಪ

ಲಕ್ಷದ್ವೀಪವು ಭಾರತದ ಪ್ರಮುಖ ಭಾಗವಾಗಿದ್ದು,  ಈಗ ಪ್ರಚಲಿತದಲ್ಲಿರುವ ‘ಲಕ್ಷದ್ವೀಪ,’ ಒಂದು ಕಾಲದಲ್ಲಿ  “ಲಖದೀವ್‌’,”ಮಿನಿಕೋಯ…’ ಮತ್ತು ‘ಅಮಿನ್‌ ದಿವಿ’ ದ್ವೀಪಗಳು ಎಂದು ಕರೆಯಲಾಗುತ್ತಿತ್ತು, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹ. ನಿಸರ್ಗ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು.

ವಿಶೇಷತೆ : ಜಲಕ್ರೀಡೆ, ಸ್ಕೂಬಾ ಡ್ರೈವಿಂಗ್‌ ಇತ್ಯಾದಿ.

ಸೂಕ್ತ ಸಮಯ: ಅಕ್ಟೋಬರ್‌-ಮೇ.

ಹಂಪ್ತಾ ಪಾಸ್‌ ಟ್ರೆಕ್‌

ಬೆಟ್ಟ-ಗುಡ್ಡ ಪ್ರೇಮಿಗಳಿಗೆ ಹಂಪ್ತಾ ಪಾಸ್‌ ಟ್ರೆಕ್‌ ನೆಚ್ಚಿನ ತಾಣ. ಚಾರಣ ಪ್ರೇಮಿಗಳಿಗೆ ಹೊಸ ಅನುಭವ ಒದಗಿಸುವ ತಾಣ. ಸುಮಾರು 14 ಸಾವಿರ ಅಡಿ ಎತ್ತರ ಇರುವ ಪರ್ವತ ಶ್ರೇಣಿಗಳ ನಡುವೆ ಹಂಪ್ತಾ ಸರೋವರ ಇದೆ. ಅದೂ ಸಹ ಇಲ್ಲಿನ ವಿಶೇಷ.

ವಿಶೇಷತೆ : ಚಾರಣ, ಫೈರ್‌ ಕ್ಯಾಂಪ್‌, ನಿಸರ್ಗ ವೀಕ್ಷಣೆ.

ಸೂಕ್ತ ಸಮಯ : ಜೂನ್‌- ಅಕ್ಟೋಬರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜೋಗ ಜಲಪಾತವನ್ನು ಗೆಸ್ಟ್‌ ಹೌಸ್‌ ಭಾಗದಿಂದ ವೀಕ್ಷಿಸುವುದು ಇನ್ನೊಂದು ಅಪೂರ್ವ ಅನುಭವ. ಸೂರ್ಯ ಮೋಡಗಳ ಮರೆಯಲ್ಲೇ ಕಡಲಿನೆಡೆಗೆ ಸರಿಯುತ್ತ ಬಾನಂಗಳದಲ್ಲಿ ಬಣ್ಣಗಳ...

  • ತುಳು ಸಿನೆಮಾ ರಂಗದಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ "ಗಿರಿಗಿಟ್‌' ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಯಾರೂ ನಿರೀಕ್ಷಿಸದ ಸಾಧನೆ ಮಾಡಿದೆ. ಕರಾವಳಿ ಹಾಗೂ ಬೇರೆ...

  • ರಂಗಭೂಮಿ, ತುಳು ಸಿನೆಮಾ ಹಾಗೂ ಕಿರುತೆರೆ ಮೂಲಕ ಹೆಸರು ಮಾಡಿದ ಕರಾವಳಿ ಹುಡುಗ ಶೋಭರಾಜ್‌ ಪಾವೂರು ಇದೀಗ ತುಳು ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಎದುರಾಗುತ್ತಿದ್ದಾರೆ....

  • "ತುಳು ನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ "ಅರ್ಕಾಡಿ ಬರ್ಕೆ'. ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ...

  • ಕೋಸ್ಟಲ್‌ವುಡ್‌ನ‌ಲ್ಲಿ ಸದ್ದಿಲ್ಲದೆ ಶೂಟಿಂಗ್‌ ಆದ ಸಿನೆಮಾ "ಕಾರ್ನಿಕೊದ ಕಲ್ಲುರ್ಟಿ' ಸಿನೆಮಾ. ತುಳು ನಾಡಿನ ಕಾರಣಿಕದ ದೈವವಾದ ಕಲ್ಲುರ್ಟಿಯ ಕುರಿತಾಗಿ ಮೂಡಿಬಂದಿರುವ...

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...